Sunday, November 24, 2024
Homeರಾಜಕೀಯ | Politicsವಕ್ಫ್ ವಿರುದ್ಧ ಯತ್ನಾಳ್‌ ಟೀಮ್ ಹೋರಾಟದದಿಂದ ದೂರ ಉಳಿದ ಬಣ

ವಕ್ಫ್ ವಿರುದ್ಧ ಯತ್ನಾಳ್‌ ಟೀಮ್ ಹೋರಾಟದದಿಂದ ದೂರ ಉಳಿದ ಬಣ

Yatnal Vs Vijayendra fight Continue in BJP

ಬೆಂಗಳೂರು,ನ.24- ವಕ್ಫ್ ನೋಟೀಸ್‌‍ ವಿರುದ್ಧ ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವದಲ್ಲಿ ನಾಳೆಯಿಂದ ಆರಂಭವಾಗಲಿರುವ ಜಾಗೃತಿ ಅಭಿಯಾನದಿಂದ ರಾಜ್ಯಧ್ಯಕ್ಷ ಬಿ.ವೈ.ಬಣ ಬಣ ದೂರ ಉಳಿಯಲಿದೆ.ಮೊದಲೇ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿರುವ ಬಿಜೆಪಿಯಲ್ಲಿ ಈ ಬೆಳವಣಿಗೆ ಮತ್ತಷ್ಟು ಬಣ ಬಡಿದಾಟಕ್ಕೆ ಪುಷ್ಟಿ ನೀಡಿದಂತಾಗಿದೆ.

ಯತ್ನಾಳ್‌ ನೇತ್ರತ್ವದಲ್ಲಿ ನಡೆಯಲಿರುವ ಜಾಗೃತಿ ಅಭಿಯಾನಕ್ಕೆ ಪಕ್ಷದ ಯಾವುದೇ ಶಾಸಕರು, ಸಂಸದರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಯಾರೊಬ್ಬರೂ ಪಾಲ್ಗೊಳ್ಳಬಾರದು ಎಂದು ವಿಜಯೇಂದ್ರ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ವರಿಷ್ಟರ ಅನುಮತಿ ಪಡೆಯದೇ, ಪಕ್ಷದ ಚಿಹ್ನೆಯನ್ನು ಬಳಸದೆ ಒಬ್ಬ ವ್ಯಕ್ತಿಯ ಪ್ರತಿಷ್ಟೆಗಾಗಿ ನಡೆಸಲು ಮುಂದಾಗಿರುವ ಈ ಅಭಿಯಾನದಿಂದ ದೂರ ಉಳಿಯುವಂತೆ ಸೂಚನೆ ಕೊಡಲಾಗಿದೆ.

ರಾಜ್ಯದಲ್ಲಿ ಬಿಜೆಪಿ ವಕ್ಫ್ ವಿರುದ್ಧ ಹೋರಾಟ ಹಮಿಕೊಂಡರೆ, ಯತ್ನಾಳ್‌ ಟೀಂ ಪ್ರತ್ಯೇಕ ಹೋರಾಟ ಹಮ್ಮಿಕೊಂಡಿದೆ. ಯತ್ನಾಳ್‌ ಟೀಂ ಬೀದರ್‌ನಿಂದ ಚಾಮರಾಜನಗರದವರೆಗೆ ಹೋರಾಟ ಜಾಥಾ ಹಮಿಕೊಂಡಿದೆ.

ಈ ನಡುವೆ 3 ತಂಡವಾಗಿ ವಕ್ಫ್ ವಿರುದ್ಧ ಬಿ.ವೈ.ವಿಜಯೇಂದ್ರ ತಂಡ ಜಾಗೃತಿ ಹೋರಾಟ ಹಮಿಕೊಂಡಿದೆ. ಒಂದೇ ವಿಚಾರವಾಗಿ ಪಕ್ಷದಲ್ಲಿ ನಡೆಯುವ ಎರಡು ತಂಡಗಳ ಹೋರಾಟ ಸಾರ್ವಜನಿಕವಾಗಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಇನ್ನು ನಾಳೆ ಗಡಿಜಿಲ್ಲೆ ಬೀದರ್‌ನಲ್ಲಿ ಯತ್ನಾಳ್‌ ನೇತೃತ್ವದಲ್ಲಿ ವಕ್ಫ್ ಹೋರಾಟ ಆರಂಭವಾಗಲಿದೆ.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಅವರ ತಂಡಕ್ಕೆ ಸ್ಥಳೀಯ ಬಿಜೆಪಿ ಶಾಸಕರ ಬೆಂಬಲ ಸಿಗುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಶಾಸಕರಾದ ಶರಣು ಸಲಗರ್‌, ಶೈಲೇಂದ್ರ ಬೆಲ್ದಾಳೆ, ಪ್ರಭು ಚೌವ್ಹಾಣ್‌ ಪ್ರತಿಭಟನೆಯಲ್ಲಿ ಭಾಗಿಯಾಗದೆ ದೂರ ಉಳಿಯಲಿದ್ದಾರೆ.

