Monday, November 25, 2024
Homeಕ್ರೀಡಾ ಸುದ್ದಿ | Sportsಪಾಕ್‌ ಪರ ಆಡಲ್ಲ ಎಂದ ಸಿಕಂದರ್‌ ರಜ್ಹಾ

ಪಾಕ್‌ ಪರ ಆಡಲ್ಲ ಎಂದ ಸಿಕಂದರ್‌ ರಜ್ಹಾ

ನವದೆಹಲಿ,ಆ.4– ಜಿಂಬಾಂಬ್ವೆಯ ಆಲ್‌ರೌಂಡರ್‌ ಸಿಖಂದರ್‌ ರಜ್ಹಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಪರವಾಗಿ ಆಡಲು ನಿರಾಕರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಸಿಖಂದರ್‌ ರಜ್ಹಾ ಪಾಕಿಸ್ತಾನದಲ್ಲಿ ಜನಿಸಿದ್ದರು. ಬಳಿಕ ಪೋಷಕರೊಂದಿಗೆ ಆಫ್ರಿಕಾದ ದೇಶವೊಂದಕ್ಕೆ ಸ್ಥಳಾಂತರಗೊಂಡಿದ್ದರು.ಸಿಖಂದರ್‌ ವೈಟ್‌ಬಾಲ್‌ ಕ್ರಿಕೆಟ್‌ನ ಆಟಗಾರರಲ್ಲಿ ಉತ್ತಮ ಶ್ರೇಣಿಯಲ್ಲಿದ್ದಾರೆ. ಟಿ-20 ಐ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

ಟಿ-20 ವಿಶ್ವಸರಣಿಯ ಭಾಗವಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಮ ಆಕ್ರಮಣಾಕಾರಿ ಬ್ಯಾಟಿಂಗ್‌ನಿಂದ ಖ್ಯಾತನಾಮರಾಗಿದ್ದು, ವಿಕೆಟ್‌ ಗಳಿಸುವ ಸಾಮರ್ಥ್ಯ ಹಾಗೂ ಸುರಕ್ಷತಾ ಕ್ಷೇತ್ರಪಾಲಕರಾಗಿಯೂ ಹೆಸರುವಾಸಿಯಾಗಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರದಲ್ಲಿ ಭಾಗವಹಿಸಿದ್ದ ರಜ್ಹಾ ಅವರಿಗೆ ಉಮರ್‌ಫಾರುಕ್‌ ಕಲ್ಸೋನ್‌ ಎಂಬುವರು ಪಾಕಿಸ್ತಾನದ ಪರವಾಗಿ ಆಟವಾಡುವ ಯೋಚನೆಯಿದೆಯೇ?, ಪಾಕಿಸ್ತಾನದಲ್ಲಿನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿರುವ ಸಿಕಂದರ್‌ ರಜ್ಹಾ, ನಾನು ಪಾಕಿಸ್ತಾನದಲ್ಲಿ ಹುಟ್ಟಿದ್ದೇನೆ ಮತ್ತು ಜಿಂಬಾಂಬ್ವೆ ಕ್ರಿಕೆಟ್‌ನ ಪ್ರಾಡೆಕ್ಟ್‌ ಆಗಿದ್ದೇನೆ. ನಾನು ಜಿಂಬಾಂಬ್ವೆ ತಂಡಕ್ಕೆ ಯಾವಾಗಲೂ ಮೀಸಲಾಗಿದ್ದೇನೆ. ಜಿಂಬಾಂಬ್ವೆ ನನ್ನ ಮೇಲೆ ಸಮಯ ಮತ್ತು ಹಣವನ್ನು ಖರ್ಚು ಮಾಡಿದೆ.

ಅವರ ನಂಬಿಕೆಗೆ ಮರುಪಾವತಿಸಲು ಪ್ರಯತ್ನಿಸುತ್ತೇನೆ. ನಾನೇನೇ ಸಾಧನೆ ಮಾಡಿದರೂ ಅವರ ವಿಶ್ವಾಸಕ್ಕೆ ಪ್ರತಿಯಾಗಿ ನೀಡಲು ಕಷ್ಟಸಾಧ್ಯ. ಜಿಂಬಾಂಬ್ವೆ ನನ್ನದು. ನಾನು ಪೂರ್ತಿಯಾಗಿ ಜಿಂಬಾಂಬ್ವೆಗೆ ಸೇರಿದವನು ಎಂದು ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದಲ್ಲೇ ಹುಟ್ಟಿದರೂ ಆ ದೇಶದ ಕ್ರಿಕೆಟ್‌ ತಂಡದ ಪರವಾಗಿ ಆಟವಾಡಲು ನಿರಾಕರಿಸಿರುವ ರಜ್ಹಾ ಅವರ ನಿಲುವಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

RELATED ARTICLES

Latest News