ಹುಬ್ಬಳ್ಳಿ,ಅ.19: ಬೆಳಗಾವಿಗೆ ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೆಳಗಾವಿಯ ಕಾರ್ಯಕ್ರಮಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಗೈರು ಕುರಿತು ವಿಶೇಷ ಅರ್ಥ ಕಲ್ಪಿಸುವುದು ಬೇಡಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗಾರರ ಜೊತೆಗೆ ಇಂದು ಮಾತನಾಡಿದ ಅವರು, ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಬೇರೆ ಬೇರೆ ಹೊಣೆ ಕೊಟ್ಟಿರಬಹುದು. ಬೇರೆ ಬೇರೆ ಪ್ರವಾಸ ಕಾರ್ಯಕ್ರಮ ಇರಬಹುದು ಯಾವುದೋ ವಿಷಯ ಯಾವುದಕ್ಕೋ ಲಿಂಕ್ ಬೇಡಾ ಎಂದರು.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-10-2023)
ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ತಮ್ಮ ಭೇಟಿ ವಿಚಾರ ಕುರಿತು ಮಾತನಾಡಿದ ಅವರು, ಇದೊಂದು ಸಹಜ ಭೇಟಿ ಅಷ್ಟೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ನಾವು ಭೇಟಿ ಆಗೋದು ಮೊದಲ ಸಲ ಅಲ್ಲ. ರಮೇಶ್ ಜಾರಕಿಹೊಳಿ ನನಗೆ ಮೊದಲಿನಿಂದಲೂ ಆಪ್ತರು. ವೈಯಕ್ತಿಕವಾಗಿ ನಮ್ಮ ಜೊತೆಗೆ ಒಳ್ಳೆಯ ಸಂಬಂಧ ಇದೆ ಕ್ಯಾಸುವಲ್ ಭೇಟಿ ಆದೆವು ಎಂದ ಅವರು, ಈ ಸಂದರ್ಭದಲ್ಲಿ ಯಾವುದೇ ರೀತಿಯ ರಾಜಕೀಯ ಚರ್ಚೆ ಆಗಿಲ್ಲ.
ನಾನು ಭಾರತೀಯ ಜನತಾ ಪಕ್ಷದಲ್ಲಿ ಇದ್ದಾಗ ಮೇಲಿಂದ ಮೇಲೆ ಭೇಟಿ ಆಗುತ್ತಿದ್ದವು ಅವರು ನಮ್ಮ ಮನೆಗೂ ಬಂದು ಹೋಗಿದ್ದಾರೆಬೆಂಗಳೂರಲ್ಲಿ ಸಾಕಷ್ಟು ಸಲ ಭೇಟಿ ಆಗಿದ್ದಾರೆ.ಭಾರತೀಯ ಜನತಾ ಪಕ್ಷದಲ್ಲಿ ಅಸಮಾಧಾನವಿದ್ದ ಬಗ್ಗೆ ನನ್ನ ಜೊತೆಗೆ ಮಾತನಾಡಿಲ್ಲ. ಅವರ ಭೇಟಿ ಕುರಿತು ನಾನು ಈಗಾಗಲೇ ಹೇಳಿದ್ದೇನೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಲು ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರ ಕೊಡಲು ಸಮರ್ಥರು. ನಾನು ಏನು ಹೇಳಲು ಇದು ಸರಿಯಲ್ಲ ಇದಕ್ಕೆ ಅರ್ಥವೇ ಇಲ್ಲ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‍ಗೆ ಹೇಗೆ ಉತ್ತರ ಕೊಡಬೇಕು ಗೊತ್ತು ಅವರು ಅದಕ್ಕೆ ಏನು ಹೇಳಬೇಕು ಹೇಳುತ್ತಾರೆ ಎಂದರು.
ಇದೇ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಶಾಸಕ ಲಕ್ಷ್ಮಣ ಸವದಿ ನೇಮಕ ಕುರಿತು ಚರ್ಚೆ ವಿಷಯ ಕುರಿತು ಕೇಳಿದ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಯಾರು ಎಲ್ಲಿಯೋ ಚರ್ಚೆ ಮಾಡಿಲ್ಲ. ನಿಮಗೆ ಯಾರು ಹೇಳಿದ್ದು ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.