Sunday, February 16, 2025
Homeರಾಷ್ಟ್ರೀಯ | Nationalರೈಲಿನ ಖಾಲಿ ಬೋಗಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

ರೈಲಿನ ಖಾಲಿ ಬೋಗಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

Woman raped on train at Mumbai's Bandra Terminus; porter held

ಮುಂಬೈ, ಫೆ.3-ಇಲ್ಲಿನ ಬಾಂದ್ರಾಟರ್ಮಿನಸ್‌‍ನ ಸಮೀಪ ರೈಲಿನ ಖಾಲಿ ಬೋಗಿಯಲ್ಲಿ ಮಹಿಳೆಯೊಬ್ಬರ ಮೇಲೆ ಕೆಲಸಗಾರ ಅತ್ಯಾಚಾರವೆಸಗಿದ್ದಾನೆ. ಮಧ್ಯವಯಸ್ಸಿನ ಮಹಿಳೆ ಮತ್ತು ಅವರ ಮಗ ಶನಿವಾರ ರಾತ್ರಿ ಬಾಂದ್ರಾ ಟರ್ಮಿನಸ್‌‍ಗೆ ಹೊರ ಠಾಣೆ ರೈಲಿನಲ್ಲಿ ಬಂದು ಕೆಳಗೆ ಇಳಿದ ನಂತರ, ಮತ್ತೊಂದು ರೈಲನ್ನು ಪ್ರವೇಶಿಸಿ ಪ್ಲಾಟ್‌‍ಫಾರ್ಮ್‌‍ನ ಇನ್ನೊಂದು ಬದಿಗೆ ಎಳೆಯುವ ವೇಲೆ ಈ ಘಟನೆ ನಡೆದಿದೆ.

ಆ ಸಮಯದಲ್ಲಿ ಇತರ ರೈಲಿನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎಂದು ಸರ್ಕಾರಿ ರೈಲ್ವೆ ಪೊಲೀಸ್‌‍ (ಜಿಆರ್‌‍ಪಿ) ಅಧಿಕಾರಿ ತಿಳಿಸಿದ್ದಾರೆ.ಈ ವೇಳೆ ರೈಲಿನಲ್ಲಿ ಹಮಾಲಿ ಕೆಲಸಗಾರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ನಂತರ ಪರಾರಿಯಾಗಿದ್ದಾನೆ .ನಂತರ ಆಕೆ ಬಾಂದ್ರಾ ಜಿಆರ್‌‍ಪಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ರೈಲ್ವೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಹಲವಾರು ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ಪರಿಶೀಲಿಸಿದರು ತಡ ರಾತ್ರಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಬಾಂದ್ರಾ ಟರ್ಮಿನಸ್‌‍ನಲ್ಲಿ ಇಳಿದ ನಂತರ ಮಹಿಳೆ ಇತರ ರೈಲಿಗೆ ಏಕೆ ಪ್ರವೇಶಿಸಿದ್ದಾಳೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.ಅತ್ಯಾಚಾರದ ಪ್ರಕರಣ ದಾಖಲಾಗಿದೆ.ತನಿಖೆ ನಡೆಯುತ್ತಿದ್ದುವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ ಅಧಿಕಾರಿ ಹೇಳಿದರು.

RELATED ARTICLES

Latest News