Monday, September 16, 2024
Homeಜಿಲ್ಲಾ ಸುದ್ದಿಗಳು | District Newsವಾಟ್ಸಾಪ್‌ ಸ್ಟೇಟಸ್‌‍ ಹಾಕಿ ಯುವಕ ಆತಹತ್ಯೆ

ವಾಟ್ಸಾಪ್‌ ಸ್ಟೇಟಸ್‌‍ ಹಾಕಿ ಯುವಕ ಆತಹತ್ಯೆ

young man commits suicide after posting WhatsApp Status

ಬೆಂಗಳೂರು, ಸೆ.3- ಮೊಬೈಲ್‌ ವಾಟ್ಸಾಪ್‌ ಸ್ಟೇಟಸ್‌‍ನಲ್ಲಿ ಡೆತ್‌ನೋಟ್‌ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ತೀರ್ಥಹಳ್ಳಿ ತಾಲೂಕಿನ ಗ್ರಾಮದ ಜಯದೀಪ್‌ (24)ಎಂಬಾತ ತನ್ನ ಸ್ಟೇಟಸ್‌‍ನಲ್ಲಿ ಮೂರು ಪುಟಗಳ ಮರಣ ಪತ್ರನ್ನು ಅಪ್‌ಲೋಡ್‌ ಮಾಡಿ ಕಳೆದ ಶನಿವಾರ ನಾಪತ್ತೆಯಾಗಿದ್ದ.

ಈತನ ಬೈಕ್‌ ತೀರ್ಥಹಳ್ಳಿಯ ತುಂಗಾನದಿಯ ಪಕ್ಕದಲ್ಲಿ ಪತ್ತೆಯಾಗಿತ್ತು. ಪೋಷಕರು ತೀರ್ಥಹಳ್ಳಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು. ಕಳೆದ ಎರಡು ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಜಯದೀಪ್‌ನ ಶವಕ್ಕಾಗಿ ತುಂಗಾನದಿಯಲ್ಲಿ ಹುಡುಕಾಟ ನಡೆಸಿದ್ದರು. ನಿನ್ನೆ ಸಂಜೆ ಸಶಾನಕಟ್ಟೆ ಸಮೀಪ ನದಿಯಲ್ಲಿ ಮೃತದೇಹ ಸಿಕ್ಕಿದೆ.

ನನಗೆ ಪ್ರೀತಿಸಲು ಹುಡುಗಿ ಸಿಕ್ಕಿಲ್ಲ ಎಂಬುದರ ಜೊತೆಗೆ ಅನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದೇನೆ ಎಂದು ಸ್ಟೇಟಸ್‌‍ಗೆ ಅಪ್‌ಲೋಡ್‌ ಮಾಡಿರುವ ಡೆತ್‌ನೋಟಲ್ಲಿ ಬರೆದಿದ್ದಾನೆ.

ನಾನು ಬದುಕಲು ಬೇರೆದಾರಿ ಹುಡುಕಬಹುದಿತ್ತು ಆದರೆ ಸಾವಿನ ದಾರಿ ನನ್ನನು ಕರೆಯುತ್ತಿದೆ. ನನ್ನನ್ನು ಕ್ಷಮಿಸಿ ನಾನು ಸಾಲ ಮಾಡಿದ್ದೇನೆ ನಿಮ ಮೇಲೆ ಬಿಟ್ಟು ಹೋಗುತ್ತಿದ್ದೇನೆ ಬೇಸರ ಮಾಡಿಕೊಳ್ಳಬೇಡಿ. ನನ್ನ ಬೈಕ್‌ ಮಾರಿ ಅದರಲ್ಲಿ ಎಲ್ಲರಿಗೂ ಸ್ವಲ್ಪ ಸ್ವಲ್ಪ ಹಣಕೊಟ್ಟು ಸಾಲ ತೀರಿಸಿ ಎಂದು ಬರೆದಿದ್ದಾನೆ.

RELATED ARTICLES

Latest News