Thursday, June 20, 2024
Homeಜಿಲ್ಲಾ ಸುದ್ದಿಗಳುಸೆಲ್ಫೀ ವಿಡಿಯೋ ಮಾಡಿ ಸೆಕ್ಯೂರಿಟಿ ಗಾರ್ಡ್‌ ಆತ್ಮಹತ್ಯೆ

ಸೆಲ್ಫೀ ವಿಡಿಯೋ ಮಾಡಿ ಸೆಕ್ಯೂರಿಟಿ ಗಾರ್ಡ್‌ ಆತ್ಮಹತ್ಯೆ

ಮೈಸೂರು, ಜೂ. 5-ಮಾಡದ ತಪ್ಪಿಗೆ ನನ್ನನ್ನು ಹೊಣೆ ಮಾಡಿದ್ದಾರೆಂದು ಮನನೊಂದು ಫ್ಯಾಕ್ಟರಿ ಸೆಕ್ಯೂರಿಟಿ ಗಾರ್ಡ್‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನಂಜನಗೂಡು ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ನಂಜೇಶ್‌ ಆತ್ಮಹತ್ಯೆ ಮಾಡಿಕೊಂಡ ಸೆಕ್ಯೂರಿಟಿ ಗಾರ್ಡ್‌.

ನಂಜನಗೂಡಿನ ಕಲ್ಮಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ರೆಹಾನ್ಸ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಫ್ಯಾಕ್ಟರಿಯಲ್ಲಿ ಕಳ್ಳತನವಾಗಿದ್ದು, ಈ ಆರೋಪವನ್ನು ನಂಜೇಶ್‌ ಮೇಲೆ ಹೊರಿಸಲಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದು ಫ್ಯಾಕ್ಟರಿ ಆವರಣದಲ್ಲೇ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕ್ಷಮಿಸುವಂತೆ ಮನವಿ ಮಾಡಿದ್ದಾರೆ. ತಾನು ಮಾಡದ ತಪ್ಪಿಗೆ ಕೆಲವರು ನನ್ನನ್ನ ಹೊಣೆ ಮಾಡಿದ್ದಾರೆ. ಆದರೆ ನಂಜೇಶ್‌ ಸಹೋದರ ನೀಡಿರುವ ದೂರು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸರಿಯಾದ ಕೆಲಸ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನೀಡಿರುವ ಹೇಳಿಕೆ ಅನುಮಾನಕ್ಕೆ ಕಾರಣವಾಗುತ್ತಿದೆ.

ನಂಜೇಶ್‌ ಮೇಲೆ ಹೇರಿದ ಒತ್ತಡವಾದರೂ ಏನು ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ದೂರು ದಾಖಲಿಸಿಕೊಂಡಿರುವ ನಂಜನಗೂಡು ಟೌನ್‌ ಪೊಲೀಸರು ತನಿಖೆ ನಡೆಸಬೇಕಿದೆ.

RELATED ARTICLES

Latest News