Friday, November 22, 2024
Homeರಾಜ್ಯಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಎಂಪಿ ಪುತ್ರನ ವಿರುದ್ಧ ದೂರು ದಾಖಲು

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಎಂಪಿ ಪುತ್ರನ ವಿರುದ್ಧ ದೂರು ದಾಖಲು

ಬೆಂಗಳೂರು, ನ.17- ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿ ಇದೀಗ ಮೋಸ ಮಾಡಿದ್ದಾನೆಂದು ಸಂಸದರೊಬ್ಬರ ಪುತ್ರನ ವಿರುದ್ಧ ನಗರದ ಯುವತಿಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೈಸೂರಿನ ಪಿಯು ಕಾಲೇಜಿನ ಉಪನ್ಯಾಸಕ, ಸಂಸದರೊಬ್ಬರ ಪುತ್ರ ರಂಗನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ವಿಜಯನಗರದ ನಿವಾಸಿ 24 ವರ್ಷದ ಯುವತಿಗೆ ರಂಗನಾಥ್ ಸ್ನೇಹಿತರ ಮೂಲಕ ಪರಿಚಯವಾಗಿದ್ದು, ಆಗಾಗ ಫೋನ್ ಮಾಡಿ ಮಾತನಾಡಿಸುತ್ತಿದ್ದನು.

ಸ್ವಲ್ಪ ದಿನಗಳ ನಂತರ ಯುವತಿಗೆ ರಂಗನಾಥ್ ಕರೆ ಮಾಡಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಾನು ಮೈಸೂರಿನ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ಕೈ ತುಂಬಾ ಸಂಬಳ ಬರುತ್ತದೆ ಎಂದು ಹೇಳಿದ್ದಾನೆ. ಅಲ್ಲದೆ, ನೀನು ನನ್ನನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿದ್ದರಿಂದ ಆ ಯುವತಿ ಸ್ನೇಹ ಮುಂದುವರೆಸಿದ್ದಾರೆ.

ಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್

ಕಳೆದ ಜ.23ರಂದು ರಂಗನಾಥ್ ಕರೆ ಮಾಡಿ, ಬೆಂಗಳೂರಿನಲ್ಲಿ ಕೆಲಸವಿದೆ, ನಾನು ಬರುತ್ತಿದ್ದೇನೆಂದು ಹೇಳಿ 24ರಂದು ಬಂದು ಕೊಡಿಗೇಹಳ್ಳಿಯ ಸ್ವಾತಿ ಹೊಟೇಲ್‍ಗೆ ಯುವತಿಯನ್ನು ಕರೆಸಿಕೊಂಡಿದ್ದಾನೆ. ನಂತರ ಅಲ್ಲಿಂದ ಮೈಸೂರಿಗೆ ಹೋಗಿ ಅಲ್ಲಿನ ಲಲಿತ ಮಹಲ್ ಪ್ಯಾಲೆಸ್ ಹೊಟೇಲ್‍ಗೆ ಕರೆದುಕೊಂಡು ಹೋಗಿ ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ. ಇವತ್ತು ಇಲ್ಲಿಯೇ ಇದ್ದು, ಬೆಳಗ್ಗೆ ನಮ್ಮ ಮನೆಗೆ ಹೋಗೋಣವೆಂದು ನಂಬಿಸಿ ಹೊಟೇಲ್‍ನಲ್ಲೇ ಉಳಿಸಿಕೊಂಡಿದ್ದಾಗ ರಾತ್ರಿ ಮದ್ಯ ಸೇವಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿ ಮಾರನೆ ದಿನ ಬೆಳಗ್ಗೆ ನನ್ನನ್ನು ಬೆಂಗಳೂರಿಗೆ ಕಳುಹಿಸಿದ್ದಾನೆಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.

ನಂತರದ ದಿನಗಳಲ್ಲಿ ರಂಗನಾಥ್ ನನ್ನ ಜತೆ ಮೊದಲಿನ ಹಾಗೆ ಮಾತನಾಡದೆ ನಿರ್ಲಕ್ಷ್ಯ ಮಾಡಿ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾನೆ. ಮದುವೆಯಾಗುವಂತೆ ಕೇಳಿದಾಗ ಕೊಲೆ ಬೆದರಿಕೆ ಹಾಕಿರುತ್ತಾನೆಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.

ನೋಟಿಸ್: ಯುವತಿ ನೀಡಿರುವ ದೂರಿನನ್ವಯ ಬಸವನಗುಡಿ ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಅವರು ರಂಗನಾಥ್‍ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ದೂರಿನನ್ವಯ ಯುವತಿಗೆ ಸೂಕ್ತ ದಾಖಲೆಯೊಂದಿಗೆ ಠಾಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.

ಯುವತಿ ವಿರುದ್ಧ ದೂರು: ರಂಗನಾಥ್ ಸಹ ಯುವತಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿಯು ಸ್ನೇಹಿತರ ಮೂಲಕ ಪರಿಯಚವಾಗಿದ್ದು, ಆಕೆ ಜತೆ ನಾನು ಇರುವ ಫೋಟೋಗಳನ್ನು ನನ್ನ ಪತ್ನಿಗೆ ಕಳುಹಿಸಿ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿ, ಮಾನಸಿಕ ಹಿಂಸೆ ನೀಡಿರುತ್ತಾರೆ. ಪದೇ ಪದೇ ಕರೆ ಮಾಡಿ ಹಣಕ್ಕೆ ಬೇಡಿಕೆ ನೀಡಿದ್ದು, 32,500ರೂ. ಆಕೆ ಖಾತೆಗೆ ವರ್ಗಾವಣೆ ಮಾಡಿದ್ದೆನು.

ಯಾರೇ ಕಾನೂನು ಉಲ್ಲಂಘಿಸಿದರೂ ಕಠಿಣ ಕ್ರಮ: ಪರಮೇಶ್ವರ್

ನಂತರದ ದಿನಗಳಲ್ಲಿ 15 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದು, ಹಣ ನೀಡಲು ನಿರಾಕರಿಸಿದಾಗ ಕೊಲೆ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ರಂಗನಾಥ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಯುವತಿ ಹಾಗೂ ರಂಗನಾಥ್ ಪರಸ್ಪರ ದೂರು ದಾಖಲಿಸಿದ್ದು, ಈ ಪ್ರಕರಣ ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Latest News