Thursday, May 2, 2024
Homeಬೆಂಗಳೂರುಮೊಟ್ಟೆ ಆಫರ್ ನೋಡಿ 48 ಸಾವಿರ ಕಳೆದುಕೊಂಡ ಮಹಿಳೆ

ಮೊಟ್ಟೆ ಆಫರ್ ನೋಡಿ 48 ಸಾವಿರ ಕಳೆದುಕೊಂಡ ಮಹಿಳೆ

ಬೆಂಗಳೂರು, ಫೆ.26- ಆನ್‍ಲೈನ್ ಶಾಪಿಂಗ್ ಮಾಡುವ ಗ್ರಾಹಕರೇ ಎಚ್ಚರ…ಕೇವಲ 1 ರೂ.ಗೆ ಒಂದು ಮೊಟ್ಟೆ ಎಂಬ ಆಫರ್ ಮೆಸೇಜ್ ನೋಡಿ ಮಹಿಳೆಯೊಬ್ಬರು ಬರೋಬ್ಬರಿ 48,199 ರೂ. ಕಳೆದುಕೊಂಡಿದ್ದಾರೆ.

ವಸಂತನಗರದ ಮಹಿಳೆಯೊಬ್ಬರ ಇಮೇಲ್‍ಗೆ ಫೆ.17ರಂದು ಆನ್‍ಲೈನ್ ಶಾಪಿಂಗ್ ಕಂಪನಿಯೊಂದು ಕಳುಹಿಸಿದ್ದ ಸಂದೇಶ ನೋಡಿ ಮೋಸಹೋಗಿದ್ದಾರೆ. ಆ ಮೆಸೇಜ್ ಕ್ಲಿಕ್ ಮಾಡಿ ನೋಡಿದಾಗ 48 ಮೊಟ್ಟೆ ಅಂದರೆ 4 ಡಜನ್ ಮೊಟ್ಟೆಗೆ ಕೇವಲ 49 ರೂ. ಆಫರ್ ಇರುವುದು ಗಮನಿಸಿದ್ದಾರೆ. ಅಂದರೆ 1 ಮೊಟ್ಟೆಗೆ 1 ರೂ. ನಂತರ ಡೆಲಿವರಿ ವಿಳಾಸ ಹಾಗೂ ಮೊಬೈಲ್ ನಂಬರ್ ಹಾಗೂ ಕಳುಹಿಸಲು ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿದ ಬಳಿಕ ಮೊಬೈಲ್‍ಗೆ ಬಂದ ಒಟಿಪಿ ನಂಬರ್ ನಮೂದಿಸಿ ಕೇವಲ 49 ರೂ. ಪಾವತಿಸಿದ್ದರು.

ಇದಾದ ಕೆಲ ನಿಮಿಷಗಳಲ್ಲೇ ಮಹಿಳೆ ಅಕೌಂಟ್‍ನಿಂದ 48,199 ರೂ. ಕಡಿತವಾಗಿರುವ ಮೆಸೇಜ್ ಬಂದಿದೆ. ತಕ್ಷಣ ಗಮನಿಸಿದ ಮಹಿಳೆ ತಕ್ಷಣ ಬ್ಯಾಂಕ್‍ಗೆ ಮಾಹಿತಿ ನೀಡಿ ಕ್ರೆಡಿಟ್ ಕಾರ್ಡ್ ಅಕೌಂಟ್ ಬ್ಲಾಕ್ ಮಾಡಿಸಿ ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ.

ಅದರನ್ವಯ ಹಣ ಕಳೆದುಕೊಂಡ ಮಹಿಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News