Monday, April 22, 2024
Homeರಾಷ್ಟ್ರೀಯಇಬ್ಬರು ಬಿಜೆಡಿ ನಾಯಕರು ಬಿಜೆಪಿ ಕೇಂದ್ರ ಸಚಿವ ಅವಿರೋಧವಾಗಿ ರಾಜ್ಯ ಸಭೆಗೆ ಆಯ್ಕೆ

ಇಬ್ಬರು ಬಿಜೆಡಿ ನಾಯಕರು ಬಿಜೆಪಿ ಕೇಂದ್ರ ಸಚಿವ ಅವಿರೋಧವಾಗಿ ರಾಜ್ಯ ಸಭೆಗೆ ಆಯ್ಕೆ

ಭುವನೇಶ್ವರ, ಫೆ- 20: ಬಿಜೆಪಿಯಿಂದ ಕಣಕ್ಕಿಳಿದಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಬಿಜೆಡಿಯ ದೇಬಾಶಿಶ್ ಸಾಮಂತ್ರಾಯ್ ಮತ್ತು ಸುಭಾಶಿಶ್ ಖುಂಟಿಯಾ ಅವರು ಒಡಿಶಾದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯುವ ಗಡುವು ಇಂದು ಮಧ್ಯಾಹ್ನ ಮುಗಿದ ನಂತರ ಚುನಾವಣಾಧಿಕಾರಿ ರಾಜೇಶ್ ಅಬನಿಕಾಂತ ಪಟ್ನಾಯಕ್ ಅವರು ಚುನಾಯಿತರ ಹೆಸರನ್ನು ಪ್ರಕಟಿಸಿದರು.

ಬಿಜೆಪಿ ಅಭ್ಯರ್ಥಿ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯದ ಆಡಳಿತಾರೂಢ ಬಿಜೆಡಿ ಬೆಂಬಲದೊಂದಿಗೆ ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದಾರೆ. ಕಳೆದ ಫೆಬ್ರವರಿ 15 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಕೊನೆಯ ದಿನದಂದು ವೈಷ್ಣವ್ ಅವರು ತಮ್ಮ ನಾಮ ಪತ್ರವನ್ನು ಸಲ್ಲಿಸಿದ್ದರೆ, ಫೆಬ್ರವರಿ 13 ರಂದು ಇಬ್ಬರು ಬಿಜೆಡಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಈ ವರ್ಷದ ಏಪ್ರಿಲ್‍ನಲ್ಲಿ ಖಾಲಿಯಾಗುವ ಎಲ್ಲಾ ಮೂರು ರಾಜ್ಯಸಭೆ ಸ್ಥಾನಗಳನ್ನು ಗೆಲ್ಲಲು ಒಡಿಶಾ ವಿಧಾನಸಭೆಯಲ್ಲಿ ಬಿಜೆಡಿ ಅಗತ್ಯವಿರುವ ಸಂಖ್ಯೆಯನ್ನು ಹೊಂದಿದ್ದರೂ, ಆಡಳಿತ ಪಕ್ಷವು ಬಿಜೆಪಿಯ ವೈಷ್ಣವ್‍ಗೆ ಒಂದು ಸ್ಥಾನವನ್ನು ಬಿಟ್ಟು ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಆದ್ಯತೆ ನೀಡಿತ್ತು.
ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ವೈಷ್ಣವ್ ಅವರಿಗೆ ರಾಜ್ಯದ ರೈಲ್ವೆ ಮತ್ತು ಟೆಲಿಕಾಂ ಅಭಿವೃದ್ಧಿಯ ದೊಡ್ಡ ಹಿತಾಸಕ್ತಿಗಾಗಿ ತನ್ನ ಬೆಂಬಲವನ್ನು ಘೋಷಿಸಿತ್ತು. 2019 ರಲ್ಲಿ, ವೈಷ್ಣವ್ ಅವರು ಮೊದಲ ಬಾರಿಗೆ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದಾಗ ಪಟ್ನಾಯಕ್ ಅವರನ್ನು ಬೆಂಬಲಿಸಿದ್ದರು.

ದುಬಾರಿ ಬೆಲೆಗೆ ನೀರು ಮಾರಿದರೆ ಟ್ಯಾಂಕರ್ ಪರವಾನಗಿ ರದ್ದು

ಜೂನ್ 2019 ರಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಒಡಿಶಾ ಮುಖ್ಯಮಂತ್ರಿ ಪಟ್ನಾಯಕ್ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ ನಂತರ ಒಡಿಶಾ ಕೇಡರ್ ಮಾಜಿ ಐಎಎಸ್ ಅಧಿಕಾರಿ ವೈಷ್ಣವ್ ಅವರಿಗೆ ಬೆಂಬಲ ನೀಡುವುದಾಗಿ ಬಿಜೆಡಿ ಘೋಷಿಸಿತ್ತು. ಖಾಲಿ ಇರುವ ಮೂರು ಸ್ಥಾನಗಳಿಗೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆಯ ಅಗತ್ಯವಿಲ್ಲ ಎಂದು ಚುನಾವಣಾ„ಕಾರಿ ತಿಳಿಸಿದ್ದರು ಪ್ರಸ್ತುತ ಮೂವರು ಸದಸ್ಯರಾದ ವೈಷ್ಣವ್, ಬಿಜೆಡಿಯ ಪ್ರಶಾಂತ್ ನಂದಾ ಮತ್ತು ಅಮರ್ ಪಟ್ನಾಯಕ್ ಅವರ ಅ„ಕಾರಾವ„ ಈ ವರ್ಷದ ಏಪ್ರಿಲ್‍ನಲ್ಲಿ ಕೊನೆಗೊಳ್ಳಲಿದೆ. ಖಾಲಿ ಇರುವ ಮೂರು ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆದಿತ್ತು.

RELATED ARTICLES

Latest News