Saturday, February 24, 2024
Homeಮನರಂಜನೆ'ಟಾಕ್ಸಿಕ್' ಅವತಾರದಲ್ಲಿ ರಾಕಿ ಬಾಯ್

‘ಟಾಕ್ಸಿಕ್’ ಅವತಾರದಲ್ಲಿ ರಾಕಿ ಬಾಯ್

ಕೆಜಿಎಫ್ ಸೀರೀಸ್ ಮೂಲಕ ಪ್ರಪಂಚಾದ್ಯಂತ ಸಿನಿ ಬಾಕ್ಸ್ ಆಫೀಸ್ ನಲ್ಲಿ ಹೊಸ ಭಾಷ್ಯ ಬರೆದ ನಟ ರಾಕಿಂಗ್ ಸ್ಟಾರ್, ಯಶ್ ಎರಡು ವರ್ಷಗಳಿಂದ ಯಾವುದೇ ಸಿನಿಮಾ ಮಾಡದೆ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದ್ದರು. ದೊಡ್ಡ ಮಟ್ಟದ ಯಶಸ್ಸನ್ನು ಕಂಡರೂ ಇನ್ನು ಏಕೆ ಸಿನಿಮಾ ಮಾಡಲಿಲ್ಲ ಎಂಬ ಕೂರಗು ಅವರಲ್ಲಿತ್ತು.ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಇದರ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಾ ಬಂದಿದ್ದರು.

ಯಶ್ ಮಾತ್ರ ಯಾವುದೇ ಗುಟ್ಟನ್ನು ಬಿಟ್ಟುಕೊಡದೆ ಬಂದಿದ್ದರು. ಈಗ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಅಂತಿಮವಾಗಿ ತಮ್ಮ ಮುಂದಿನ ಚಿತ್ರವನ್ನು ಅದರ ಶೀರ್ಷಿಕೆಯೊಂದಿಗೆ ಘೋಷಿಸಿದ್ದಾರೆ. ಚಿತ್ರದ ಹೆಸರು ಟಾಕ್ಸಿಕ್ ಇದರ ಜವಾಬ್ದಾರಿಯನ್ನು ಹೊತ್ತಿರುವುದು ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್. ಮಲಯಾಳಂನ ಹೆಸರಾಂತ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ಈ ಮಾಹಿತಿಯನ್ನ ಹಂಚಿಕೊಂಡಿದ್ದು, ಇಂದು ಬೆಳಗ್ಗೆ 9.55ಕ್ಕೆ ಟೀಸರ್ ಮೂಲಕ ಔಪಚಾರಿಕವಾಗಿ ಬಹಿರಂಗಗೊಂಡಿದೆ. ಟೀಸರ್ ಅನ್ನು ಹಂಚಿಕೊಂಡ ಯಶ್, ‘ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತಿದೆ” – ರೂಮಿ ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್” ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.ಅಷ್ಟೇ ಅಲ್ಲದೆ ಚಿತ್ರದ ಬಿಡುಗಡೆಯ ದಿನಾಂಕವನ್ನು ತಂಡ ಘೋಷಿಸಿದೆ ಅದು ಏಪ್ರಿಲ್ 10, 2025. ಪ್ರೇಕ್ಷಕರ ಮುಂದೆ ತರಲು 16 ತಿಂಗಳ ಗಡುವನ್ನು ನಿಗದಿಪಡಿಸಿಕೊಂಡಿದೆ

ಮೂಲಗಳ ಪ್ರಕಾರ ಟ್ಯಾಕ್ಸಿಕ್ ಗೋವಾದ ಸುತ್ತ ನಡೆಯುವ ಡ್ರಗ್ಸ್ ಮಾಫಿಯಾ ಕಥೆಯಾಗಿದ್ದು, ಹೆಚ್ಚಿನ ಭಾಗ ಅಲ್ಲಿಯೇ ಚಿತ್ರೀಕರಣವಾಗಲಿದೆಯಂತೆ. ಅದಕ್ಕಾಗಿ ಗೋವಾದಲ್ಲಿ ಬಹು ಕೋಟಿ ವೆಚ್ಚದ ಸೆಟ್ ಹಾಕಲು ತಾಂತ್ರಿಕ ತಂಡ ತಯಾರಿ ಮಾಡಿಕೊಳ್ಳುತ್ತಿದೆ, ‘ಕೆಜಿಎಫ್’ ಚಿತ್ರದಂತೆ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ಹಿಂದಿ – ಕನಿಷ್ಠ ಐದು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ಯಶ್ ಅವರ 19 ನೇ ಚಿತ್ರಕ್ಕೆ ಮಹಿಳಾ ನಿರ್ದೇಶಕಿ ನರ್ದೇನ ಮಾಡುತ್ತಿರುವಿದು ಮತ್ತಷ್ಟು ಕುತೂಹಲ ಮೂಡಿಸಿದೆ. ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕರುಗಳಾದ ಶಂಕರ್ ಮತ್ತು ಪುರಿ ಜಗನ್ನಾಥ್ ಅವರ ಕಥೆಗಳನ್ನು ಕೂಡ ಯಶ್ ಒಪ್ಪಿರಲಿಲ್ಲ. ಎರಡು ವರ್ಷಗಳ ನಂತರ ಕ್ಯಾಕ್ಸಿಕ್ ಗೆ ಮನಸ್ಸೋತಿರುವ ಇವರು ಟೀಸರ್ ನಲ್ಲಿ ತುಂಬಾ ರಗಡಾಗಿ ಮಿಂಚಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮತ್ತೊಮ್ಮೆ ಇಂಡಿಯನ್ ಬಾಕ್ಸ್ ಆಫೀಸ್ ಸುಲ್ತಾನ್ ಅಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ ಮತ್ತು ಸ್ಯಾಂಡಲ್‌ವುಡ್ ಉದ್ಯಮಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಪಾತ್ರವರ್ಗವನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸದಿದ್ದರೂ, ಈ ಡೈನಾಮಿಕ್ ಆನ್-ಸ್ಕ್ರೀನ್ ಜೋಡಿಯ ನಿರೀಕ್ಷೆಯ ಮೇಲೆ ಅಭಿಮಾನಿಗಳು ಈಗಾಗಲೇ ಉತ್ಸಾಹದಿಂದ ಝೇಂಕರಿಸಿದ್ದಾರೆ.

RELATED ARTICLES

Latest News