Friday, May 24, 2024
Homeಅಂತಾರಾಷ್ಟ್ರೀಯಚೀನಾದ ಎಕ್ಸ್‌ಪ್ರೆಸ್‌ವೇ ಸುರಂಗದೊಳಗೆ ಬಸ್ ಅಪಘಾತ, 14 ಮಂದಿ ಸಾವು

ಚೀನಾದ ಎಕ್ಸ್‌ಪ್ರೆಸ್‌ವೇ ಸುರಂಗದೊಳಗೆ ಬಸ್ ಅಪಘಾತ, 14 ಮಂದಿ ಸಾವು

ಬೀಜಿಂಗ್,ಮಾ.20- ಉತ್ತರ ಚೀನಾದಲ್ಲಿ ಎಕ್ಸ್‌ಪ್ರೆಸ್‌ವೇ ಸುರಂಗದೊಳಗೆ ಬಸ್ ಅಪಘಾತಕ್ಕೀಡಾಗಿ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 37 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಶಾಂಕ್ಸಿ ಪ್ರಾಂತ್ಯದ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ 51 ಜನರಿದ್ದ ಬಸ್ ಸಂಚರಿಸುತ್ತಿದಾಗ ಸುರಂಗದ ಒಳಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಟ್ಟುನಿಟ್ಟಾದ ಸುರಕ್ಷತಾ ನಿಯಂತ್ರಣಗಳ ಕೊರತೆಯಿಂದಾಗಿ ಚೀನಾದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ.

ಕಳೆದ ವರ್ಷದ ಫೆವರಿಯಲ್ಲಿ, ಕೇಂದ್ರ ಹುನಾನ್ ಪ್ರಾಂತ್ಯದಲ್ಲಿ 16 ಜನರು ಸಾವನ್ನಪ್ಪಿದರು ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದರು.ಅದಕ್ಕೂ ಒಂದು ತಿಂಗಳ ಮೊದಲು, ಪೂರ್ವ ಜಿಯಾಂಗ್ಕ್ಸಿ ಪ್ರಾಂತ್ಯದಲ್ಲಿ ರಸ್ತೆ ಅಪಘಾತದಲ್ಲಿ 19 ಜನರು ಸಾವನ್ನಪ್ಪಿದರು ಮತ್ತು 20 ಜನರು ಗಾಯಗೊಂಡಿದ್ದರು.

RELATED ARTICLES

Latest News