ಏಕೆಂದರೆ, ಈ ಮೂವರು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಯತ್ನಾಳ್‌ ನೇತೃತ್ವದ ಹೋರಾಟಕ್ಕೆ ಬೆಂಬಲ ನೀಡುವುದು ಬಹುತೇಕ ಅನುಮಾನ ಎಂದೇ ಹೇಳಲಾಗಿದೆ

ಇದಕ್ಕೆ ಪುಷ್ಠಿ ನೀಡುವಂತೆ ಬಸವಕಲ್ಯಾಣ ಶಾಸಕ ಶರಣು ಸಲಗರ್‌ ಹೇಳಿಕೆ ನೀಡಿದ್ದು, ನಾವು ಈಗಾಗಲೇ ಈ ಹೋರಾಟ ಮುಗಿಸಿ ಬಂದಿದ್ದೇವೆ. ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಸೂಚನೆ ಮೇರೆಗೆ ನಾನು ಹೋಗುತ್ತೇನೆ. ಏಕೆಂದರೆ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಅಲ್ಲದೇ, ವಿಜಯೇಂದ್ರ ವಿರುದ್ಧದ ಯತ್ನಾಳ್‌ ಹೇಳಿಕೆಗೆ ಬಸವಕಲ್ಯಾಣ ಶಾಸಕ ಶರಣು ಸಲಗರ್‌ ಕಿಡಿಕಾರಿದ್ದಾರೆ.

ವಿಜಯೇಂದ್ರ ಮಾಡಿರುವ ಮೂರು ತಂಡಕ್ಕೆ ಅಪ್ಪ-ಅಮ ಇಲ್ಲವೆಂಬ ಯತ್ನಾಳ್‌ ಹೇಳಿಕೆಗೆ ಕೌಂಟರ್‌ ಕೊಟ್ಟಿರುವ ಸಲಗರ್‌, ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡ ಅನಾಥವಾಗಿದೆ. ಮಾಜಿ ಎಂಎಲ್ಸಿ, ಮಾಜಿ ಎಂಪಿ ಹಾಗೂ ಮನೆಯಲ್ಲಿ ಕುಳಿತುಕೊಂಡವರನ್ನು ಸೇರಿಸಿಕೊಂಡಿದ್ದಾರೆ. ಹೀಗಾಗಿ, ಈ ತಂಡಕ್ಕೆ ತಾಯಿ-ತಂದೆ ಯಾರು ಇಲ್ಲ.
.
ನಮಗೆ ನಿಜವಾಗಿಯೂ ತಂದೆ-ತಾಯಿಗಳಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್‌ ಸಿಂಹ, ಅರವಿಂದ ಲಿಂಬಾವಳಿ ಸೇರಿ ಹಲವರ ವಿರುದ್ಧ ಕಿಡಿಕಾರಿದ್ದಾರೆ. ಯತ್ನಾಳ್‌ ಅವರೇ ನಿಮ ನಡೆ ಜನರಿಗೆ ದಾರಿ ತಪ್ಪಿಸುತ್ತಿದೆ. ಈ ರೀತಿಯ ಸಂಶಯದಿಂದಾಗಿಯೇ ಮೂರು ಕಡೆ ಸೋಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾಗೃತಿ ಅಭಿಯಾನ :
ವಕ್‌್ಫ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ರೆಬೆಲ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವದಲ್ಲಿ ಪ್ರತ್ಯೇಕ ಜನ ಜಾಗೃತಿ ಅಭಿಯಾನ ನಡೆಯಲಿದೆ. ನ.25 ರಿಂದ ಡಿ.25 ರವರೆಗೆ ಅಭಿಯಾನ ನಡೆಯಲಿದ್ದು, ಬೀದರ್‌ನಿಂದ ಆರಂಭಗೊಂಡು ಬೆಳಗಾವಿ ಜಿಲ್ಲೆಯವರೆಗೆ ನಡೆಯಲಿದೆ.

