ನವದೆಹಲಿ,ಮೇ.25- ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಹೇಳಿರುವ ಆಮ್ ಆದಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ರಾಷ್ಟ್ರ ರಾಜಧಾನಿಯ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿರುವುದರಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಮಹಿಳೆಯರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಇದು ಅತ್ಯಂತ ದೊಡ್ಡ ದಿನವಾಗಿದೆ. ಪ್ರತಿಯೊಬ್ಬರಿಗೂ, ವಿಶೇಷವಾಗಿ ಮಹಿಳೆಯರು ಹೊರಗೆ ಬಂದು ಮತದಾನ ಮಾಡುವಂತೆ ನಾನು ಮನವಿ ಮಾಡಲು ಬಯಸುತ್ತೇನೆ. ಭಾರತದಲ್ಲಿ, ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ ಎಂದು ದೆಹಲಿ ಆಯೋಗದ ಮಾಜಿ ಮುಖ್ಯಸ್ಥ ಮಲಿವಾಲ್ ಹೇಳಿದ್ದಾರೆ.
ಮೇ 13 ರಂದು ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ತಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ಆರೋಪಿಸಿದ ನಂತರ ಆಮ್ ಆದಿ ಪಕ್ಷ (ಎಎಪಿ) ಬಿಸಿ ಎದುರಿಸುತ್ತಿದೆ.
ಆಪಾದಿತ ಹಲ್ಲೆ ನಡೆದ ಒಂದು ದಿನದ ನಂತರ, ಮೇ 14 ರಂದು ಬಿಭವ್ ಕುಮಾರ್ ವಿರುದ್ಧ ಮಲಿವಾಲ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಒಂದು ದಿನದ ನಂತರ, ಬಿಭವ್ ಕುಮಾರ್ ಅವರು ಪೊಲೀಸರಿಗೆ ಪ್ರತಿದೂರು ದಾಖಲಿಸಿದರು, ಮಲಿವಾಲ್ ಅವರು ಸಿಎಂ ಸಿವಿಲ್ ಲೈನ್‌್ಸ ನಿವಾಸಕ್ಕೆ ಅನಧಿಕತ ಪ್ರವೇಶ ಪಡೆದರು ಮತ್ತು ಮಾತಿನಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.
ಬಿಭವ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಲಿವಾಲ್ ಅವರ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಮೇ 19 ರ ಭಾನುವಾರದಂದು ಬಿಭವ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಮತ್ತು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.