ಬೆಂಗಳೂರು, ಮೇ 11- ಲೋಕಸಭಾ ಚುನಾವನೆ ಮುಗಿಯುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ನನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಕೊಡುವುದಾಗಿ ಜನತಾ ಪಕ್ಷ ಪ್ರಕಟಿಸಿದೆ.
ಆರೋಪಿ ಪ್ರಜ್ವಲ್ನನ್ನು ಹುಡುಕುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಪ್ರಕಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಇದುವರೆಗೆ ಪತ್ತೆ ಹಚ್ಚಿ ಬಂಧಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪ್ರಜ್ವಲ್ನನ್ನು ಹುಡುಕಿ ಕೊಟ್ಟವರಗೆ 1 ಲಕ್ಷ ರೂ. ಬಹುಮಾನ ಕೊಡುವುದಾಗಿ ಪೋಸ್ಟರ್ನಲ್ಲಿ ಪ್ರಕಟಿಸಿದೆ.
ಪೊಲೀಸ್ ವಶಕ್ಕೆ :
ಈ ನಡುವೆ ನಗರದ ಶಿವಾನಂದ ಸರ್ಕಲ್ನಲ್ಲಿ ಈ ಬಗ್ಗೆ ಪೋಸ್ಟರ್ ಅಂಟಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ನಾಗೇಶ್ ಎಂಬಾತನನ್ನು ಹೈಗ್ರೌಂಡ್್ಸ ಠಾಣೆ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.