Monday, November 11, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು : ಗಂಡನ್ನು ದೊಣ್ಣೆಯಿಂದ ಹೊಡೆದು ಕೊಂದ ಹೆಂಡತಿ

ಚಿಕ್ಕಮಗಳೂರು : ಗಂಡನ್ನು ದೊಣ್ಣೆಯಿಂದ ಹೊಡೆದು ಕೊಂದ ಹೆಂಡತಿ

ಚಿಕ್ಕಮಗಳೂರು,ಮೇ.16- ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯೇ ದೊಣ್ಣೆಯಿಂದ ಪತಿಯನ್ನು ಥಳಿಸಿ ಕೊಲೆ ಮಾಡಿದ ಘಟನೆ ನಗರದ ಗೌರಿ ಕಾಲುನಿಯಲ್ಲಿ ನಡೆದಿದೆ. ರಾತ್ರಿ ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು ಮಾತಿಗೆ ಮಾತು ಬೆಳೆದು ಪತ್ನಿ ಭಾರತಿ ಮನೆಯಲ್ಲಿದ್ದ ದೊಣ್ಣೆಯಿಂದ ಹೊಡೆದು ಗಂಡ ಸುರೇಶ್‌(53)ನನ್ನು ಹತ್ಯೆ ಮಾಡಿದ್ದಾಳೆ.

20 ವರ್ಷಗಳ ಹಿಂದೆ ಮದುವೆಯಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಮರಗೆಲಸದ ವೃತ್ತಿ ಮಾಡುತ್ತಿದ್ದ ಸುರೇಶ್‌ ಒಳ್ಳೆಯ ಸಂಪಾದನೆ ಮಾಡುತ್ತಾ ಸುಖೀ ಸಂಸಾರವಿತ್ತು.

ಇತ್ತೀಚೆಗೆ ಮನೆಯಲ್ಲಿ ಗಂಡ- ಹೆಂಡತಿ ನಡುವೆ ವಿಪರೀತ ಜಗಳವಾಗುತ್ತತ್ತು ಮಕ್ಕಳು ಬಿಡಿಸುತ್ತಿದ್ದರು ಆದರೆ ಕಳೆದ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಪತಿ ಸುರೇಶ್‌ ಜೊತೆ ಭಾರತಿ ಹೊಡೆದಾಟಕ್ಕೆ ಇಳಿದಿದ್ದಾಳೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿ ಇದ್ದ ಮರದ ದೊಣ್ಣೆ ತೆಗೆದುಕೊಂಡು ಬಲವಾಗಿ ತಲೆಗೆ ಬಾರಿಸಿದ್ದಾಳೆ.

ಈ ವೇಳೆ ಕುಸಿದು ಬಿದ್ದ ಸುರೇಶ ತಲೆಗೆ ತೀವ್ರ ಪೆಟ್ಟಾಗಿ ಅಕ್ಕಪಕ್ಕದವರು ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಅಸುನೀಗಿದ್ದಾನೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ತಾಯಿ ಜೈಲು ಪಾಲಾಗಿದ್ದರೆ ಮಕ್ಕಳು ಅನಾಥರಾಗಿದ್ದಾರೆ.

RELATED ARTICLES

Latest News