Thursday, May 2, 2024
Homeಅಂತಾರಾಷ್ಟ್ರೀಯಇಂಡೋನೇಷ್ಯಾದಲ್ಲಿ ಚೀನಾ ಒಡೆತನದ ನಿಕಲ್ ಸ್ಥಾವರದಲ್ಲಿ ಸ್ಫೋಟ, 13 ಕಾರ್ಮಿಕರು ಸಾವು

ಇಂಡೋನೇಷ್ಯಾದಲ್ಲಿ ಚೀನಾ ಒಡೆತನದ ನಿಕಲ್ ಸ್ಥಾವರದಲ್ಲಿ ಸ್ಫೋಟ, 13 ಕಾರ್ಮಿಕರು ಸಾವು

ಪಾಲು (ಇಂಡೋನೇಷ್ಯಾ), ಡಿ 24- ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿರುವ ಚೀನಾದ ಒಡೆತನದ ನಿಕಲ್ ಸ್ಥಾವರದಲ್ಲಿ ಇಂದು ಕರಗಿಸುವ ಕುಲುಮೆ ಸ್ಫೋಟಗೊಂಡಿದ್ದು, 13 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 12 ಜನರು ಗಾಯಗೊಂಡಿದ್ದಾರೆ.

ಇಂಡೋನೇಷ್ಯಾದ ನಿಕಲ್ ಸ್ಮೆಲ್ಟಿಂಗ್ ಪ್ಲಾಂಟ್‍ಗಳಲ್ಲಿ ಸಂಭವಿಸಿದ ಮಾರಣಾಂತಿಕ ದುರಂತಗಳ ಸರಣಿಯಲ್ಲಿ ಇದು ಇತ್ತೀಚಿನದು, ಇದು ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಎಂದು ಕರೆಯಲ್ಪಡುವ ಚೀನಾದ ಮಹತ್ವಾಕಾಂಕ್ಷೆಯ ಬಹುರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿದೆ ಎಂದು ಪೊಲೀಸರು ಮತ್ತು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ಉತ್ಪಾದನೆಯಲ್ಲಿ ನಿಕಲ್ ಪ್ರಮುಖ ಅಂಶವಾಗಿದೆ. ಇದನ್ನು ತಯಾರಿಸುವ ಕಾರ್ಖಾನೆಯ ಕುಲುಮೆಯನ್ನು ದುರಸ್ತಿ ಮಾಡುವಾಗ ಹಠಾತ್ತನೆ ಸ್ಪೋಟಗೊಂಡಿದೆ. ಮೃತರಲ್ಲಿ ಐದು ಚೀನಿಯರು ಮತ್ತು 8ಇಂಡೋನೇಷಿಯಾದ ಕಾರ್ಮಿಕರು ಎಂದು ಸೆಂಟ್ರಲ್ ಸುಲವೆಸಿ ಪೊಲೀಸ್ ಮುಖ್ಯಸ್ಥ ಅಗುಸ್ ನುಗ್ರೊಹೋ ಹೇಳಿದ್ದಾರೆ.ಕುಮಾರಸ್ವಾಮಿಯವರನ್ನು ನಿಂದಿಸುವುದು ಕಾಂಗ್ರೆಸ್‍ಗೆ ಅಂಟಿದ ಬೇನೆ : ಜೆಡಿಎಸ್

ಸ್ಪೋಟವು ತುಂಬಾ ಶಕ್ತಿಯುತವಾಗಿತ್ತು ಅದು ಕುಲುಮೆಯನ್ನು ಕೆಡವಿತು ಮತ್ತು ಕಟ್ಟಡದ ಪಕ್ಕದ ಗೋಡೆಗಳ ಭಾಗಗಳನ್ನು ಹಾನಿಗೊಳಿಸಿತು ಸುಮಾರು 38 ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ಈ ಘಟನೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಅಪಘಾತಕ್ಕೆ ಕಾರಣವೇನು ಎಂಬುದನ್ನು ತನಿಖೆ ಮಾಡಲು ನಾವು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿಯ ವಕ್ತಾರ ಡೆಡ್ಡಿ ಕುರ್ನಿಯಾವಾನ್ ಹೇಳಿದ್ದಾರೆ.

ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಕರು ಬೆಂಕಿಯನ್ನು ನಂದಿಸಿ ಕಾರ್ಮಿಕರನ್ನು ಸ್ಥಳಾಂತರಿಸಿದ್ದಾರೆ ಎಂದು ಅವರು ಹೇಳಿದರು. ಪ್ರಾಥಮಿಕ ತನಿಖೆಯ ಪ್ರಕಾರ ಕುಲುಮೆಯ ಕೆಳಭಾಗದಲ್ಲಿ ಸೋಟಕ ದ್ರವಗಳು ಇದ್ದವು, ಅದು ಹತ್ತಿರದಲ್ಲಿದ್ದ ಆಮ್ಲಜನಕ ಸಿಲಿಂಡರ್‍ಗಳು ಬೆಂಕಿ ಮತ್ತು ಸ್ಪೋಟವನ್ನು ಪ್ರಚೋದಿಸಿತು.

ಇಂಡೋನೇಷ್ಯಾದಲ್ಲಿ ಅತಿ ಹೆಚ್ಚು ನಿಕಲ್ ನಿಕ್ಷೇಪಗಳನ್ನು ಹೊಂದಿರುವ ಸೆಂಟ್ರಲ್ ಸುಲವೆಸಿ ಪ್ರಾಂತ್ಯದಲ್ಲಿ ಚೀನಾ-ಮಾಲೀಕತ್ವದ ನಿಕಲ್ ಸ್ಮೆಲ್ಟಿಂಗ್ ಪ್ಲಾಂಟ್‍ಗಳಲ್ಲಿ ಈ ವರ್ಷ ಸಂಭವಿಸಿದ ಮೂರನೇ ಮಾರಣಾಂತಿಕ ಅಪಘಾತವಾಗಿದೆ. ಏಪ್ರಿಲ್‍ನಲ್ಲಿ ನಿಕಲ್ ತ್ಯಾಜ್ಯ ವಿಲೇವಾರಿ ಸ್ಥಳದ ಕುಸಿತದ ನಂತರ ಕಪ್ಪು ಕೆಸರು ತರಹದ ವಸ್ತುಗಳಲ್ಲಿ ಮುಳುಗಿ ಇಬ್ಬರು ಡಂಪ್ ಟ್ರಕ್ ನಿರ್ವಾಹಕರು ಸಾವನ್ನಪ್ಪಿದರು.

RELATED ARTICLES

Latest News