Saturday, May 18, 2024
Homeಬೆಂಗಳೂರುಘನತ್ಯಾಜ್ಯ ವಿಲೇವಾರಿಗೆ 100 ಎಕರೆ ಜಾಗ

ಘನತ್ಯಾಜ್ಯ ವಿಲೇವಾರಿಗೆ 100 ಎಕರೆ ಜಾಗ

ಬೆಂಗಳೂರು,ಅ.10- ಬೆಂಗಳೂರಿನ ನಾಲ್ಕು ಮೂಲೆಗಳನ್ನು ಘನತ್ಯಾಜ್ಯ ವಿಲೇವಾರಿಗೆ ತಲಾ 100 ಎಕರೆ ಜಾಗ ಗುರುತಿಸಲಾಗುವುದೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದಿಲ್ಲಿ ತಿಳಿಸಿದರು. ವಿಧಾನಸೌಧದಲ್ಲಿ ಇಂದು ನಡೆದ ತಿಪ್ಪೇಗೊಂಡನಹಳ್ಳಿ ಜಲಾಶಯ ವ್ಯಾಪ್ತಿಯ ವಿವಿಧ ವಲಯಗಳ ಬಫರ್ ಅಂತರ ಕಡಿಮೆ ಮಾಡುವುದು ಸೇರಿದಂತೆ ಜಲಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಘನತ್ಯಾಜ್ಯ ವಿಲೇವಾರಿಗೆ ಗುರುತಿಸಲಾದ ಅರಣ್ಯ ಭೂಮಿಯಾಗಿದ್ದರೆ ಪರ್ಯಾಯ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಾಗುವುದು, ಇಲ್ಲವೇ ಹಣ ನೀಡಲಾಗುವುದು ಎಂದರು. ಆನೇಕಲ್, ದಾಸರಹಳ್ಳಿ ಸೇರಿದಂತೆ ಕೆಲವೆಡೆ ಊರಿನ ಬಳಿಯೇ ಕಸ ವಿಲೇವಾರಿ ಘಟಕಗಳಿವೆ. ಅವುಗಳನ್ನು ಸ್ಥಳಾಂತರ ಮಾಡಲು ಸಿದ್ದತೆ ಮಾಡಲಾಗಿದೆ, ಕಲ್ಲುಗುಡ್ಡೆಗಳಿಂದ ಕೂಡಿದ ಪ್ರದೇಶ ವಾಸನೆ ಬರದಂತಹ ಜಾಗವನ್ನು ಗುರುತಿಸಲು ಸೂಚಿಸಲಾಗಿದೆ ಎಂದರು. ಬೆಂಗಳೂರು ಸುತ್ತಮುತ್ತಲಿನ ಅರಣ್ಯ ಮತ್ತು ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಇಂದಿನ ಸಭೆ ನಡೆಸಲಾಗಿತ್ತು.

ಬಿಡಿಎ ಮತ್ತು ಬೆಂಗಳೂರು ಜಲಮಂಡಳಿ ಅರಣ್ಯ ಇಲಾಖೆಯಿಂದ ತೊಂದರೆಯಾಗುತ್ತಿದ್ದು, ಬಫರ್ ವಲಯಗಳಲ್ಲಿ ಮರಗಳಿಲ್ಲದಿದ್ದರೆ ಆಕ್ಷೇಪವಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮೌಖಿಕವಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. 2003ರಲ್ಲಿ ಸುಮಾರು ಒಂದು ಸಾವಿರ ನಿವೇಶನಗಳನ್ನು ಬಿಡಿಎಯಿಂದ ಹಂಚಿಕೆ ಮಾಡಲಾಗಿದೆ. ಅಂತಹ ನಿವೇಶನಗಳಲ್ಲಿ ಮನೆ ಕಟ್ಟಲು ಅರಣ್ಯ ಇಲಾಖೆಯಿಂದ ಅಡ್ಡಿ ಆಗುತ್ತಿತ್ತು. ಮರಗಳಿಲ್ಲದಿದ್ದರೆ ಆಕ್ಷೇಪ ಮಾಡುವುದಿಲ್ಲ ಭರವಸೆ ಅರಣ್ಯ ಇಲಾಖೆಯಿಂದ ಸಿಕ್ಕಿದೆ ಎಂದರು.

ತಿಪ್ಪೆಗೊಂಡನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಕೆಲವು ಕಾನೂನು ಬಾಹಿರ ಕಟ್ಟಡಗಳು ತಲೆ ಎತ್ತುತ್ತಿವೆ. ಈ ಹಿನ್ನೆಲೆಯಲ್ಲಿ ತಿಪ್ಪೆಗೊಂಡನಹಳ್ಳಿ ಜಲಾಶಯದ ಮಾಲಿನ್ಯವಾಗದಂತೆ ನೆಲಮಂಗಲ, ಡಾಬಸ್‍ಪೇಟೆ, ಶಿವಗಂಗೆ ಪ್ರದೇಶದಲ್ಲಿ ಕೆಂಪು ವಲಯಗಳ ಕೈಗಾರಿಕೆಗಳನ್ನು ಮಾಡಬಾರದು ಹಾಗೂ ರಾಜಕಾಲುವೆಯ 500 ಮೀ. ಅಂತರದಲ್ಲಿ ಯೋಜನೆಗೆ ಅನುಮೋದನೆ ನೀಡಬಾರದೆಂಬ ನಿಯಮವಿದೆ, ಇಲ್ಲಿನ ಜನರ ಸಮಸ್ಯೆಗಳಿಗೆ ಖಾಯಂ ಪರಿಹಾರ ರೂಪಿಸಲು ಕಾನೂನು ನಗರಾಭಿವೃದ್ಧಿ ಇಲಾಖೆ, ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಲಿದೆ ಎಂದರು.

