Thursday, December 5, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಲಾಭದ ದುರಾಸೆಗೆ ಬಿದ್ದು 30 ಲಕ್ಷ ರೂ. ಕಳೆದುಕೊಂಡ ಮಹಿಳೆ

ಲಾಭದ ದುರಾಸೆಗೆ ಬಿದ್ದು 30 ಲಕ್ಷ ರೂ. ಕಳೆದುಕೊಂಡ ಮಹಿಳೆ

Woman loses Rs 30 lakh in greed for profit

ಮೈಸೂರು,ನ.26- ಹೆಚ್ಚಿನ ಲಾಭಂಶ ತೋರಿಸಿ ನಕಲಿ ಕಂಪನಿ ಮೇಲೆ ಹಣ ಹೂಡಿಕೆ ಮಾಡಿಸಿ ಮಹಿಳೆಯೋರ್ವರಿಗೆ 30.78 ಲಕ್ಷ ವಂಚಿಸಿರುವ ಪ್ರಕರಣವೊಂದು ಸೆನ್‌ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿದೆ.

ರಾಜೀವ್‌ ನಗರದ ನಿವಾಸಿ ಬಿಬಿ ಸಾರಾ(40) ಎಂಬುವರೇ ಹಣ ಕಳೆದುಕೊಂಡ ಮಹಿಳೆ. ಇನ್ಸ್ಟಾಗ್ರಾಂ ಮೂಲಕ ಪ್ರಶಾಂತ್‌ ಎಂಬಾತ ಪರಿಚಯವಾಗಿದ್ದಾನೆ. www.finegold.PAMP.com ನಲ್ಲಿ ಹಣ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದಾನೆ. ಪ್ರಾರಂಭದಲ್ಲಿ 1.5 ಲಕ್ಷ ಹಣ ಹೂಡಿದಾಗ 3.30 ಲಕ್ಷ ಲಾಭಂಶ ತೋರಿಸಲಾಗಿದೆ.

ಹಣ ವಿತ್‌ ಡ್ರಾ ಮಾಡಲು ಬಿಬಿ ಸಾರಾ ಮುಂದಾದಾಗ ಮತ್ತೆ 5.20 ಲಕ್ಷ ಪಾವತಿಸುವಂತೆ ತಿಳಿಸಿದ್ದಾರೆ.ಹಣ ಹೂಡಿದ ಬಳಿಕ ವ್ಯಾಲೆಟ್‌ನಲ್ಲಿ 12.30 ಲಕ್ಷ ಲಾಭಂಶ ತೋರಿಸಿದೆ. ಈ ಹಣ ಡ್ರಾ ಮಾಡಲು ಮುಂದಾದಾಗ ಟ್ಯಾಕ್‌್ಸ ಕಟ್ಟಬೇಕೆಂದು ನಂಬಿಸಿ ಹಂತ ಹಂತವಾಗಿ ಹಣ ಪಾವತಿಸಿಕೊಂಡಿದ್ದಾರೆ.

ಒಟ್ಟು 30.78 ಲಕ್ಷ ಹೂಡಿದ ಬಿಬಿ ಸಾರಾಗೆ ತಾವು ವಂಚನೆಗೆ ಒಳಗಾಗಿರುವುದು ಮನವರಿಕೆಯಾಗಿದೆ. ನಂತರ ಈ ಬಗ್ಗೆ ಸೆನ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News