ಬೆಂಗಳೂರು, ಫೆ.26- ವೃದ್ಧೆಯನ್ನು ಕೊಂದು ತುಂಡುತುಂಡಾಗಿ ಕತ್ತರಿಸಿ ಶವವನ್ನು ಡ್ರಮ್ ಒಳಗೆ ಹಾಕಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಕೆಆರ್ ಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಹಣಕ್ಕಾಗಿ ಪರಿಚಯಸ್ಥನೇ ತನ್ನ ಸಹಚರರ ಜೊತೆ ಸೇರಿ ವೃದ್ಧೆ ಹಾಗೂ ಬಿಜೆಪಿ ಕಾರ್ಯಕರ್ತೆಯೂ ಆಗಿದ್ದ ಸುಶೀಲಮ್ಮ(76) ಎಂಬುವವರನ್ನು ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆರೋಪಿಯು ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಾಲ ಮಾಡಿಕೊಂಡಿದ್ದನು. ಹಣಕ್ಕಾಗಿ ಈ ಕೊಲೆ ಮಾಡಿರುವುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ಕೆಆರ್‍ಪುರ ಸಮೀಪದ ನಿಸರ್ಗ ಲೇಔಟ್‍ನ ಅಪಾರ್ಟ್‍ಮೆಂಟ್‍ನಲ್ಲಿ ಕಳೆದ ಎಂಟು ವರ್ಷಗಳಿಂದ ಸುಶೀಲಮ್ಮ ವಾಸವಾಗಿದ್ದರು.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಸುಶೀಲಮ್ಮ ಅವರು ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕತೆಯಾಗಿದ್ದರು. ಊರಿನಲ್ಲಿದ್ದ ಆಸ್ತಿ ಮಾರಾಟ ಮಾಡಿ ಬಂದ ಹಣದಲ್ಲಿ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಂಡು ಈ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಸುಶೀಲಮ್ಮ ಅವರು ವಾಸವಿದ್ದ ಅದೇ ಕಟ್ಟಡದಲ್ಲಿ ಕಿರಿಯ ಪುತ್ರಿ ನೆಲೆಸಿದ್ದು, ಮನೆ ಸಮೀಪವೇ ಅವರ ಮಗ ಕೂಡ ವಾಸವಿದ್ದಾರೆ.
ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಗೆ ಎರಡೇ ದಿನ ಬಾಕಿ
ಈ ವೃದ್ಧೆ ಮಹಿಳೆ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಅಪಾರ್ಟ್‍ಮೆಂಟ್ ಪಕ್ಕದಲ್ಲಿದ್ದ ಪ್ಯಾಸೇಜ್ ಮಧ್ಯದಲ್ಲಿ ಖಾಲಿ ಡ್ರಮ್‍ನಲ್ಲಿ ಶವವನ್ನು ತುಂಬಿ ಪರಾರಿಯಾಗಿದ್ದಾರೆ. ಈ ನಡುವೆ ಸುಶೀಲಮ್ಮ ಅವರು ಕೆಲವೊಂದು ಬಾರಿ ಎರಡು-ಮೂರು ದಿನಗಳ ಕಾಲ ಯಾರಿಗೂ ತಿಳಿಸದೇ ಹೊರ ಹೋಗುತ್ತಿದ್ದರು. ಹಾಗಾಗಿ ಇವರು ಕಾಣದಿದ್ದಾಗ ಮಗಳು ಹೊರಗೆ ಹೋಗಿರಬಹುದೆಂದು ತಿಳಿದು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಶುಕ್ರವಾರ ರಾತ್ರಿ ಈ ಕೃತ್ಯ ನಡೆದಿರುವ ಅನುಮಾನವಿದ್ದು, ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೆಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆ ಸುತ್ತಮುತ್ತ ಪರಿಶೀಲಿಸುತ್ತಿದ್ದಾಗ ಪ್ಯಾಸೇಜ್‍ನಲ್ಲಿದ್ದ ಡ್ರಮ್‍ನಲ್ಲಿ ವೃದ್ಧೆಯ ಮೃತದೇಹ ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ವೃದ್ಧೆ ಮನೆಗೆ ಆಗಾಗ್ಗೆ ಬರುತ್ತಿದ್ದ ಪರಿಚಯಸ್ಥನೇ ಈ ಕೊಲೆ ಮಾಡಿದ್ದಾನೆಂಬ ಸುಳಿವು ಸಿಕ್ಕಿದೆ. ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕುಪೇಂದ್ರ ರೆಡ್ಡಿ ಗೆಲ್ಲಿಸುವ ಶಕ್ತಿ ಬಿಜೆಪಿ-ಜೆಡಿಎಸ್‍ಗೆ ಇಲ್ಲ; ರಿಜ್ವಾನ್
ಈ ವೃದ್ಧೆಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆಂಬ ಬಗ್ಗೆ ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿಯಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಕೊಲೆಗಾಗೇ ಡ್ರಮ್ ಖರೀದಿಸಿದ್ದ ಆರೋಪಿ:
ಆಗಾಗ್ಗೆ ಇವರ ಮನೆಗೆ ಬರುತ್ತಿದ್ದ ಆರೋಪಿಯು ವೃದ್ಧೆಯನ್ನು ಕೊಲೆ ಮಾಡಿ ಡ್ರಮ್ ಒಳಗೆ ಹಾಕಲೆಂದೇ ಹೊಸ ಡ್ರಮ್ ಖರೀದಿಸಿದುದ್ದು, ತನಿಖೆಯಿಂದ ಗೊತ್ತಾಗಿದ್ದು, ಮನೆಯ ಸುತ್ತಮುತ್ತಲಿನ ಸಿಸಿ ಟಿವಿಗಳು ಪರಿಶೀಲಿಸಿ ಹೆಚ್ಚಿನ ವಿವರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.