Monday, October 14, 2024
Homeರಾಜಕೀಯ | Politicsಸಿಎಂ ಆಗುವುದಾದರೆ ಸತೀಶ್ ಜಾರಕಿಹೊಳಿಯವರನ್ನು ಬೆಂಬಲಿಸುತ್ತೇವೆ : ಬಿಜೆಪಿ ಶಾಸಕ ವಿಠಲ್ ಬೆಂಬಲ

ಸಿಎಂ ಆಗುವುದಾದರೆ ಸತೀಶ್ ಜಾರಕಿಹೊಳಿಯವರನ್ನು ಬೆಂಬಲಿಸುತ್ತೇವೆ : ಬಿಜೆಪಿ ಶಾಸಕ ವಿಠಲ್ ಬೆಂಬಲ

We will support Satish Jarakiholi if he becomes CM : Vithal Somanna Halagekar

ಬೆಳಗಾವಿ, ಸೆ.11- ಲೋಕಾಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುಖ್ಯ ಮಂತ್ರಿಯಾಗುವುದಾದರೆ ಅದು ಸಂತೋಷದ ವಿಚಾರ. ಅವರು ಪಕ್ಷತೀತವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಬಿಜೆಪಿ ಶಾಸಕ ವಿಠಲ್ ಸೋಮಣ್ಣ ಹಲಗೇಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕದ ವ್ಯಕ್ತಿ ಮುಖ್ಯಮಂತ್ರಿಯಾದರೆ, ಅದರಲ್ಲೂ ನಮ ಜಿಲ್ಲೆಯವರಾದರೆ ಪಕ್ಷ ಬೇದ ಮರೆತು, ಅಭಿವೃದ್ದಿ ಕೆಲಸಗಳಾಗುತ್ತವೆ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದಾರೆ. ಅವರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ ಎಂದರು.

ಸತೀಶ್ ಜಾರಕಿಹೊಳಿ ನಮಗೂ ಆತಿಯರಾಗಿರುವುದರಿಂದ ಅವರು ಮುಖ್ಯಮಂತ್ರಿಯಾದರೆ ಸಹಜವಾಗಿಯೇ ನನಗೆ ಖುಷಿಯಾಗುತ್ತದೆ. ತಾವು ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದು, ಖಾನಾಪುರ ಕ್ಷೇತ್ರದ ಬಗ್ಗೆ ವ್ಯಾಪಕ ಪರಿಚಯವಿದೆ ಅಭಿವೃದ್ದಿಗೆ ಹೆಚ್ಚು ಕೆಲಸ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ 136 ಶಾಸಕರ ಬೆಂಬಲ ಇದೆ. ಹೀಗಾಗಿ ನಮ ಬೆಂಬಲದ ಅಗತ್ಯ ಇಲ್ಲ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಎಂದು ಹೇಳಿದಾಕ್ಷಣ ಬೇರೆ ಏನೋ ರಾಜಕೀಯ ನಡೆಯುತ್ತದೆ ಎಂಬ ವಿಶ್ಲೇಷಣೆ ಅನಗತ್ಯ. ಮುಖ್ಯಮಂತ್ರಿ ಬದಲಾವಣೆಗೆ ಕಾಂಗ್ರೆಸ್ನಲ್ಲಿರುವ ಬೆಂಬಲವೇ ಸಾಕು. ನಾವು ವೈಯಕ್ತಿಕವಾಗಿ ಖುಷಿ ಪಡುತೇವೆ ಎಂದು ಹೇಳಿದರು.

RELATED ARTICLES

Latest News