Wednesday, December 4, 2024
Homeರಾಜ್ಯಚುನಾವಣೆಯಲ್ಲಿ ಸೋತ ಡಿ.ಕೆ.ಸುರೇಶ್‌ ಅವರನ್ನು ಭೇಟಿ ಮಾಡಿದ ಸಚಿವ ಜಮೀರ್‌ ಅಹಮದ್‌

ಚುನಾವಣೆಯಲ್ಲಿ ಸೋತ ಡಿ.ಕೆ.ಸುರೇಶ್‌ ಅವರನ್ನು ಭೇಟಿ ಮಾಡಿದ ಸಚಿವ ಜಮೀರ್‌ ಅಹಮದ್‌

ಬೆಂಗಳೂರು,ಜೂ.5- ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲು ಕಂಡ ಸಂಸದ ಡಿ.ಕೆ.ಸುರೇಶ್‌ ಅವರನ್ನು ವಸತಿ ಹಾಗೂ ವಕ್ಫ್ ಸಚಿವ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಹಲವಾರು ಮಂದಿ ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲೇ ಅತ್ಯುತ್ತಮವಾಗಿ ಕೆಲಸ ಮಾಡಿದ ಸಂಸದರ ಪೈಕಿ ಡಿ.ಕೆ.ಸುರೇಶ್‌ ಮುಂಚೂಣಿಯಲ್ಲಿದ್ದರು. ಬೇರೆಯವರು ಭಾನುವಾರ ರಜೆ ತೆಗೆದುಕೊಳ್ಳುತ್ತಿದ್ದರು. ಆದರೆ ಡಿ.ಕೆ.ಸುರೇಶ್‌ ಆ ದಿನವೂ ಕೂಡ ವಿಶ್ರಾಂತಿ ಪಡೆಯದೆ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಂಥವರು ಸೋತಿದ್ದು ನೋವು ತಂದಿದೆ ಎಂದರು.

ಜೆಡಿಎಸ್‌‍-ಬಿಜೆಪಿ ಮೈತ್ರಿಯಿಂದಾಗಿ ಡಿ.ಕೆ.ಸುರೇಶ್‌ ಸೋಲು ಕಂಡಿಲ್ಲ. ಜನ ಸೋಲಿಸಿದ್ದಾರೆ. ಉತ್ತಮವಾಗಿ ಕೆಲಸ ಮಾಡುವವರನ್ನು ಸೋಲಿಸಿದ್ದು ಅಚ್ಚರಿ ಮೂಡಿಸಿದೆ. ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದೆವು. ಈ ಬಾರಿ 9 ರಲ್ಲಿ ಗೆಲುವು ಕಂಡಿದ್ದೇವೆ. ಇದು ಸಮಾಧಾನ ತರುವ ವಿಚಾರ ಎಂದು ಹೇಳಿದರು.

ಬಿಜೆಪಿಯ ಶಾಸಕರಾದ ಎಸ್‌‍.ಡಿ.ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಅವರು ಡಿ.ಕೆ.ಸುರೇಶ್‌ ಅವರ ಮನೆಗೆ ಆಗಮಿಸಿ ಸುದೀರ್ಘ ಚರ್ಚೆ ನಡೆಸಿದರು.ಕಾಂಗ್ರೆಸ್‌‍ ಪಕ್ಷದ ಹಲವು ಶಾಸಕರು ಡಿ.ಕೆ.ಸುರೇಶ್‌ ಅವರಿಗೆ ಸಮಾಧಾನ ಹೇಳಿದ್ದು ಕಂಡುಬಂದಿತು.

RELATED ARTICLES

Latest News