Saturday, July 27, 2024
Homeಅಂತಾರಾಷ್ಟ್ರೀಯಪಾಕಿಸ್ತಾನದಲ್ಲಿ ಬಸ್‌‍ ಕಂದರಕ್ಕೆ ಉರುಳಿ ಬಿದ್ದು 10 ಮಂದಿ ಸಾವು

ಪಾಕಿಸ್ತಾನದಲ್ಲಿ ಬಸ್‌‍ ಕಂದರಕ್ಕೆ ಉರುಳಿ ಬಿದ್ದು 10 ಮಂದಿ ಸಾವು

ಪೇಶಾವರ, ಮೇ 3 (ಪಿಟಿಐ) ಬಸ್‌‍ ಕಂದಕಕ್ಕೆ ಉರುಳಿ 10 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ವಾಯುವ್ಯ ಪಾಕಿಸ್ತಾನದಲ್ಲಿ ಇಂದು ಬೆಳಿಗ್ಗೆ ಪ್ರಯಾಣಿಕರ ಬಸ್ಸೊಂದು ಪರ್ವತ ಪ್ರದೇಶದಿಂದ ಸ್ಕಿಡ್‌ ಆಗಿ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

30 ಪ್ರಯಾಣಿಕರಿದ್ದ ಬಸ್‌‍ ರಾವಲ್ಪಿಂಡಿಯಿಂದ ಗಿಲ್ಗಿಟ್‌ಗೆ ಸಂಚರಿಸುತ್ತಿದ್ದಾಗ ಗಿಲ್ಗಿಟ್‌- ಬಾಲ್ಟಿಸ್ತಾನ್‌ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪಾಕ್‌ ಪೊಲೀಸರು ತಿಳಿಸಿದ್ದಾರೆ.ಕನಿಷ್ಠ 30 ಪ್ರಯಾಣಿಕರಿದ್ದ ಬಸ್‌‍ ರಾವಲ್ಪಿಂಡಿಯಿಂದ ಗಿಲ್ಗಿಟ್‌ಗೆ ತೆರಳುತ್ತಿದ್ದಾಗ ಗಿಲ್ಗಿಟ್‌‍-ಬಾಲ್ಟಿಸ್ತಾನ್‌ ಪ್ರದೇಶದ ಡೈಮರ್‌ ಜಿಲ್ಲೆಯ ಕರಕೋರಂ ಹೆದ್ದಾರಿಯ ಸಮೀಪದ ಕಂದರಕ್ಕೆ ಬಸ್‌‍ ಉರುಳಿ 10 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬದುಕುಳಿದವರ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನು ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

RELATED ARTICLES

Latest News