Sunday, October 6, 2024
Homeರಾಷ್ಟ್ರೀಯ | Nationalಸಂಸದರು,ಶಾಸಕರಿದ್ದ ದೋಣಿ ಪಲ್ಟಿ, ಎಲ್ಲರೂ ಪ್ರಾಣಾಪಾಯದಿಂದ ಪಾರು

ಸಂಸದರು,ಶಾಸಕರಿದ್ದ ದೋಣಿ ಪಲ್ಟಿ, ಎಲ್ಲರೂ ಪ್ರಾಣಾಪಾಯದಿಂದ ಪಾರು

West Bengal: Boat Carrying MPs, MLA Capsizes In Birbhum; Search For Missing Officer Underway

ಕೋಲ್ಕತ್ತಾ,ಸೆ.19– ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆಂದು ತೆರಳಿದ್ದಾಗ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಬಿರ್‌ಭೂಮ್‌ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸುವ ವೇಳೆ ಈ ಅವಘಡ ಸಂಭವಿಸಿದೆ.

ದೋಣಿಯಲ್ಲಿ ಸಂಸದರು, ಶಾಸಕರು, ಉನ್ನತ ಅಧಿಕಾರಿಗಳು ಸೇರಿ ಒಟ್ಟು 13 ಮಂದಿ ಇದ್ದರು. ಲಾಬ್‌ಪುರ್‌ನ ಟಿಎಂಸಿ ಶಾಸಕ ಅಭಿಜಿತ್‌ ಸಿಂಗ್‌, ಸಂಸದರಾದ ಅಸಿತ್‌ ಮಲ್‌ ಮತ್ತು ಶಮೀರುಲ್‌ ಇಸ್ಲಾಂ, ಬಿರ್‌ಭೂಮ್‌ನ ಜಿಲ್ಲಾ ವ್ಯಾಜಿಸ್ಟ್ರೇಟ್‌ ಬಿಧನ್‌ ರಾಯ್‌ ಮತ್ತು ಇತರ ಅಧಿಕಾರಿಗಳು ಬೋಟ್‌ನಲ್ಲಿ ಬೀರ್‌ಭಮ್‌ನ ಬಲರಾಮ್‌ಪುರ ಮತ್ತು ಲ್ಯಾಬ್‌ಪುರದ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಘಟನೆಯ ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಅಧಿಕಾರಿಗಳನ್ನು ರಕ್ಷಿಸಿದರು. ಭಾರೀ ಮಳೆಯ ನಂತರ ಪಶ್ಚಿಮ ಬಂಗಾಳದ ಹಲವಾರು ಜಿಲ್ಲೆಗಳು ಪ್ರವಾಹದಂತಹ ಪರಿಸ್ಥಿತಿಗೆ ಸಾಕ್ಷಿಯಾಗಿದೆ ಮತ್ತು ಇದರ ಪರಿಣಾಮವಾಗಿ ಅಲ್ಪಾವಧಿಯಲ್ಲಿಯೇ ಬ್ಯಾರೇಜ್‌ಗಳಿಂದ ನೀರು ಹೊರಸೂಸುವಿಕೆ ಹೆಚ್ಚಾಗಿದೆ.

ಭಾರೀ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ದುರ್ಗಾಪುರ ಬ್ಯಾರೇಜ್‌ನಿಂದ 1,33,750 ಕ್ಯೂಸೆಕ್‌, ಕಂಗಸಾಬತಿ ಅಣೆಕಟ್ಟಿನಿಂದ 40,000 ಕ್ಯೂಸೆಕ್‌್ಸ, ಮೈಥಾನ್‌ ಅಣೆಕಟ್ಟಿನಿಂದ 2,00,000 ಕ್ಯೂಸೆಕ್‌ ಮತ್ತು ಪಂಚೇಟ್‌ ಅಣೆಕಟ್ಟಿನಿಂದ 50,000 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ.

RELATED ARTICLES

Latest News