ನವದೆಹಲಿ,ನ.9-ನನ್ನ ಪ್ರಕಾರ ಐಸಿಸಿ ವಿಶ್ವಕಪ್ -2023 ಮಹಾಸಮರದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‍ನಲ್ಲಿ ಎದುರಾಳಿಯಾಗುವುದನ್ನು ಬಯಸುತ್ತೇನೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಯಾವ ತಂಡಗಳು ಎಷ್ಟು ಪಾಯಿಂಟ್ ಪಡೆದುಕೊಳ್ಳುತ್ತವೆ ಎಂಬುದರ ಮೇಲೆಯೇ ಸೆಮಿಫೈನಲ್ ಹಣಾಹಣಿ ನಡೆಯಲಿದೆ ಎಂಬುದು ನನಗೂ ಗೊತ್ತು. ಆದರೆ ಭಾರತದಲ್ಲಿ ಕ್ರೀಡಾಭಿಮಾನಿಗಳ ಹುಚ್ಚು ಕಿಚ್ಚು ಹಚ್ಚಬೇಕಾದರೆ ಸೆಮಿಫೈನಲ್‍ನಲ್ಲಿ ಭಾರತ-ಪಾಕಿಸ್ತಾನ ಎದುರಾಳಿಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಹುತೇಕ ಕ್ರೀಡಾಭಿಮಾನಿಗಳು ಈಗಾಗಲೇ ಭಾರತ ಮತ್ತು ಪಾಕಿಸ್ತಾನ ಫೈನಲ್‍ನಲ್ಲಿ ಸೆಣಸಲಿವೆ ಎಂದು ಟಿಕೆಟ್‍ಗಳನ್ನೇ ಖರೀದಿಸಿದ್ದಾರೆ. ಅಹಮದಾಬಾದ್‍ನಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದಿತ್ತು. ಇದೇ ರೀತಿ ಸೆಮಿಫೈನಲ್ ಇಲ್ಲವೇ ಫೈನಲ್‍ನಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡವನ್ನು ಟೀಮ್ ಇಂಡಿಯಾ ಸೋಲಿಸಲಿದೆ ಎಂಬುದು ಬಹುತೇಕ ಅಭಿಮಾನಿಗಳ ಒತ್ತಾಸೆಯಾಗಿದೆ ಎಂದಿದ್ದಾರೆ.
ಕ್ರಿಕೆಟ್‍ನಲ್ಲಿ ಇಂಡಿಯ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅದು ಊಹೆಗೂ ನಿಲುಕದ ಸೆಣಸಾಟ. ಕೊನೆಯ ಎಸೆತದವರೆಗೂ ಎರಡೂ ತಂಡಗಳು ಗೆಲುವಿಗೆ ಶ್ರಮಿಸುತ್ತವೆ. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಒಂದು ಕಾಲದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನಾಗಿ ಅನೇಕ ಪಂದ್ಯಗಳನ್ನು ಮುನ್ನಡೆಸಿದ್ದ ದಾದಾ ಖ್ಯಾತಿಯ ಗಂಗೂಲಿ ಹೇಳಿದ್ದಾರೆ.
ವಾಯಮಾಲಿನ್ಯ ತಡೆಗಟ್ಟಲು ನ.20 ರಂದು ನವದೆಹಲಿಯಲ್ಲಿ ಕೃತಕ ಮಳೆ
ಪ್ರಸ್ತುತ ರೋಹಿತ್ ಶರ್ಮ ನೇತೃತ್ವದ ಟೀಂ ಇಂಡಿಯಾ ಅದ್ಭುತವಾಗಿ ಮುನ್ನಡೆಯುತ್ತದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲ ವಿಭಾಗಗಳಲ್ಲೂ ನಮ್ಮ ತಂಡಕ್ಕೆ ಯಾರೊಬ್ಬರೂ ಸರಿಸಾಟಿ ಇಲ್ಲ. ಸತತ 8 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿರುವ ಭಾರತ ಫೈನಲ್‍ವರೆಗೂ ಇದೇ ಪ್ರದರ್ಶನವನ್ನು ನೀಡಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಆರಂಭಿಕ ಆಟಗಾರರಿಂದ ಹಿಡಿದು ಮಧ್ಯಮ ಕ್ರಮಾಂಕದಲ್ಲೂ ಬ್ಯಾಟಿಂಗ್‍ನಲ್ಲಿ ಎಲ್ಲರೂ ಉತ್ತಮ ಲಯ ಕಂಡುಕೊಂಡಿದ್ದಾರೆ. ಅದೇ ರೀ ಬೌಲಿಂಗ್ ವಿಭಾಗದಲ್ಲೂ ಒಬ್ಬರಿಗಿಂತ ಒಬ್ಬರು ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಟೀಂ ಇಂಡಿಯ ಮುನ್ನಡೆಯುತ್ತಿರುವುದನ್ನು ನೋಡಿದರೆ ವಿಶ್ವಕಪ್ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಗಂಗೂಲಿ ಭವಿಷ್ಯ ನುಡಿದಿದ್ದಾರೆ.