Friday, May 17, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-12-2023)

ನಿತ್ಯ ನೀತಿ : ಗೆಲುವು ಎಷ್ಟು ಸುಖದ ಅನುಭೂತಿ ಕೊಡುವುದೋ, ಸೋಲು ಕೂಡ ಹಾಗೆಯೇ ಒಂದು ಅನುಭವ. ಸೋಲು ಎನ್ನುವುದು ಮುಂದಿನ ಗೆಲುವಿನ ಹೆಜ್ಜೆ. ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು.

ಪಂಚಾಂಗ ಸೋಮವಾರ 25-12-2023
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ರೋಹಿಣಿ / ಯೋಗ: ಶುಭ / ಕರಣ: ಗರಜೆ

ಸೂರ್ಯೋದಯ : ಬೆ.06.39
ಸೂರ್ಯಾಸ್ತ ; 06.01
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಮನೆಯಲ್ಲಿ ಕಿರಿಕಿರಿ ಉಂಟಾಗಲಿದೆ. ಹಣದ ಸಮಸ್ಯೆ ಹೆಚ್ಚಾಗಿ ಕಾಡಲಿದೆ.
ವೃಷಭ: ಉದ್ಯೋಗದಲ್ಲಿ ಸಮಸ್ಯೆ ಕಂಡುಬರಲಿದೆ. ಇತರ ರೊಂದಿಗಿನ ಜಗಳದಿಂದಾಗಿ ನೆಮ್ಮದಿ ಇರುವುದಿಲ್ಲ.
ಮಿಥುನ: ತಾಳ್ಮೆಯಿಂದ ವರ್ತಿಸಿದರೆ ಸುಲಭವಾಗಿ ಕಾರ್ಯಸಾಧನೆಯಾಗಲಿದೆ.

ಕಟಕ: ಆಕಸ್ಮಿಕ ಧನಲಾಭವಾಗುವುದು. ಬಂಧು-ಮಿತ್ರರ ಸಹಾಯ ದೊರೆಯಲಿದೆ.
ಸಿಂಹ: ಅಪೇಕ್ಷಿತ ಜನರಿಂದ ಕಾರ್ಯಸಾಧನೆಯಾಗಲಿದೆ.
ಕನ್ಯಾ: ವ್ಯಾಪಾರದಲ್ಲಿ ನಷ್ಟ ಉಂಟಾದರೂ ಕೆಲವು ಶುಭ ಫಲಗಳನ್ನು ನಿರೀಕ್ಷಿಸಬಹುದು.

ತುಲಾ: ನೂತನ ವ್ಯವಹಾರಕ್ಕೆ ಕೈ ಹಾಕಿ ದುಡುಕದಿರಿ. ಆಲೋಚಿಸಿ ತೀರ್ಮಾನ ಕೈಗೊಳ್ಳುವುದು ಬಹಳ ಒಳಿತು.
ವೃಶ್ಚಿಕ: ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ.
ಧನುಸ್ಸು: ದೈನಂದಿನ ಚಟುವಟಿಕೆಗಳಲ್ಲಿ ಅಭಿವೃದ್ಧಿ ಸಿಗಲಿದೆ. ದೂರ ಪ್ರಯಾಣ ಮಾಡುವಿರಿ.

ಮಕರ: ಉತ್ತಮ ದೈವಬಲವಿದ್ದು, ಎಲ್ಲ ರೀತಿಯ ಅನುಕೂಲಗಳು ದೊರೆಯಲಿವೆ.
ಕುಂಭ: ಬಂಧು-ಮಿತ್ರರ ಸಮಸ್ಯೆ ಮತ್ತು ಹಣಕಾಸಿನ ತೊಂದರೆ ಕಾಡಲಿದೆ.
ಮೀನ: ಉದ್ಯೋಗದಲ್ಲಿ ತೊಂದರೆಗಳು ಕಾಣಿಸಿಕೊಳ್ಳಲಿವೆ. ವ್ಯಾಪಾರಿಗಳಿಗೆ ಅಲ್ಪ ಲಾಭ.

RELATED ARTICLES

Latest News