ಬೆಂಗಳೂರು,ಜ.16- ನಗರದ ಪ್ರತಿಷ್ಠಿತ ಬೆಂಗಳೂರು ಟರ್ಫ್‍ಕ್ಲಬ್‍ನ ಪದಾಕಾರಿಗಳನ್ನು ತಕ್ಷಣವೇ ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಅವರು ಟರ್ಫ್ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿದಾಗ 3.45 ಕೋಟಿ ನಗದು ವಶಪಡಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ ಎಂದು ಹೇಳಿದ್ದಾರೆ.
ಕ್ಲಬ್‍ನಲ್ಲಿ ಕಾನೂನು ಬಾಹಿರವಾಗಿ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದರ ಬಗ್ಗೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ. ತನಿಖಾ ವರದಿ ಬರುವವರೆಗೂ ಪದಾಧಿಕಾರಿಗಳನ್ನು ವಜಾ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದಾಳಿಯ ವೇಳೆ ಟರ್ಫ್‍ಕ್ಲಬ್ ಲೆಕ್ಕಪತ್ರ ನಿರ್ವಹಣೆಯಲ್ಲಿ ಅನೇಕ ದೋಷಗಳು ಕಂಡುಬಂದಿವೆ. ನೂರಾರು ಕೋಟಿ ಜಿಎಸ್‍ಟಿ ವಂಚನೆ ಮತ್ತು ಅಕ್ರಮವಾಗಿ ನಡೆಯುತ್ತಿದ್ದ ಬೆಟ್ಟಿಂಗ್ ಅವ್ಯವಹಾರಗಳನ್ನು ದಾಳಿಯ ವೇಳೆ ಪತ್ತೆಯಾಗಿದೆ. ಈ ಸಂಬಂಧ 66 ಜನರನ್ನು ಕೂಡ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಕಾನೂನು ಕ್ರಮದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಮನುಷ್ಯನ ದೇಹದಲ್ಲಿ ಮೈಕ್ರೋಚಿಪ್ ಆರೋಪ, ತನಿಖೆಗೆ ಕೋರ್ಟ್ ಸೂಚನೆ
ಟರ್ಫ್ ಕ್ಲಬ್ ಪದಾಧಿಕಾರಿಗಳು ಶಾಮೀಲಾಗದೇ ಈ ಪ್ರಮಾಣದಲ್ಲಿ ಬುಕ್ಕಿಗಳು ಅವ್ಯವಹಾರದಲ್ಲಿ ತೊಡಗಲು ಅಸಾಧ್ಯ ಮತ್ತು ಅನೇಕ ಸ್ಟುವಡ್ರ್ಸ್‍ಗಳೂ ಕೂಡ ಈ ವಂಚನೆಯಲ್ಲಿ ಪಾಲುದಾರರು ಹಾಗೂ ಫಲಾನುಭವಿಗಳಾಗಿದ್ದಾರೆಂದು ತಿಳಿದುಬಂದಿದೆ. ಸರ್ಕಾರ ಮೀನಾಮೇಷ ಎಣಿಸದೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ನಗರ ಮಧ್ಯಭಾಗದಲ್ಲಿ ರೇಸ್‍ಕೋರ್ಸ್ ಹೊಂದಿರುವ ಟರ್ಫ್ ಕ್ಲಬ್ ಶೇ.28ರಷ್ಟು ಜಿಎಸ್‍ಟಿ ನೀಡುವುದನ್ನು ತಪ್ಪಿಸಲು ಈ ವಂಚನೆಯಲ್ಲಿ ಪಾಲುದಾರರಾಗಿರುವುದರಲ್ಲಿ ಅನುಮಾನವಿಲ್ಲ. ಈ ದಂಧೆಯು ಅನೇಕ ವರ್ಷಗಳಿಂದ ನಡೆಯುತ್ತಿದೆ. ವಾಸ್ತವ ಹೀಗಿದ್ದರೂ ಕ್ಲಬ್ ಅಧಿಕಾರಿಗಳು ತಮಗೆ ತಿಳಿದಿರಲಿಲ್ಲ ಎಂದು ಹೇಳಿರುವುದನ್ನು ನಂಬಬಾರದು ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ಮೆಲ್ನೋಟಕ್ಕೆ ಇದೊಂದು ಬಹುಕೋಟಿ ಹಗರಣ ಎಂಬುದು ಗೋಚರವಾಗುತ್ತದೆ. ಅನೇಕ ಪ್ರಭಾವಿ ಮತ್ತು ಪ್ರತಿಷ್ಠಿತ ವ್ಯಕ್ತಿಗಳು ಶಾಮೀಲಾಗಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಈ ವಂಚನೆಯ ಪ್ರಕರಣವನ್ನು ನಿವೃತ್ತ ಹೈಕೋರ್ಟ್ ನ್ಯಾಯಾೀಧಿಶರಿಂದ ತನಿಖೆಗೆ ಒಳಪಡಿಸಿದರೆ ಸತ್ಯವು ಹೊರಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸ್ಥಳದಲ್ಲಿ ಟ್ರೀಪಾರ್ಕ್ ನಿರ್ಮಿಸಿ ನಗರದ ನಾಗರಿಕರ ಉಪಯೋಗಕ್ಕೆ ಬಳಕೆ ಮಾಡುವುದು ಅತ್ಯಂತ ಸೂಕ್ತ ಯೋಜನೆಯಾಗುವುದು.
ಈಗಾಗಲೇ ರಾಜ್ಯ ಸರ್ಕಾರಗಳು ಹಲವು ಬಾರಿ ಟರ್ಫ್ ಕ್ಲಬ್ ಸ್ಥಳಾಂತರಕ್ಕೆ ಪ್ರಯತ್ನಿಸಿವೆ. ನಗರ ಮಧ್ಯ ಭಾಗದಿಂದ ಇದನ್ನು ಸ್ಥಳಾಂತರಗೊಳಿಸುವಪದು ಅನಿವಾರ್ಯವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಇದನ್ನು ಆದ್ಯತೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.