Monday, February 26, 2024
Homeರಾಜ್ಯತವರಿಗೆ ಕಳಿಸಲು ಒಪ್ಪದ ಪತಿ, ನೊಂದ ಪತ್ನಿ ಆತ್ಮಹತ್ಯೆ

ತವರಿಗೆ ಕಳಿಸಲು ಒಪ್ಪದ ಪತಿ, ನೊಂದ ಪತ್ನಿ ಆತ್ಮಹತ್ಯೆ

ನೆಲಮಂಗಲ ಡಿ.24- ತವರು ಮನೆಗೆ ಹೋಗಲು ಪತಿ ಅವಕಾಶ ನೀಡದಿದ್ದ ಹಿನ್ನೆಲೆಯಲ್ಲಿ ನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪವಿತ್ರ (28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾಳೆ. ಮೂಲತಃ ತುಮಕೂರಿನ ಹುಳಿಯಾರು ಪಟ್ಟಣದ ಪವಿತ್ರ ಅವರು ಕಳೆದ ಎರಡೂವರೆ ವರ್ಷಗಳ ಹಿಂದೆ ಹಿರಿಯೂರು ಮೂಲದ ಚೇತನ್ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೀಗ 11 ತಿಂಗಳ ಗಂಡು ಮಗು ಇದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೇತನ್‍ಗೆ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ರಜೆ ಸಿಕ್ಕಿರಲಿಲ್ಲ. ಈ ನಡುವೆ ತನ್ನ ಸಂಬಂಧಿಕರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಪವಿತ್ರ ತವರು ಮನೆಗೆ ಹೋಗೋಣ ಎಂದು ಹೇಳಿದ್ದಳು.

ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಸಿದ ನೂತನ ಪದಾಧಿಕಾರಿಗಳ ಪಟ್ಟಿ

ವಾರಾಂತ್ಯದಲ್ಲಿ ರಜೆ ಇರುವ ಕಾರಣ ತವರಿಗೆ ಹೋಗೋಣ ವೆಂದು ಪಟ್ಟು ಹಿಡಿದಾಗ ಜಗಳ ನಡೆದು, ಇದು ತಾರಕ್ಕಕ್ಕೇರಿತ್ತು. ಇದರಿಂದ ಚೇತನ್ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಹೋಗಿದ್ದರು. ಇದರಿಂದ ಆಕ್ರೋಶಗೊಂಡ ಪವಿತ್ರ ತನ್ನ ಕೋಣೆಗೆ ತೆರಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಡರಾತ್ರಿ ಮನೆಗೆ ಬಂದಾಗ ಪತ್ನಿ ನೇಣು ಹಾಕಿಕೊಂಡಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ವಿಚಾರಣೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News