Monday, October 14, 2024
Homeರಾಜ್ಯನಾಡೋಜ ಹಂಪ ನಾಗರಾಜಯ್ಯ ಅವರಿಗೆ ದಸರಾ ಉದ್ಘಾಟನೆ ಭಾಗ್ಯ

ನಾಡೋಜ ಹಂಪ ನಾಗರಾಜಯ್ಯ ಅವರಿಗೆ ದಸರಾ ಉದ್ಘಾಟನೆ ಭಾಗ್ಯ

Writer Hampa Nagarajaiah to inaugurate Dasara 2024: CM Siddaramaiah

ಮೈಸೂರು, ಸೆ.20- ಹೆಸರಾಂತ ಸಾಹಿತಿ ಹಂಪನಾಗರಾಜಯ್ಯ ಅವರನ್ನು ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಸರಾ ಉದ್ಘಾಟನೆಗೆ ಗಣ್ಯರನ್ನು ಆಯ್ಕೆ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ನನಗೆ ಅವಕಾಶ ನೀಡಿತ್ತು. ಅದರ ಅನ್ವಯ ಹಂಪನಾಗರಾಜಯ್ಯ ಅವರನ್ನು ಆಹ್ವಾನಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಗಣಪತಿ ಉತ್ಸವಗಳು ನಡೆದಿವೆ. ಅದರಲ್ಲಿ ನಾಗಮಂಗಲ ಮತ್ತು ದಾವಣಗೆರೆ ಸೇರಿ ಎರಡು ಕಡೆ ಗಲಭೆಗಳಾಗಿವೆ. ದಾವಣೆಗೆರೆಯಲ್ಲಿ ಕಲ್ಲು ತೂರಾಟವಾಗಿದೆ, ನಾಗಮಂಗಲದಲ್ಲಿ ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ ಘಟನೆಯಲ್ಲಿ ಪೊಲೀಸರ ವೈಫಲ್ಯ ಕಂಡುಬಂದಿದೆ. ಇನ್‌್ಸಪೆಕ್ಟರ್‌ ಹಾಗೂ ಡಿವೈಎಸ್ಪಿ ಅವರನ್ನು ಅಮಾನತು ಗೊಳಿಸಲಾಗಿದೆ ಎಂದರು.

ರಾಜ್ಯದಲ್ಲಿ ಕೋಮು ಗಲಭೆಗೆ ಬಿಜೆಪಿಯವರೇ ಕಾರಣ. ಅವರ ಪ್ರಚೋದನೆಯಿಂದಲೇ ಗಲಾಟೆಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಗಣೇಶೋತ್ಸವ ಹಾಗೂ ಇತರ ಸಂದರ್ಭಗಳಲ್ಲಿ ಶಾಂತಿ ಪಾಲನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ವಿರುದ್ಧ ಡಿ-ನೋಟಿಫಿಕೇಷನ್‌ ಆರೋಪ ಕೇಳಿಬಂದಿದೆ. ಸಚಿವರಾದ ಕೃಷ್ಣಬೈರೇಗೌಡ, ದಿನೇಶ್‌ಗುಂಡೂರಾವ್‌, ಸಂತೋಷ್‌ ಲಾಡ್‌ ಅವರು ಆರೋಪ ಮಾಡಿ, ಅಕ್ರಮವಾಗಿ ಡಿ-ನೋಟಿಫಿಕೇಷನ್‌ ಮಾಡಲಾಗಿದೆ ಎಂದು ದೂರಿದ್ದಾರೆ. ಒಂದು ಎಕರೆ 11ಗುಂಟೆ ಜಮೀನು ಡಿ-ನೋಟಿಫಿಕೇಷನ್‌ ಆಗಿದೆ. ಅದರ ಮೌಲ್ಯ ಹೆಚ್ಚು. ಅದರಲ್ಲೂ ಕುಮಾರಸ್ವಾಮಿಯವರ ಅತ್ತೆ, ಜಮೀನಿನ ಜಿಪಿಎ ಭಾಗಿದಾರರು. ಕುಮಾರಸ್ವಾಮಿ ಅವರ ಭಾವಮೈದುನ ಜಮೀನಿನ ಫಲಾನುಭವಿ ಎಂದು ವಿವರಿಸಿದರು.

ಸದರಿ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ, ಸರ್ಕಾರದಿಂದ ಪರಿಹಾರವೂ ಪಾವತಿಯಾಗಿದೆ. ಇಂತಹ ಜಮೀನನ್ನು ಡಿ-ನೋಟಿಫಿಕೇಷನ್‌ ಮಾಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಅದನ್ನೂ ಮೀರಿ ಸತ್ತವರ ಹೆಸರಿಗೆ ಡಿನೋಟಿಫಕೇಷನ್‌ ಮಾಡಲಾಗಿದೆ ಎಂದು ದೂರಿದರು.

ಕುಮಾರಸ್ವಾಮಿ ಸದಾ ಹಿಟ್‌ ಅಂಡ್‌ ರನ್‌ ಹೇಳಿಕೆ ನೀಡುತ್ತಿದ್ದಾರೆ. ಜವಾಬ್ದಾರಿಯಿಂದ ಮಾತನಾಡುವುದಿಲ್ಲ. ಯಾವ ಆರೋಪವನ್ನು ತಾರ್ಕಿಕ ಆಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಕೇಂದ್ರ ಸಂಪುಟದಲ್ಲಿ ಸಚಿವರಾಗಿರುವವರು ಮಾತನಾಡಿದಾಗ ಘನತೆ ಇರಬೇಕು ಎಂದು ಹೇಳಿದರು.

ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಅವುಗಳನ್ನು ಎಸ್‌‍ಐಟಿ ತನಿಖೆಗೆ ವಹಿಸಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಇಂದು ತಮನ್ನು ಭೇಟಿ ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಪೊಲೀಸ್‌‍ ಕಾನ್‌್ಷಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಒಂದು ಅವಧಿಗೆ ಸೀಮಿತವಾಗಿ ವಯೋಮಿತಿಯನ್ನು ಸಡಿಲಿಕೆ ಮಾಡಲು ಸೂಚಿಸಲಾಗಿದೆ. ಕೆ.ಎ.ಎಸ್‌‍ ಪರೀಕ್ಷೆಯಲ್ಲಿ ಸಾಕಷ್ಟು ತಪ್ಪುಗಳಾಗಿದ್ದವು ಹೀಗಾಗಿ ಮರು ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ತೀಳಿಸಿದರು.

RELATED ARTICLES

Latest News