ನ.25 ರಿಂದ ಯತ್ನಾಳ್‌ ನೇತೃತ್ವದಲ್ಲಿ ಬಿಜೆಪಿ ನಾಯಕರ ಜೊತೆಗೆ ಜನಜಾಗೃತಿ ಅಭಿಯಾನ ಬೀದರ್‌ನಿಂದ ಆರಂಭವಾಗಲಿದೆ. 26 ರಂದು ಕಲಬುರಗಿ, 27, ಯಾದಗಿರಿ, ರಾಯಚೂರು ಹಾಗೂ 30 ಶನಿವಾರ ವಿಜಯಪುರ ಹಾಗೂ ಬಾಗಲಕೋಟೆ, ಭಾನುವಾರ ಡಿ.1 ಬೆಳಗಾವಿ ಜಿಲ್ಲೆಯಲ್ಲಿ ಜನ ಜಾಗೃತಿ ನಡೆಯಲಿದೆ.

ವಕ್‌್ಫ ಬಹಳ ದೊಡ್ಡ ಹಗರಣವಾಗಿದೆ. ಈ ಹಿನ್ನೆಲೆಯಲ್ಲಿ ವಕ್‌್ಫ ಟ್ರಿಬ್ಯೂನಲ್‌ ರದ್ದು ಮಾಡಬೇಕು. ಟ್ರಿಬ್ಯೂನಲ್‌ನಲ್ಲಿ ಇರುವವರು ಎಲ್ಲರೂ ಒಂದೇ ಕೋಮಿನವರು. 2700 ಎಕರೆ ಕಂದಾಯ ಜಮೀನು ಕಬರ್‌ ಸ್ಥಾನಕ್ಕೆ ಕೊಡಲು ಸರ್ಕಾರ ನಿರ್ಣಯ ಮಾಡಿದೆ. ದೇಶದಲ್ಲಿ 38 ಲಕ್ಷ ಎಕರೆ ಜಮೀನಿದೆ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಜನಜಾಗೃತಿ ಮಾಡುವ ಅಗತ್ಯ ಇದೆ ಎಂಬುದು ಯತ್ನಾಳ್‌ ತಂಡದ ವಾದವಾಗಿದೆ.

ಇದು ಬಿಜೆಪಿ ಪಕ್ಷದಿಂದಲೇ ನಡೆಯುವ ಹೋರಾಟ. ನಮ ಅಭಿಯಾನಕ್ಕೆ ವರಿಷ್ಠರ ಅನುಮತಿ ಪ್ರಶ್ನೆ ಬರುವುದಿಲ್ಲ. ನಮ ಕೇಂದ್ರ ಗೃಹಸಚಿವರು, ಜೆಪಿಸಿ ಸಮಿತಿ ನಮ ಹೋರಾಟಕ್ಕೆ ಕೈಜೋಡಿಸಿದೆ. ಹೀಗಾಗಿ ನಮ ಅಭಿಯಾನಕ್ಕೆ ಅವರ ಬೆಂಬಲವೂ ಇದೆ ಎಂದು ಅರ್ಥ. ಯಾರಿಗೆ ರೈತರು, ಮಠ ಮಾನ್ಯಗಳ ಪರ ಕಳಕಳಿ ಇದೆಯೋ ಪಕ್ಷಾತೀತವಾಗಿ ನಮ ಜೊತೆ ಬಂದು ಸೇರಬಹುದು. ಪಕ್ಷ ಅಂತ ಏನಿಲ್ಲ. ಯಾರು ಬೇಕಾದರೂ ಬರಬಹುದು. ರಾಜ್ಯಾಧ್ಯಕ್ಷ ಆಗಲಿ, ಯಾರೇ ಆಗಲಿ ಬರಬಹುದು. ಯಾರೋ ಒಬ್ಬ ವ್ಯಕ್ತಿ ಅಂತ ಇಲ್ಲ ಎಂದು ವಿಜಯೇಂದ್ರಗೂ ಪರೋಕ್ಷವಾಗಿ ಯತ್ನಾಳ್‌ ತಿರುಗೇಟು ಕೊಟ್ಟಿದ್ದರು.

ಮೂರು ಪ್ರಮುಖ ಬೇಡಿಕೆ! :
1954 ರಿಂದ ರಚನೆ ಆದ ರಾಜ್ಯ ಪತ್ರಗಳನ್ನು ರದ್ದು ಮಾಡಬೇಕು. ರೈತರು ಮಠಗಳು ಮಂದಿರ ಸರ್ಕಾರಿ ಜಾಗಗಳನ್ನು ವಕ್ಫ್ ತನ್ನದೆಂದು ಹೇಳುತ್ತಿದೆ, ಅದನ್ನು ವಾಪಸ್‌‍ ಕೊಡಬೇಕು.ಅನ್ವರ್‌ ಮಾಣಿಪ್ಪಾಡಿ ವರದಿಯಲ್ಲಿ ಇರುವ ಅಂಶಗಳನ್ನು ಜಾರಿಗೊಳಿಸಬೇಕು ಹಾಗೂ ಕ್ರಮ ಕೈಗೊಳ್ಳಬೇಕು.

RELATED ARTICLES

Latest News