ಬೆಳಗಾವಿ,ಡಿ.5-ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಜಾರಿಯಾದ ನಂತರ ಒಪ್ಪಂದ ಮಾಡಿಕೊಂಡಿರುವ ಯಾವುದೇ ಆಸ್ಪತ್ರೆಗಳಿಗೂ ಪಾವತಿಸಬೇಕಾದ ಶುಲ್ಕ(ಬಿಲ್)ವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ವಿಧಾನಪರಿಷತ್‍ಗೆ ಸ್ಪಷ್ಟಪಡಿಸಿದ್ದಾರೆ.
ಸದಸ್ಯ ಪಿ.ಎನ್.ನಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2023ರಿಂದ ಈ ಯೋಜನೆಯನ್ನು ಹೊಸದಾಗಿ ಮರುಜಾರಿ ಮಾಡಲಾಗಿದೆ. ಸರ್ಕಾರದ ಮಾನದಂಡಗಳನ್ನು ಪಾಲನೆ ಮಾಡಿಕೊಂಡಿರುವ ಆಸ್ಪತ್ರೆಗಳ ಜೊತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಯಾವ ಆಸ್ಪತ್ರೆಗಳಿಗೆ ಶುಲ್ಕ ನೀಡಬೇಕೊ ಅದನ್ನು ಹಂತ ಹಂತವಾಗಿ ನೀಡಲಾಗುತ್ತದೆ. ಈವರೆಗೂ ಯಾವ ಆಸ್ಪತ್ರೆಯ ಬಿಲ್ ಬಾಕಿ ಇಲ್ಲ ಎಂದು ಪ್ರಶ್ನಿಸಿದರು.
2003ರಲ್ಲಿ ಯಶಸ್ವಿನಿ ಯೋಜನೆಯನ್ನು ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದಲ್ಲಿ ಜಾರಿ ಮಾಡಲಾಯಿತು. 2003-04ರಿಂದ 2017ರಿಂದ 18ರವರೆಗೆ ಈ ಯೋಜನೆ ಜಾರಿಯಲ್ಲಿತ್ತು. ನಂತರ ಯೋಜನೆಯನ್ನು ಸಹಕಾರಿ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಯಿತು. 1-6-2017ರಿಂದ 31-05-2018ವರೆಗೆ ಅನುಷ್ಠಾನ ಮಾಡಲಾಯಿತು. ಆದರೆ 1-6-1-2018ರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು ಎಂದರು.
ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಸರ್ಕಾರ ಕಾಲಾಹರಣ : ಬಿಜೆಪಿ ಆಕ್ರೋಶ
ಆಗ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಅವರು, ಈ ಯೋಜನೆಯನ್ನು ತಡೆದವರು ಯಾರು ಎಂದು ಪ್ರಶ್ನಿಸಿದಾಗ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಆಸ್ಪತ್ರೆಗಳು ಕಳುಹಿಸಿಕೊಡುವ ಪ್ರತಿಯೊಂದು ಬಿಲ್‍ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ನಮ್ಮ ಮಾನದಂಡಗಳನ್ನು ಪಾಲನೆ ಮಾಡಲಾಗಿದೆಯೇ? ಆಧಾರ್‍ಕಾರ್ಡ್ ಲಿಂಕ್ ಹೀಗೆ ಎಲ್ಲ ನಿಯಮಗಳು ಕ್ರಮಬದ್ಧವಾಗಿದ್ದರೆ ಮಾತ್ರ ಬಿಲ್ ಪಾವತಿಯಾಗುತ್ತದೆ. ಕೆಲವು ತಾಂತ್ರಿಕ ಕಾರಣದಿಂದ ವಿಳಂಬವಾಗಿರಬಹುದು ಎಂದು ಹೇಳಿದರು.ರಾಜ್ಯದಲ್ಲಿ 2023ರಿಂದ ಈ ಯೋಜನೆಯನ್ನು ಜಾರಿ ಮಾಡಿದ್ದು, ಇದು ಸಮರ್ಪಕವಾಗಿ ಅನುಷ್ಠಾನಗೊಂಡಿದೆ ಎಂದು ರಾಜಣ್ಣ ತಿಳಿಸಿದರು.