ನವದೆಹಲಿ, ಸೆ. 25– ತಮ ಸ್ಫೋಟಕ ಬ್ಯಾಟಿಂಗ್‌ನಿಂದ ಈಗಾಗಲೇ ಹಲವು ದಾಖಲೆ ನಿರ್ಮಿಸಿರುವ ಟೀಮ್ ಇಂಡಿಯಾದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಸೆಪ್ಟೆಂಬರ್ 27 ರಿಂದ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅವರ ಹೆಸರಿನಲ್ಲಿರುವ ಮಹತ್ತರ ದಾಖಲೆ ಮುರಿಯುವತ್ತ ಚಿತ್ತ ಹರಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್‌್ಸನಲ್ಲಿ 56 ರನ್ ಸಿಡಿಸಿದ ಜೈಸ್ವಾಲ್ ತಂಡ 280 ರನ್‌ಗಳ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಗಳಿಸುವಲ್ಲಿ ಅಲ್ಪ ಕಾಣಿಕೆ ನೀಡಿದ್ದರು.
ಈಗ ದ್ವಿತೀಯ ಟೆಸ್ಟ್‌ನಲ್ಲಿ 180 ರನ್ ಗಳಿಸಿದರೆ 2024 ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಟಾಪ್ 1 ಆಟಗಾರ ಎಂಬ ದಾಖಲೆಗೆ ಭಾಜನರಾಗಲಿದ್ದಾರೆ. ಅಲ್ಲದೆ ಈ ವರ್ಷವೇ 1000 ರನ್ ಪೂರೈಸುವ ಅವಕಾಶವನ್ನು ಯುವ ಆಟಗಾರ ಹೊಂದಿದ್ದಾರೆ.
2024ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದವರು:
- ಜೋ ರೂಟ್: 11 ಪಂದ್ಯ- 986 ರನ್- ಇಂಗ್ಲೆಂಡ್
- ಯಶಸ್ವಿ ಜೈಸ್ವಾಲ್: 7 ಪಂದ್ಯ- 806 ರನ್- ಭಾರತ
- ಕುಸಾಲ್ ಮೆಂಡಿಸ್: 6 ಪಂದ್ಯ-761 ರನ್- ಶ್ರೀಲಂಕಾ
- ಒಲ್ಲಿ ಪೋಪ್: 11 ಪಂದ್ಯ- 745 ರನ್- ಇಂಗ್ಲೆಂಡ್
- ಬೆನ್ ಡಕೆಟ್: 11 ಪಂದ್ಯ 707 ರನ್- ಇಂಗ್ಲೆಂಡ್