Monday, September 1, 2025
Homeರಾಷ್ಟ್ರೀಯ | Nationalಮಹಾರಾಷ್ಟ್ರ : ಚರಂಡಿಯಲ್ಲಿ ಮಹಿಳೆಯ ಕತ್ತರಿಸಿದ ತಲೆ ಪತ್ತೆ

ಮಹಾರಾಷ್ಟ್ರ : ಚರಂಡಿಯಲ್ಲಿ ಮಹಿಳೆಯ ಕತ್ತರಿಸಿದ ತಲೆ ಪತ್ತೆ

Woman’s severed head found in Thane drain, police launch murder probe

ಥಾಣೆ, ಆ.31-ದುಷ್ಕರ್ಮಿಗಳು ಮಹಿಳೆಯನ್ನು ಕೊಂದು ಆಕೆಯ ತಲೆ ಕತ್ತರಿಸಿ ಚರಂಡಿಗೆ ಎಸೆದಿರುವ ಭೀಕರ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಭಿವಂಡಿ ಪ್ರದೇಶದ ಈದ್ಗಾ ರಸ್ತೆಯಲ್ಲಿರುವ ಕಸಾಯಿಖಾನೆಯ ಬಳಿಯ ಚರಂಡಿಯಲ್ಲಿ 25 ರಿಂದ 30 ವರ್ಷ ವಯಸ್ಸಿನವರೆಂದು ನಂಬಲಾದ ಅಪರಿಚಿತ ಮಹಿಳೆಯ ಕತ್ತರಿಸಿದ ತಲೆ ಬಿದ್ದಿರುವುದನ್ನು ಕೆಲವು ದಾರಿಹೋಕರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ.

ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಮೂಗು ಮತ್ತು ಕಿವಿಗಳಲ್ಲಿ ಲೋಹದ ಆಭರಣಗಳೊಂದಿಗೆ ಕತ್ತರಿಸಿದ ತಲೆಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಭಿವಂಡಿ ಪೊಲೀಸ್‌‍ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬೀಬತ್ಸ್ಯಘಟನೆಯಿಂದ ಜನರು ದಂಗಾಗಿದ್ದಾರೆ .ಬೇರೆಲೂ ಕೊಲೆ ಮಾಡಿ ಇಲ್ಲಿ ತಲೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯ ಸಿಸಿ ಟಿವಿ ಪರಿಶೀಲಿಸಲಾಗುತ್ತಿದ್ದು ಮೃತಳ ಗುರುತ್ತು ಪತ್ತೆಗೆ ಪ್ರಯತ್ನ ನಡೆದಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ಹೇಳಿದ್ದಾರೆ.

RELATED ARTICLES

Latest News