ಬೆಂಗಳೂರು, ಜ.17- ಪತ್ನಿಯನ್ನು ಕೊಂದು ಭಾವನಿಗೆ ಸಂದೇಶ ಕಳುಹಿಸಿ ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಆಗ್ನೇಯ ವಿಭಾಗದ ಮೂರು ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ.
ಕೊಲೆ ಆರೋಪಿ ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕೆ ಇದ್ದು, ತಂಡಗಳು ವಿವಿಧ ರಾಜ್ಯಗಳಿಗೆ ತೆರಳಿವೆ.
ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ನಾಸೀರ್ ಹುಸೇನ್ ಮತ್ತು ನಾಜ್ ಖಾನಂ(22) ತಾವರೇಕೆರೆ ಬಳಿಯ ಸುಭಾಷ್ ನಗರದ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು.
ಕಳೆದ ಭಾನುವಾರ ರಾತ್ರಿ ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಗಂಡ ಮತ್ತು ಹೆಂಡತಿ ನಡುವೆ ಜಗಳ ಉಂಟಾಗಿದೆ. ಒಂದು ಹಂತದಲ್ಲಿ ನಾಸೀರ್ ಹುಸೇನ್, ನಾಜ್ ಖಾನಂ ಅವರ ಕುತ್ತಿಗೆ ಹಿಸುಕಿ ಕೊಂದು ಅವರ ಅಣ್ಣನಿಗೆ ಸಂದೇಶ ಕಳುಹಿಸಿ ಪರಾರಿಯಾಗಿದ್ದಾನೆ.
ನಾಳೆಯಿಂದ 23ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ
ನಾಜ್ ಖಾನಂ ಅವರ ಪ್ರಿಯಕರನನ್ನು ಸಹ ಕೊಲೆ ಮಾಡುವುದಾಗಿ ಆರೋಪಿ ಸಂದೇಶದಲ್ಲಿ ತಿಳಿಸಿದ್ದಾನೆಂದು ಗೊತ್ತಾಗಿದೆ.ಸುದ್ದಿ ತಿಳಿದ ಸುದ್ದುಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೊಲೆ ಮುಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
wife, killed, husband, Bengaluru,