Wednesday, December 18, 2024
Homeಕ್ರೀಡಾ ಸುದ್ದಿ | Sportsಅಡಿಲೇಡ್ ಸೋಲಿನೊಂದಿಗೆ ನಂ.1 ಸ್ಥಾನ ಕಳೆದುಕೊಂಡ ಭಾರತ

ಅಡಿಲೇಡ್ ಸೋಲಿನೊಂದಿಗೆ ನಂ.1 ಸ್ಥಾನ ಕಳೆದುಕೊಂಡ ಭಾರತ

WTC 2024 points table: IND, NZ, AUS, SA rankings, scenarios for WTC final

ಅಡಿಲೇಡ್, ಡಿ.8- ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಯೋಜನೆಯ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ 3ನೇ ಸ್ಥಾನಕ್ಕೆ ಕುಸಿಯುವ ಮೂಲಕ ಫೈನಲ್ ಹಾದಿಯನ್ನು ದುರ್ಗಮಗೊಳಿಸಿಕೊಂಡಿದೆ.

ತವರು ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-3 ರಿಂದ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ನಂತರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 295 ರನ್ ಭರ್ಜರಿ ಗೆಲುವು ಸಾಧಿಸಿತ್ತು.

ಈ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದ ಜಸ್ ಪ್ರೀತ್ ಬೂಮ್ರಾ ಪಡೆ ಅಂಕಪಟ್ಟಿಯಲ್ಲಿ ಮತ್ತೆ ಟಾಪ್ 1 ಸ್ಥಾನಕ್ಕೇರಿದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನಕ್ಕೆ ಕುಸಿದಿತ್ತು.

ಅಡಿಲೇಡ್ ನಲ್ಲಿ ನಡೆದಿದ್ದ ಹಗಲು ರಾತ್ರಿ ಪಂದ್ಯದಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡವು 10 ವಿಕೆಟ್ ಗಳ ಹೀನಾಯ ಸೋಲು ಕಂಡು 57.2 ಅಂಕಗಳಿಗೆ ಕುಸಿತು ಅಗ್ರಪಟ್ಟ ಕಳೆದುಕೊಂಡಿದೆ.

ಫೈನಲ್ ಹಾದಿ ದುರ್ಗಮ:
ಐಸಿಸಿ ಆಯೋಜನೆಯ ಡಬ್ಲ್ಯುಟಿಸಿ ಪಯಣದಲ್ಲಿ ಎರಡು ಬಾರಿ ಫೈನಲ್ ಹಂತ ತಲುಪಿದ್ದ ಭಾರತ ತಂಡವು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಮುಖಭಂಗ ಅನುಭವಿಸಿತ್ತು. ಆದರೆ ಚುಟುಕು ವಿಶ್ವಕಪ್ ಗೆದ್ದಿರುವ ಸಂಭ್ರಮದಲ್ಲಿದ್ದ ಟೀಮ್ ಇಂಡಿಯಾ ಟೆಸ್ಟ್ ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ಹುಮಸ್ಸಿನಲ್ಲಿತ್ತು. ಆದರೆ ಈಗ ರೋಹಿತ್ ಪಡೆ ಫೈನಲ್ ಹಾದಿ ತಲುಪುವುದೇ ದುರ್ಗಮವಾಗಿದೆ. ಒಂದು ವೇಳೆ ಭಾರತ ತಂಡ ಟ್ರೋಫಿ ಸುತ್ತು ತಲುಪಬೇಕಾದರೆ ಉಳಿದಿರುವ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸುವ ಒತ್ತಡಕ್ಕೆ ಸಿಲುಕಿದೆ.

ಫೈನಲ್ ಪಂದ್ಯದತ್ತ ಆಸ್ಟ್ರೇಲಿಯಾ- ದಕ್ಷಿಣ ಆಫ್ರಿಕಾ ಚಿತ್ತ:
ಪರ್ತ್ ಟೆಸ್ಟ್ ಪಂದ್ಯದಲ್ಲಿ 295 ರನ್ ಗಳ ಹೀನಾಯ ಸೋಲು ಕಂಡಿದ್ದ ಪ್ಯಾಟ್ ಕಮಿನ್‌್ಸ ಸಾರಥ್ಯದ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಶತಕ (140 ರನ್) ಹಾಗೂ ವೇಗಿಗಳಾದ ಮಿಚೆಲ್ ಸ್ಟ್ರಾಕ್ ( 8 ವಿಕೆಟ್), ಕಮಿನ್ಸ್ (7 ವಿಕೆಟ್) ಅವರ ಆಟದ ನೆರವಿನಿಂದ 10 ವಿಕೆಟ್ ಗೆಲುವಿನೊಂದಿಗೆ 60.7 ಅಂಕಗಳೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದ್ದು ಫೈನಲ್ ತಲುಪುವ ಅವಕಾಶ ಹೆಚ್ಚಿಸಿಕೊಂಡಿದೆ.
ಮತ್ತೊಂದೆಡೆ ಶ್ರೀಲಂಕಾ ವಿರುದ್ಧ ಸರಣಿ ಆಡುತ್ತಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೆ (59.7) ಏರಿದ್ದು ಫೈನಲ್ ತಲುಪುವ ಅದೃಷ್ಟ ಪಡೆದಿದೆ.

RELATED ARTICLES

Latest News