Wednesday, May 21, 2025
Homeಅಂತಾರಾಷ್ಟ್ರೀಯ | Internationalಕರೋನಾ ತಡೆಗಟ್ಟಲು WHO ಒಪ್ಪಂದ

ಕರೋನಾ ತಡೆಗಟ್ಟಲು WHO ಒಪ್ಪಂದ

WHO adopts landmark pandemic pact

ಜಿನೀವಾ,ಮೇ 21– ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಭೀಕರ ಕೊರೋನಾ ವೈರಸ್‌‍ನ ಮುಂದಿನ ಪಿಡುಗು ಉದ್ಭವವಾದಲ್ಲಿ ಉತ್ತಮವಾಗಿ ಅದನ್ನು ತಡೆಗಟ್ಟುವ, ಪ್ರತಿಕ್ರಿಯಿಸಲು ಸನ್ನದ್ಧವಾಗುವ ಕುರಿತು ಒಪ್ಪಂದವೊಂದನ್ನು ಇಂದು ಅಂಗೀಕರಿಸಿದವು. ಡಬ್ಲ್ಯೂಹೆಚ್‌ಓದ ವಾರ್ಷಿಕ ಅಸೆಂಬ್ಲಿಯ ಆತಿಥ್ಯ ವಹಿಸಿದ್ದ ಜಿನೀವಾ ಹಾಲ್‌ನಲ್ಲಿ ಮೂರು ವರ್ಷಗಳಿಂದ ರೂಪಿಸಿ ಚರ್ಚಿಸುತ್ತಿದ್ದ ಈ ಒಪ್ಪಂದಕ್ಕೆ ಅವಿರೋಧ ಅಂಗೀಕಾರ ದೊರೆಯಿತು.

ವೈರಸ್‌‍ನ ಮಾದರಿ ಕಾಣಿಸಿಕೊಳ್ಳುವ ದೇಶಗಳಲ್ಲಿ ಪರೀಕ್ಷೆಗಳನ್ನು ನಡೆಸುವುದನ್ನು ಔಷಧಿ ಮತ್ತು ಲಸಿಕೆಗಳ ವಿತರಣೆಯನ್ನು ಈ ಒಪ್ಪಂದವು ಖಾತರಿಪಡಿಸುತ್ತದೆ. ಇಂಥ ಉತ್ಪನ್ನಗಳ ಶೇ.20 ರಷ್ಟನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಬಡರಾಷ್ಟ್ರಗಳು ಇವುಗಳನ್ನು ಪಡೆಯವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನೀಡಲಾಗುತ್ತದೆ.

ಈ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಸ್‌‍ ಆಧೇನೋಮ್‌ ಘಬ್ರೆಯೇಸುಸ್‌‍ ಅವರು ಹಂಚಿಕೊಂಡ ಮೌಲ್ಯಗಳು ಮತ್ತು ಸಹಕಾರಗಳ ದೃಷ್ಟಿಯಿಂದ ಅನೇಕ ರಾಷ್ಟ್ರಗಳು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿರುವಾಗ ಇದು ಒಂದು ಬಹುಪಕ್ಷೀಯ ಒಪ್ಪಂದವಾಗಿದೆ ಎಂದಿದ್ದಾರೆ.

ಈ ಒಪ್ಪಂದ ಯಶಸ್ವಿಯಾಗುವುದು ಅನುಮಾನಾಸ್ಪದವಾಗಿದೆ. ಕೋವಿಡ್‌-19 ಲಸಿಕೆಗಳನ್ನು ಅಭಿವೃದ್ಧಿಪಡಿಸಲು ನೂರಾರು ಕೋಟಿ ಡಾಲರ್‌ಗಳನ್ನು ಹರಿಸಿದ ಅಮೆರಿಕ ಹೊರಗಿರುವುದು ಮತ್ತು ಕೋವಿಡ್‌-19 ಅನ್ನು ನಿರ್ಲಕ್ಷಿಸುವ ದೇಶಗಳಿಗೆ ದಂಡನೆ ಇಲ್ಲದಿರುವುದು ಇದಕ್ಕೆ ಕಾರಣ. ವಿಶ್ವ ಆರೋಗ್ಯ ಸಂಸ್ಥೆಗೆ ಪ್ರಮುಖ ದೇಣಿಗೆ ನೀಡುವ ಸಾಂಪ್ರದಾಯಿ ರಾಷ್ಟ್ರವಾಗಿರುವ ಅಮೆರಿಕವು ಡಬ್ಲ್ಯೂಹೆಚ್‌ಓದಿಂದ ಹೊರನಡೆಯುವುದಾಗಿ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರು ಘೋಷಿಸಿದ ಬಳಿಕ ಈ ಒಪ್ಪಂದದ ಭಾಗವಾಗಿಲ್ಲ.

RELATED ARTICLES

Latest News