ಬೆಂಗಳೂರು, ನ.16- ನಗರದ ಹಲವು ಪ್ರದೇಶಗಳು ಸುರಕ್ಷಿತವಲ್ಲವೆಂದು ಭಾಸವಾಗುತ್ತಿದೆಯೆಂದು ಟೆಕ್ಕಿಯೊಬ್ಬ ಎಕ್ಸ್ ಮೂಲಕ ತನ್ನ ಪತ್ನಿಗೆವುಂಟಾದ ಕಿರುಕುಳದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.
ಸೃಜನ್ ಶೆಟ್ಟಿ ಎಂಬುವವರು ಎಕ್ಸ್ ನಲ್ಲಿ ಅಪ್‍ಡೇಟ್ ಮಾಡಿರುವ ವಿಡಿಯೋದಲ್ಲಿ ಕಳೆದ ನ.8ರಂದು ತಮ್ಮ ಪತ್ನಿ ಕೆಲಸ ಮುಗಿಸಿ ಕ್ಯಾಬ್‍ಗೆ ಕಾಯುತ್ತಿದ್ದರು, ಅದು ಬರಲು ತಡವಾದ ಕಾರಣ ಇಬ್ಬರೂ ಮಹಿಳಾ ಸಹೋದ್ಯೋಗಿ ಹಾಗೂ ಒಬ್ಬ ಪುರುಷರೊಂದಿಗೆ ಅವರ ಕಾರಿನಲ್ಲಿ ಹೊರಟಿದ್ದರು. ಸರ್ಜಾಪುರದ ಬಳಿ ರಾತ್ರಿ 10 ಗಂಟೆ ಸುಮಾರಿನಲ್ಲಿ ಟೆಂಫೋಚಾಲಕರು ನಮ್ಮ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಅಪಘಾತವಾಗಿದೆಯೆಂದು ನಾಟಕವಾಡಿದ್ದಾರೆ.
ಬಿಜೆಪಿ-ಜೆಡಿಎಸ್ ನಾಯಕರ ಹತಾಶೆಯಿಂದ ಗೊಂದಲ ಸೃಷ್ಟಿ: ಡಿಕೆಶಿ
ನಂತರ ಕಾರಿನಲ್ಲಿದ್ದವರನ್ನು ಕೆಳಗಿಳಿಯುವಂತೆ ಬೆದರಿಸಿದ್ದಾರೆ. ಆದರೆ ನನ್ನ ಪತ್ನಿ ದೈರ್ಯ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ ನಂತರ ಎಚ್ಚೆತ್ತು ಎಲ್ಲರೂ ಕಾರಿನಲ್ಲಿ ವೇಗವಾಗಿ ಗುಂಪಿನಿಂದ ತಪ್ಪಿಸಿಕೊಂಡು ಬಂದಿದ್ದಾರೆ.
ಈ ಘಟನೆ ನಡೆಯುತ್ತಿದ್ದರೂ ಈ ರಸ್ತೆಯಲ್ಲಿ ಹೋಗುತ್ತಿದ್ದ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಸಮಯಪ್ರಜ್ಞೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ ಅಲ್ಲೇ ಇದ್ದಿದ್ದರೆ ಪರಿಸ್ಥಿತಿಯೇನಾಗುತ್ತಿತ್ತೋ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಬಿಜೆಪಿ-ಜೆಡಿಎಸ್ ನಾಯಕರ ಹತಾಶೆಯಿಂದ ಗೊಂದಲ ಸೃಷ್ಟಿ: ಡಿಕೆಶಿ
ಈ ಭಾಗದಲ್ಲಿ ಹಲವಾರು ಐಟಿ ಕಂಪನಿಗಳಿದ್ದು, ಸಾವಿರಾರು ಮಂದಿ ಈ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ ಇಂತಹ ಘಟನೆಗಳು ಭೀತಿಯುಟ್ಟಿಸುತ್ತದೆ. ಶಾಂತಿಪ್ರಿಯ ಬೆಂಗಳೂರು ಸುರಕ್ಷಿತವೇ ಎಂಬ ಭಾವನೆ ಮೂಡುತ್ತದೆಯೆಂದು ಹೇಳಿಕೊಂಡಿದ್ದಾರೆ. ಇದನ್ನು ಭದ್ರತಾ ಲೋಪವೆಂದು ಹೇಳಲು ಸಾಧ್ಯವಿಲ್ಲ, ಆದರೆ ಪೊಲೀಸರು ಇಂತಹ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ವಿಡಿಯೋದಲ್ಲಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಟ್ವಿಟ್‍ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸರು ಘಟನೆ ನಡೆದ ನಿರ್ದಿಷ್ಟ ಸ್ಥಳ ಮತ್ತು ತಮ್ಮ ವಿವರಗಳನ್ನು ನೀಡುವಂತೆ ಡಿಎಂನಲ್ಲಿ ಕಳಿಸುವಂತೆ ತಿಳಿಸಿದ್ದಾರೆ.