Friday, September 20, 2024
Homeಬೆಂಗಳೂರುಬೆಂಗಳೂರಲ್ಲಿ ರೈಲಿಗೆ ತಲೆಕೊಟ್ಟು ಪಶ್ಚಿಮ ಬಂಗಾಳದ ಯುವತಿ ಆತಹತ್ಯೆ

ಬೆಂಗಳೂರಲ್ಲಿ ರೈಲಿಗೆ ತಲೆಕೊಟ್ಟು ಪಶ್ಚಿಮ ಬಂಗಾಳದ ಯುವತಿ ಆತಹತ್ಯೆ

ಬೆಂಗಳೂರು, ಆ.13– ನಗರದಲ್ಲಿ ವಾಸವಿರುವ ಅಕ್ಕನ ಮನೆಗೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಯುವತಿ ಇಂದು ಬೆಳಗ್ಗೆ ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾಳೆ. ಲಿಖಿತ ಗೇಸರ್ (25) ಆತಹತ್ಯೆ ಮಾಡಿಕೊಂಡ ಪಶ್ಚಿಮ ಬಂಗಾಳದ ಯುವತಿ.

ಈಕೆಯ ಅಕ್ಕ-ಭಾವ ಸೋಲದೇವನಹಳ್ಳಿ ಪೊಲೀಸ್ ಠಾಣೆ ಸಮೀಪದಲ್ಲಿ ವಾಸವಾಗಿದ್ದಾರೆ. ಇವರ ಮನೆಗೆ ಲಿಖಿತ ಹತ್ತು ದಿನಗಳ ಹಿಂದೆಯಷ್ಟೆ ಬಂದಿದ್ದಳು. ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಇವರ ಮನೆ ಸಮೀಪವಿರುವ ರೈಲ್ವೆ ನಿಲ್ದಾಣದ ಹಳಿ ಬಳಿ ಹೋಗಿ ರೈಲು ಬರುವುದನ್ನೇ ಕಾದು ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾಳೆ.

ಲಿಖಿತ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು. ಹಾಗಾಗಿ ವಾತಾವರಣ ಬದಲಾವಣೆಗಾಗಿ ಆಕೆಯನ್ನು ಅಕ್ಕ-ಭಾವ ತಮ ಮನೆಗೆ ಕರೆಸಿಕೊಂಡಿದ್ದರು. ಪ್ರೇಮ ವೈಫಲ್ಯದಿಂದ ಆತಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸುದ್ದಿ ತಿಳಿದು ಯಶವಂತಪುರ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News