Thursday, May 2, 2024
Homeರಾಜ್ಯರಾಜಕೀಯ ನಾಯಕರ 'ಹಾರಾಟ' ಜೋರು : ಹೆಲಿಕಾಪ್ಟರ್, ವಿಮಾನಗಳ ಬಾಡಿಗೆ ದರ ಶೇ15ರಷ್ಟು ಹೆಚ್ಚಳ

ರಾಜಕೀಯ ನಾಯಕರ ‘ಹಾರಾಟ’ ಜೋರು : ಹೆಲಿಕಾಪ್ಟರ್, ವಿಮಾನಗಳ ಬಾಡಿಗೆ ದರ ಶೇ15ರಷ್ಟು ಹೆಚ್ಚಳ

ಬೆಂಗಳೂರು, ಏ.3-ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮೂರು ಪಕ್ಷಗಳಿಂದ ರಾಜಕೀಯ ನಾಯಕರ ಪ್ರಚಾರ ಕೂಡ ಜೋರಾಗಿ ನಡೆಯುತ್ತಿದೆ. ಹೆಚ್ಚಿನ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಹೆಲಿಕಾಪ್ಟರ್‍ಗಳು, ಸಣ್ಣ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಇದರಿಂದಾಗಿ ಬಾಡಿಗೆ ದರ ಕೂಡ ಶೇ.15ರಷ್ಟು ಹೆಚ್ಚಾಗಿದೆ.

ರಾಜ್ಯದಲ್ಲಿ ಚುನಾವಣೆ ಪ್ರಚಾರ ಹಾಗೂ ಸ್ಟಾರ್ ಪ್ರಚಾರಕರಿಗಾಗಿ ಹೆಲಿಕಾಪ್ಟರ್‍ಗಳಿಗೆ ಬೇಡಿಕೆ ಬಂದಿದೆ. ಈಗಾಗಲೇ ಸುಮಾರು 150 ಹೆಲಿಕಾಪ್ಟರ್‍ಗಳು ಹಾಗೂ ಮಿನಿ ವಿಮಾನಗಳು ಬುಕ್ ಆಗಿವೆ. ಹೆಚ್ಚಿನ ಬೇಡಿಕೆ ಹಿನ್ನೆಲೆ ಹೊರ ರಾಜ್ಯದಿಂದ ಹೆಲಿಕಾಪ್ಟರ್‍ಗಳನ್ನು ತರಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧೆಡೆ ಹೆಲಿಕಾಪ್ಟರ್‍ಗಳನ್ನು ಬುಕ್ ಮಾಡಿ ಕಾಯ್ದಿರಿಸಲಾಗುತ್ತಿದೆ.

ಇನ್ನು, ಪ್ರಮುಖವಾಗಿ ಸ್ಟಾರ್ ಪ್ರಚಾರಕರ ಸುರಕ್ಷತೆಗಾಗಿ ಉತ್ತಮ ನಿರ್ವಹಣೆಯ ಡಬಲ್ ಎಂಜಿನ್ ಕಾಪ್ಟರ್ ಮತ್ತು ವಿಐಪಿ ಪೈಲಟ್‍ಗಳನ್ನು ಬೇರೆ ಕಡೆಗಳಿಂದ ಕರೆಸಲಾಗುತ್ತಿದೆ ಎಂದು ಸೇವಾ ಆಪರೇಟರ್‍ಗಳು ತಿಳಿಸಿದ್ದಾರೆ.ಜಕ್ಕೂರು ಏರೊಡ್ರೊಮ್, ಎಚ್‍ಎಎಲ್ ಹಾಗೂ ವೈಟ್‍ಫೀಲ್ಡ್‍ನಲ್ಲಿ ಹೆಲಿಕಾಪ್ಟರ್‍ಗಳು ಸೇವೆಗಾಗಿ ಕಾದು ನಿಲ್ಲಲಿವೆ.

