ಚೆನ್ನೈ, ಅ.9-ಐಸಿಸಿ ಆವೃತ್ತಿಯ 13ನೆ ಒಡಿಐ ವಿಶ್ವಕಪ್‍ನ ಆರಂಭಿಕ ಪಂದ್ಯದಲ್ಲೇ 5 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ , ಅತಿಥೇಯ ಟೀಮ್ ಇಂಡಿಯಾ ವಿರುದ್ಧ ಸೋಲು ಕಂಡಿದ್ದು, ಪ್ಯಾಟ್ ಕಮಿನ್ಸ್ ಪಡೆ ಸೋಲಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಾರಣ ತಿಳಿಸಿದ್ದಾರೆ.
ಅಕ್ಟೋಬರ್ 8(ಭಾನುವಾರ) ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸೀಸ್, ಭಾರತದ ಬೌಲರ್‍ಗಳ ಸಾಂಘಿಕ ಹೋರಾಟದಿಂದ 199 ಅಲ್ಪ ಮೊತ್ತ ಗಳಿಸಿತು. ನಂತರ ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ವಿರಾಟ್ ಕೊಹ್ಲಿ (85 ರನ್) ಹಾಗೂ ಕೆ.ಎಲ್.ರಾಹುಲ್ (97*ರನ್) ಆಕರ್ಷಕ ಅರ್ಧಶತಕಗಳ ಬಲದಿಂದ 6 ವಿಕೆಟ್ ಗೆಲುವು ಸಾಧಿಸಿತು.
BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ
ಟಾಸ್ ಗೆದ್ದು ಬ್ಯಾಟ್ ಮಾಡಿದ್ದು ಆಶ್ಚರ್ಯ ತಂದಿದೆ: ಸಚಿನ್ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದು ನನಗೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಟೀಮ್ ಇಂಡಿಯಾದ ಬೌಲರ್‍ಗಳು ಅತ್ಯುತ್ತಮ ಬೌಲಿಂಗ್ ಸಂಘಟಿಸಿ ಎದುರಾಳಿ ತಂಡವನ್ನು 199 ರನ್‍ಗಳಿಗೆ ನಿಯಂತ್ರಿಸಿದ್ದು ಅತ್ಯಮೋಘ ಪ್ರದರ್ಶನವಾಗಿದೆ. ಆಸ್ಟ್ರೇಲಿಯಾ ಈ ಪಿಚ್‍ನಲ್ಲಿ ಎಡಗೈ ಸ್ಪಿನ್ನರ್ (ಆಸ್ಟನ್ ಅಗರ್) ಸೇವೆ ಕಳೆದುಕೊಂಡಿತ್ತು' ಎಂದು ಸಚಿನ್
ಎಕ್ಸ್’ ನಲ್ಲಿ ಹೇಳಿದ್ದಾರೆ.
ಕೊಹ್ಲಿ- ರಾಹುಲ್ ಗೆಲುವು ತಂದರು:
ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಅವರು ತಂಡಕ್ಕೆ ಗೆಲುವಿನ ಇನಿಂಗ್ಸ್ ಕಟ್ಟಿದ್ದರು. ಅವರು ತುಂಬಾ ಚಾಕಚಕ್ಯತೆ ಬ್ಯಾಟಿಂಗ್ ನಡೆಸಿದ್ದರು. ಸಮಯ ಸಿಕ್ಕಾಗಲೆಲ್ಲಾ ಸ್ಪೋಟಕ ಆಟ ಆಡಿದ್ದರು. ದ್ವಿತೀಯ ಇನಿಂಗ್ಸ್ ನಲ್ಲಿ ಚೆಂಡು ಬ್ಯಾಟಿಂಗ್ ಮಾಡಲು ಉತ್ತಮವಾಗಿ ಸಹಕರಿಸುತ್ತಿತ್ತು. ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಟೀಮ್ ಇಂಡಿಯಾಗೆ ಧನ್ಯವಾದಗಳು’ ಎಂದು ತೆಂಡೂಲ್ಕರ್ ತಿಳಿಸಿದ್ದಾರೆ.