Friday, July 4, 2025
Homeಬೆಂಗಳೂರುಖಾಸಗಿ ಬಸ್‌‍ ಡಿಕ್ಕಿಯಾಗಿ ಪತ್ನಿ ಸಾವು, ಪತಿ ಪಾರು

ಖಾಸಗಿ ಬಸ್‌‍ ಡಿಕ್ಕಿಯಾಗಿ ಪತ್ನಿ ಸಾವು, ಪತಿ ಪಾರು

Wife dies in private bus collision, husband survives

ಬೆಂಗಳೂರು,ಜು.4-ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಅತಿ ವೇಗವಾಗಿ ಬಂದ ಖಾಸಗಿ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಮೃತಪಟ್ಟು ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಹದೇವಪುರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಎ ನಾರಾಯಣಪುರದ ನಿವಾಸಿ ಮೇನಕಾ (61) ಮೃತಪಟ್ಟ ಮಹಿಳೆ.ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಎ ನಾರಾಯಣ ಪುರದಿಂದ ಪತಿ ಮಹದೇವಯ್ಯ ಅವರ ಜೊತೆ ಸ್ಕೂಟರ್‌ನಲ್ಲಿ ಮೇನಕಾ ಅವರು ಇಂದಿರಾನಗರಕ್ಕೆ ಹೋಗುತ್ತಿದ್ದರು.

ಹಳೆ ಮದ್ರಾಸ್‌‍ ರಸ್ತೆಯ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಅತಿ ವೇಗವಾಗಿ ಬಂದ ಖಾಸಗಿ ಬಸ್‌‍ ಇವರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಕೆಳಗೆ ಬಿದ್ದರು. ಮೇನಕಾ ಅವರಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಮಹದೇವಯ್ಯ ರವರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದು ಮಹದೇವಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಮೃತಹೇಹವನ್ನು ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News