ಚುನಾವಣೆ ಹಿನ್ನೆಲೆ ವಿಶ್ರಾಂತಿಗೆ ಬಿಡುವಿಲ್ಲದಂತೆ ಸಂಚರಿಸಬೇಕಿರುವ ನಾಯಕರಿಗೆ ಒಂದೊಂದು ಕ್ಷಣವೂ ಅಮೂಲ್ಯ. ಸಮಯ ವ್ಯರ್ಥವಾದರೆ ಚುನಾವಣಾ ಅಖಾಡದಲ್ಲಿ ಹಿನ್ನಡೆಯ ಆತಂಕ ಕೂಡ ನಾಯಕರಿಗಿದೆ. ಹಾಗಾಗಿ ಸಮಯದ ಸಮರ್ಥ ನಿರ್ವಹಣೆಗಾಗಿ ಬಹುತೇಕ ನಾಯಕರು ಹೆಲಿಕಾಪ್ಟರ್‍ಗಳ ಮೊರೆ ಹೋಗುತ್ತಿದ್ದಾರೆ. ರಾಜ್ಯದ ಹಲವು ನಾಯಕರು ಸ್ವಂತ ಹೆಲಿಕಾಪ್ಟರ್ ಹಾಗೂ ಚಾರ್ಟೆಡ್ ವಿಮಾನಗಳನ್ನು ಹೊಂದಿದ್ದು, ಅವುಗಳನ್ನು ಕೂಡ ಚುನಾವಣೆಗೆ ಬಳಕೆಯಾಗಲಿವೆ.

ಬಾಡಿಗೆ ಎಷ್ಟಿದೆ?
ಎರಡು ಆಸನದ ಹೆಲಿಕಾಪ್ಟರ್‍ಗೆ ಒಂದು ಗಂಟೆಗೆ 2.10 ಲಕ್ಷ ರೂ. ಬಾಡಿಗೆ ಇದ್ದರೆ, 4 ಆಸನದ ಹೆಲಿಕಾಪ್ಟರ್‍ಗಳಿಗೆ ಗಂಟೆಗೆ 2.30 ಲಕ್ಷ ರೂ., 6 ಆಸನದ ಮಿನಿ ವಿಮಾನಕ್ಕೆ ಗಂಟೆಗೆ 2.60 ಲಕ್ಷ ರೂ., 8 ಆಸನದ ಮಿನಿ ವಿಮಾನಕ್ಕೆ ಗಂಟೆಗೆ 3.50 ಲಕ್ಷ ರೂ., 13 ಆಸನದ ಮಿನಿ ವಿಮಾನಕ್ಕೆ ಗಂಟೆಗೆ 4 ಲಕ್ಷ ರೂ. ಬಾಡಿಗೆ ಇದ್ದು, ಎಲ್ಲ ದರಗಳಲ್ಲೂ ಜಿಎಸ್‍ಟಿ ಸೇರಿರಲಿದೆ. ಇದು ಸಿಂಗಲ್ ಇಂಜಿನ್ ಹೆಲಿಕಾಪ್ಟರ್‍ಗಳಾಗಿದ್ದು, ಡಬಲ್ ಇಂಜಿನ್ ಕಾಪ್ಟರ್, ವಿಮಾನಗಳ ಬೆಲೆ ಮತ್ತಷ್ಟು ಹೆಚ್ಚಿರಲಿದೆ ಎಂದು ಏರ್ ಆಂಬುಲೆನ್ಸ್ ನಿರ್ದೇಶಕಿ ಡಾ ಶಮಿತಾ ತಿಳಿಸಿದ್ದಾರೆ.

ಹೆಲಿಕಾಪ್ಟರ್‍ಗಳ ಬಾಡಿಗೆ ದರ!
ಕಾಪ್ಟರ್ ವಿಧ (ಸಿಂಗಲ್ ಇಂಜಿನ್)
ಗಂಟೆಗೆ ಬಾಡಿಗೆ ದರ (ಜಿಎಸ್‍ಟಿ ಸೇರಿ)
2 ಆಸನದ ಹೆಲಿಕಾಪ್ಟರ್
2.10 ಲಕ್ಷ ರೂ.
4 ಆಸನದ ಹೆಲಿಕಾಪ್ಟರ್
2.30 ಲಕ್ಷ ರೂ.
6 ಆಸನದ ಮಿನಿ ವಿಮಾನ
2.60 ಲಕ್ಷ ರೂ.
8 ಆಸನದ ಮಿನಿ ವಿಮಾನ
3.50 ಲಕ್ಷ ರೂ.
13 ಆಸನದ ಮಿನಿ ವಿಮಾನ
4 ಲಕ್ಷ ರೂ.

RELATED ARTICLES

Latest News