ಸೋಲಾರ್ ವಿದ್ಯುತ್
ತಿಪ್ಪೆಗೊಂಡನಹಳ್ಳಿ ಹಾಗೂ ಹೆಸರಘಟ್ಟ ಜಲಾಶಯದ ಬಳಿ ಬೆಂಗಳೂರು ಜಲಮಂಡಳಿಯ ಜಮೀನು ಇದ್ದು ಆ ಜಮೀನಿನಲ್ಲಿ ಮಂಡಳಿಯ ಬಳಕೆಗಾಗಿ ಸೋಲಾರ್ ವಿದ್ಯುತ್ ಉತ್ಪಾದಿಸಲು ತೀರ್ಮಾನಿಸಲಾಗಿದೆ ಎಂದರು. ಜಲಮಂಡಳಿಯು ಒಂದು ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತಿದೆ. ಪ್ರತಿ ಯುನಿಟ್‍ಗೆ 6 ರೂ. ವೆಚ್ಚ ತಗುಲುತ್ತಿದ್ದು, ಸೋಲಾರ್ ವಿದ್ಯುತ್ ಉತ್ಪಾದನೆಯಾದರೆ ಪ್ರತಿ ಯುನಿಟ್‍ಗೆ 4 ರೂ. ವೆಚ್ಚವಾಗಲಿದೆ. ಉತ್ಪಾದಿತ ಸೌರ ವಿದ್ಯುತನ್ನು ಜಲಮಂಡಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮೇಕೆದಾಟು ಜಲಾಶಯದಲ್ಲಿ ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯವಾಗಿ ರಾಮನಗರ, ಮಂಗಳೂರು, ಮಂಡ್ಯ ಮತ್ತಿತರ ಜಿಲ್ಲೆಗಳಲ್ಲಿ ನೀಡಲಾಗುವುದು. ಬೆಂಗಳೂರು ಸುತ್ತಮುತ್ತ ಆನೆ, ಚಿರತೆ ಹಾವಳಿ ತಡೆಗೆ ರಕ್ಷಣೆ ಒದಗಿಸುವಂತೆ ಅರಣ್ಯ ಇಲಾಖೆ ಕೋರಿದ್ದು, ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದರು.

470 ಕೋಟಿ ರೂ. ಸೈಬರ್ ವಂಚನೆ ಪತ್ತೆ, 27.68 ಕೋಟಿ ರೂ.ವಾರಸುದಾರರಿಗೆ ಹಸ್ತಾಂತರ

ಪ್ರತಿಕ್ರಿಯೆ ಇಲ್ಲ
ತಮಿಳುನಾಡು ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾವು ನಮ್ಮ ರೈತರ ಹಿತವನ್ನು ಕಾಪಾಡಿದ್ದೇವೆ. ರಾಜ್ಯದಲ್ಲಿರುವ ಬರ ಪರಿಸ್ಥಿತಿ ಕೃತಕವೋ ವಾಸ್ತವವೋ ಎಂಬುವುದು ಎಲ್ಲರಿಗೂ ಗೊತ್ತಿದೆ. ಕೇಂದ್ರದ ತಂಡ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದೆ ಎಂದರು. ಬಿಜೆಪಿಯವರು ಮಾರ್ಗದರ್ಶನ ಮಾಡಿದ್ದಂತೆ ನಾವು ಆರ್ ಆರ್ ನಗರದ ವಿಧಾನ ಸೌಧ ಕ್ಷೇತ್ರದಲ್ಲಿ ಅನುದಾನದ ವಿಚಾರದಲ್ಲಿ ಕ್ರಮಕೈಗೊಂಡಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಐಸಿಸಿ ಪ್ರಶಸ್ತಿಗಾಗಿ ಗಿಲ್-ಸಿರಾಜ್ ಫೈಟ್

ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಂಸದರಾದ ಡಿವಿ ಸದಾನಂದ, ಡಿಕೆ ಸುರೇಶ್, ಶಾಸಕರಾದ ಎಸ್‍ಟಿ ಸೋಮಶೇಖರ್, ಶ್ರೀನಿವಾಸ್, ಎಸ್ ರವಿ, ಶಶಿ ಕಿರಣ್ ಶೆಟ್ಟಿ, ಜಲಸಂಪನ್ಮೂಲ ಇಲಾಖೆ ಅಪರಮುಖಿ ಕಾರ್ಯದರ್ಶಿ ರಾಕೇಶ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಜಯರಾಮ್ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

Latest News