ಬೆಂಗಳೂರು, ಅ.19- ಮಾನಸಿಕ ಕಿರುಕುಳ ನೀಡುತ್ತಿದ್ದ ಪತಿಯನ್ನೇ ಕೊಲೆಗೈದು, ಶವವನ್ನು ಪಿಟ್ ಗುಂಡಿಗೆ ಹಾಕಿದ್ದ ಚಾಲಾಕಿ ಪತ್ನಿ ಹಾಗೂ ಆಕೆಯ ಸಹೋದರಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಲೇಔಟ್‍ನಲ್ಲಿ ವಾಸವಾಗಿದ್ದ ಬಿಹಾರ ಮೂಲದ ಶಕೀಲ್ ಅಕ್ತರ್ ಸೈಪಿ ಎಂಬಾತನನ್ನು ಕೊಲೆ ಮಾಡಿದ್ದ ಆತನ ಪತ್ನಿ ನಜೀರ್ ಖಾಟುನ್ ಮತ್ತು ನಾದಿನಿ ಕಾಶ್ಮೀರಿ ಬಂಧಿತ ಆರೋಪಿಗಳು.
ಅ.10ರಿಂದ ಶಕೀಲ್ ಅಕ್ತರ್ ಸೈಪಿ ಕಾಣೆಯಾಗಿರುವುದಾಗಿ ಸಹೋದರ ಓಸಿ ಅಕ್ತರ್ ಸೈಪಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ಅ.14ರಂದು ಮುದಾಸಿರ್ ಎಂಬುವರು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಕೋಗಿಲು ಲೇಔಟ್‍ನಲ್ಲಿ ಹೊಗುತ್ತಿದ್ದಾಗ ಯಾವುದೋ ಪ್ರಾಣಿ ಸತ್ತು ಕೊಳೆತಿರುವ ರೀತಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಸೈಟಿನ ಹತ್ತಿರದ ಪಿಟ್ ಗುಂಡಿಯ ಮೇಲೆ ಮುಚ್ಚಿದ್ದ ಪ್ಲೇಟ್ ತೆರೆದು ನೋಡಿದಾಗ ಪಿಟ್ ಗುಂಡಿಯ ಒಳಗಡೆ ವ್ಯಕ್ತಿಯ ಶವವನ್ನು ಬೆಡ್ ಶೀಟ್‍ನಲ್ಲಿ ಮೂಟೆ ಕಟ್ಟಿ ಹಾಕಿರುವುದು ಕಂಡು ಬಂದಿದೆ.
ಸಾಕಲಾಗದೆ ಕಂದನನ್ನು ಕೆರೆಗೆ ಎಸೆದ ಕರುಣೆಯಿಲ್ಲದ ತಂದೆ
ತಕ್ಷಣ ಆ ವ್ಯಕ್ತಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪಿಟ್ ಗುಂಡಿಯಿಂದ ಶವವನ್ನು ಮೇಲಕ್ಕೆತ್ತಿ ಪರಿಶೀಲಿಸಿದಾಗ, ಈ ವ್ಯಕ್ತಿಯನ್ನು ಯಾರೋ ಯಾವುದೋ ಕಾರಣದಿಂದ ಎಲ್ಲಿಯೋ ಕೊಲೆ ಮಾಡಿ ಶವವನ್ನು ಬೆಡ್ ಶೀಟ್‍ನಲ್ಲಿ ಮೂಟೆ ಕಟ್ಟಿ ತೆಗೆದುಕೊಂಡು ಬಂದು ಈ ಟಾಯ್ಲೆಟ್ ಫಿಟ್ ಗುಂಡಿಯಲ್ಲಿ ಹಾಕಿರುವುದು ಗೊತ್ತಾಗಿದೆ.
ಈ ನಡುವೆ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಕೊಲೆಯಾಗಿರುವ ವ್ಯಕ್ತಿ ಈ ಹಿಂದೆ ಕಾಣೆಯಾಗಿದ್ದ ಶಕೀಲ್ ಅಕ್ತರ್ ಸೈಪಿ ಎಂಬುವುದು ಖಚಿತಪಡಿಸಿದ್ದಾರೆ. ನಂತರ ತನಿಖೆ ಕೈಗೊಂಡು ಮೃತ ವ್ಯಕ್ತಿಯ ಪತ್ನಿ ಹಾಗೂ ಆಕೆಯ ತಂಗಿಯನ್ನು ವಿಚಾರಿಸಿದಾಗ ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ.
ಶಕೀಲ್ ಅಕ್ತರ್ ಸೈಪಿ ತನ್ನ ಹೆಂಡತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತು ತನ್ನ ತಂಗಿಯೊಂದಿಗೆ ಸೇರಿಕೊಂಡು ಆತನ ಹೆಂಡತಿ ಮನೆಯಲ್ಲಿ ರಾತ್ರಿ ವೇಳೆ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿ, ಆತನ ಶವವನ್ನು ಬೆಡ್‍ಶೀಟ್‍ನಲ್ಲಿ ಸುತ್ತಿಕೊಂಡು ಬಂದು ಕೋಗಿಲು ಲೇಔಟ್ ಪಿಟ್ ಗುಂಡಿಯಲ್ಲಿ ಹಾಕಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್
ಈಶಾನ್ಯ ವಿಭಾಗದ ಉಪ-ಪೊಲೀಸ್‍ಆಯುಕ್ತರಾದ ಲಕ್ಷ್ಮಿಪ್ರಸಾದ ಅವರ ಮಾರ್ಗದರ್ಶನದಲ್ಲಿ ಮತ್ತು ಸಂಪಿಗೆಹಳ್ಳಿ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಮುರಗೇಂದ್ರಯ್ಯ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಹಾಗೂ ಈಶಾನ್ಯ ವಿಭಾಗದ ತಾಂತ್ರಿಕ ವಿಭಾಗದ ಸಿಬ್ಬಂದಿ ಈ ವಿಶೇಷ ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.