Thursday, December 7, 2023
Homeರಾಷ್ಟ್ರೀಯರಾಮ್‍ಲೀಲಾ ಪಂಡಲ್ ಹಿಂದೆ ಯುವಕನ ಹತ್ಯೆ

ರಾಮ್‍ಲೀಲಾ ಪಂಡಲ್ ಹಿಂದೆ ಯುವಕನ ಹತ್ಯೆ

ಗುರುಗ್ರಾಮ್,ಅ. 20 (ಪಿಟಿಐ)- ಇಂದು ಮುಂಜಾನೆ ಇಲ್ಲಿನ ರಾಮಲೀಲಾ ಪಂಡಲ್‍ನ ಹಿಂದೆ ಇಬ್ಬರು ವ್ಯಕ್ತಿಗಳೊಂದಿಗೆ ನಡೆದ ವಾಗ್ವಾದದ ನಂತರ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡಿಜೆ ಆಪರೇಟರ್ ಜೊತೆ ಕೆಲಸ ಮಾಡುತ್ತಿದ್ದ ಆಶಿಶ್ (20) ಕೊಲೆಯಾದ ದುರ್ದೈವಿಯಾಗಿದ್ದಾನೆ. ಈತ ಸ್ನೇಹಿತನೊಂದಿಗೆ ರಾಮಲೀಲಾ ವೀಕ್ಷಿಸಲು ತೆರಳಿದ್ದ. ಜಗಳದ ಹಿಂದಿನ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಜಗಳದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಭೀಮ್ ನಗರದ ನಿವಾಸಿ ಆಶಿಶ್ ಅವರನ್ನು ಆಸ್ಪತ್ರೆಗೆ ಸಾಗಿಸಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆಶಿಶ್ ಅವರ ಚಿಕ್ಕಪ್ಪ ಸೂರಜ್ ನೀಡಿದ ದೂರಿನ ಪ್ರಕಾರ, ಗುರುವಾರ ರಾತ್ರಿ ಅವರ ಸೋದರಳಿಯ ತನ್ನ ಸ್ನೇಹಿತ ಕರಣ್ ಅವರೊಂದಿಗೆ ರಾಮಲೀಲಾ ವೀಕ್ಷಿಸಲು ಹೋಗಿದ್ದರು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸೂರಜ್‍ಗೆ ಆಶಿಶ್‍ಗೆ ಗುಂಡು ತಗುಲಿದ ಮಾಹಿತಿ ಲಭಿಸಿದೆ.

ವಸುಂಧರಾ ರಾಜೆ ಅವರನ್ನು ಸ್ಮರಿಸಿಕೊಂಡ ಗೆಹ್ಲೋಟ್

ಆಸ್ಪತ್ರೆಗೆ ತಲುಪಿದ ನಂತರ, ಆಶಿಶ್ ಸ್ನೇಹಿತರಾದ ಕರಣ್ ಮತ್ತು „ೀರಜ್ ಅವರು ನಿಶಿ ಮತ್ತು ರೋಹನ್ ಎಂಬ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ, ಅವರೊಂದಿಗೆ ಜಗಳವಾಡಿದರು ಎಂದು ಸೂರಜ್ ದೂರಿನಲ್ಲಿ ತಿಳಿಸಿದ್ದಾರೆ.

ಸೂರಜ್ ದೂರಿನ ಆಧಾರದ ಮೇಲೆ ನಿಶಿ ಮತ್ತು ರೋಹನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಶಸಾಸ ಕಾಯ್ದೆಯಡಿಯಲ್ಲಿ FIR ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಗ್ವಾದದ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಗಳು ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ಸಬ್ ಇನ್ಸ್‍ಪೆಕ್ಟರ್ ಬಹಿ ರಾಮ್ ಕಟಾರಿಯಾ ತಿಳಿಸಿದ್ದಾರೆ.

RELATED ARTICLES

Latest News