Saturday, February 24, 2024
Homeರಾಷ್ಟ್ರೀಯಭದ್ರತಾ ವೈಫಲ್ಯ : ಸಂಸತ್ತಿನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

ಭದ್ರತಾ ವೈಫಲ್ಯ : ಸಂಸತ್ತಿನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

ನವದೆಹಲಿ, ಡಿ.14- ಸಂಸತ್ತಿನ ಉಭಯ ಸದನದಲ್ಲಿ ಇಂದು ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು. ಸದನ ಆರಂಭವಾಗುತ್ತಿ ದ್ದಂತೆ ಸರ್ಕಾರ ಭದ್ರತಾಲೋಪಕ್ಕೆ ಸಂಬಂದಿಸಿದಂತೆ ಸಮಗ್ರ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಘೋಷಣೆ ಕೂಗಿದ್ದಾಗ ಗದ್ದಲ ಉಂಟಾಯಿತು.

ಇದು ನಮ್ಮ ಅಧಿಕಾರ ವ್ಯಾಪ್ತಿ. ಸಂಸತ್ತಿನ ಸಂಕೀರ್ಣದ ಭದ್ರತೆಯಲ್ಲಿ ಲೋಕಸಭೆ ಸಚಿವಾಲಯದ ಜವಾಬ್ದಾರಿಯಾಗಿದೆ ಎಲ್ಲವನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಸದಸ್ಯರು ಆತಂಕಗೊಳ್ಳುವ ಅಗತ್ಯವಿಲ್ಲ. ಸದನ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯನ್ನು ಎಲ್ಲರೂ ಖಂಡಿಸಿದ್ದಾರೆ.

ಹಳೆ ಸಂಸತ್ತಿನಲ್ಲೂ ಪೇಪರ್ ಎಸೆದು ಜಿಗಿಯುವ ಘಟನೆಗಳು ನಡೆದಿವೆ. ಸದನದಲ್ಲಿ ಗದ್ದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದರು. ಇದಕ್ಕೆ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿ ಘೋಷಣೆಯನ್ನು ಕೂಗಿದರು.ಇದರಿಂದ ಸದನ ಗದ್ದಲದಲ್ಲಿ ಮುಳುಗಿದ್ದಾಗ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಇದೇ ಪರಿಸ್ಥಿತಿ ರಾಜ್ಯಸಭೆಯಲ್ಲೂ ಮುಂದುವರೆದು ಸದನ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ಸದಸ್ಯರು ಸಭಾಪತಿಗಳ ಮುಂದಿನ ಬಾವಿಗೆ ಬಂದು ಸರ್ಕಾರ ಕೂಡಲೇ ಭದ್ರತಾ ಲೋಪದ ಬಗ್ಗೆ ಹೇಳಿಕೆ ನೀಡಬೇಕು. ಗೃಹಸಚಿವರು ಸದನಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಈ ವೇಳೆ ಸಭಾಪತಿ ಜಗದೀಪ್ ಧನ್ಖರ್ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು. ವಿಪಕ್ಷ ಸದಸ್ಯರಿಂದ ಸುಮಾರು 28 ನೋಟಿಸ್ಗಳು ಸಲ್ಲಿಕೆಯಾಗಿದ್ದು ಇದಕ್ಕೆ ಗೃಹ ಸಚಿವರ ಉತ್ತರಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ

ಇದಕ್ಕೆ ಕೆಂಡಾಮಂಡಲರಾದ ಸಭಾಪತಿಗಳು ಸದಸ್ಯರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ಇದು ಸರಿಯಾದ ನಡೆಯಲ್ಲ ಎಲ್ಲದಕ್ಕೂ ಸರ್ಕಾರ ಉತ್ತರಿಸಲಿದೆ. ಕಲಾಪ ಸುಗಮವಾಗಿ ನಡೆಯಲು ಸಹಕರಿಸಿಯೆಂದು ಪದೇ ಪದೇ ಮನವಿ ಮಾಡಿದರು.ಆದರೂ ಕೆಲ ಸದಸ್ಯರು ಇದಕ್ಕೆ ಒಪ್ಪಲಿಲ್ಲ. ಈ ವೇಳೆ ಟಿಎಂಸಿ ಸದಸ್ಯ ಡೆರೆಕ್ ಓ ಬ್ರೇನ್ ಅವರು ಸಭಾಪತಿಗಳ ಆಸನದ ಬಳಿ ನುಗ್ಗಿ ಮೇಜನ್ನು ಗುದ್ದಿದ ಪರಿಣಾಮ ಇದು ಗಂಭೀರ ದುರ್ನಡತೆ ಎಂದು ಹೇಳಿ ಸಭಾಪತಿಗಳು ಅವರನ್ನು ಅಮಾನತುಗೊಳಿಸಿ ಸದನದಿಂದ ಹೊರಗೆ ಹೋಗುವಂತೆ ಆದೇಶಿಸಿದರು.

ಈ ವೇಳೆ ಕೆಲವರು ಕೇಂದ್ರ ಗೃಹಸಚಿವರ ವಿರುದ್ಧ ಘೋಷಣೆಯನ್ನು ಕೂಗು ಮುಂದುವರೆದ ಹಿನ್ನೆಲೆಯಲ್ಲಿ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು. ನಂತರ ಮತ್ತೆ ಸದನ ಆರಂಭಗೊಂಡಾಗ ಇದೇ ಪರಿಸ್ಥಿತಿ ಮುಂದುವರೆಯಿತು. ಒಟ್ಟಾರೆ ಸಂಸತ್ತಿನ ಮೇಲೆ ನಡೆದ ದಾಳಿ ಖಂಡಿಸಿ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ಸದನ ಕಲಾಪಕ್ಕೆ ಅಡ್ಡಿಯಾಯಿತು.

8 ಸಿಬ್ಬಂದಿ ಅಮಾನತು :
ನವದೆಹಲಿ, ಡಿ.14 – (ಪಿಟಿಐ) ಸಂಸತ್ತಿನಲ್ಲಿ ಭದ್ರತಾ ಲೋಪ ಎಸಗಿದ ಎಂಟು ಮಂದಿ ಸಿಬ್ಬಂದಿಯನ್ನು ಲೋಕಸಭೆ ಸೆಕ್ರೆಟರಿಯೇಟ್ ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಅಮಾನತುಗೊಂಡವರನ್ನು ರಾಂಪಾಲï, ಅರವಿಂದ್, ವೀರ್ ದಾಸ್, ಗಣೇಶ್, ಅನಿಲï, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಎಂದು ಗುರುತಿಸಲಾಗಿದೆ.ಬುಧವಾರ 2001 ರ ಸಂಸತ್ತಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಪ್ರಮುಖ ಭದ್ರತಾ ಉಲ್ಲಂಘನೆಯಲ್ಲಿ, ಇಬ್ಬರು ವ್ಯಕ್ತಿಗಳು ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ – ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್ಗೆ ಜಿಗಿದು, ಡಬ್ಬಿಗಳಿಂದ ಹಳದಿ ಅನಿಲವನ್ನು ಬಿಡುಗಡೆ ಮಾಡಿದ್ದರು ಮತ್ತು ಘೋಷಣೆಗಳನ್ನು ಕೂಗಿದರು.

RELATED ARTICLES

Latest News