Thursday, May 2, 2024
Homeಬೆಂಗಳೂರುಗುಜರಿ ವ್ಯಾಪಾರಿಯ ಮನೆಯಲ್ಲಿದ್ದ 2.50 ಕೋಟಿ ಮೌಲ್ಯದ ಚಿನ್ನ-ಹಣ ಲೂಟಿ

ಗುಜರಿ ವ್ಯಾಪಾರಿಯ ಮನೆಯಲ್ಲಿದ್ದ 2.50 ಕೋಟಿ ಮೌಲ್ಯದ ಚಿನ್ನ-ಹಣ ಲೂಟಿ

ಬೆಂಗಳೂರು, ಸೆ.27- ಗುಜರಿ ವ್ಯಾಪಾರಿಯೊಬ್ಬರು ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಿ ಮನೆಯಲ್ಲಿಟ್ಟು ಸಂಬಂಧಿಕರ ಮನೆಗೆ ಕುಟುಂಬ ಸಮೇತ ಹೋಗಿದ್ದಾಗ ಕಳ್ಳರು ಬೆಡ್ರೂಮ್ ಬಾಗಿಲ ಸ್ಕ್ರೂ ತೆಗೆದು ಒಳನುಗ್ಗಿ ಎಂಟು ಲಕ್ಷ ನಗದೂ ಸೇರಿದಂತೆ 2.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಸ್ಆರ್ಕೆ ಗಾರ್ಡನ್, 2ನೇ ಕ್ರಾಸ್, 2ನೇ ಮುಖ್ಯರಸ್ತೆಯಲ್ಲಿ ಗುಜುರಿ ವ್ಯಾಪಾರಿ ಶಹಾ ನವಾಜ್ ಎಂಬುವರು ವಾಸವಾಗಿದ್ದು, ತಮ್ಮ ಮಗಳ ಮದುವೆಗಾಗಿ ಹಣ ಹಾಗೂ ಚಿನ್ನಾಭರಣಗಳನ್ನು ಹೊಂದಿಸಿ ಮನೆಯಲ್ಲಿಟ್ಟಿದ್ದರು. ಕಾರ್ಯನಿಮಿತ್ತ ಶಹಾ ನವಾಜ್ ಅವರು ಕುಟುಂಬ ಸಮೇತ ರಾಮನಗರ ಹಾಗೂ ಮಂಡ್ಯದಲ್ಲಿರುವ ಸಂಬಂಧಿಕರ ಮನೆಗೆ 23ರಂದು ಹೋಗಿದ್ದರು.

ಅ.2ರವರೆಗೆ ರಾಷ್ಟ್ರಾದ್ಯಂತ ‘ಸ್ವಚ್ಛತಾ ಹೀ ಸೇವಾ’ ಅಭಿಯಾನ

ಈ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಮೊದಲ ಮಹಡಿಯ ಬೆಡ್ರೂಮ್ನ ಬಾಗಿಲ ಸ್ಕ್ರೂ ತೆಗೆದು ಒಳಗೆ ಹೋಗಿ ಬೀರುವಿನಲ್ಲಿದ್ದ ಸುಮಾರು 1.25 ಕೋಟಿ ರೂ. ಮೌಲ್ಯದ 2.5 ಕೆಜಿ ಚಿನ್ನದ ಆಭರಣಗಳು ಮತ್ತು 8 ಲಕ್ಷ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

25ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಶಹಾ ನವಾಜ್ ಅವರು ಮನೆಗೆ ವಾಪಸ್ ಬಂದಿದ್ದು ಬೀರುವಿನಲ್ಲಿ ಹಣವಿಡಲು ಹೋದಾಗ ಬೀರು ತೆರೆದಿರುವುದು ಗಮನಿಸಿ ಗಾಬರಿಗೊಂಡು ನೋಡಿದಾಗ ಅದರಲ್ಲಿಟ್ಟಿದ್ದ ಹಣ, ಆಭರಣ ನಾಪತ್ತೆಯಾಗಿತ್ತು.

ತಕ್ಷಣ ಅವರು ಸ್ನೇಹಿತ ಅನೀಸ್ ಎಂಬುವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿ ಮನೆ ಹತ್ತಿರ ಬರುವಂತೆ ಹೇಳಿದ್ದಾರೆ. ಅನೀಸ್ ಅವರು ಇವರ ಮನೆ ಬಳಿ ಬಂದು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಿಲಕ್ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಪರಿಶೀಲನೆ ನಡೆಸಿದ್ದಾರೆ.

ಕಳ್ಳರು ಮನೆಯ ಮೊದಲ ಮಹಡಿಯ ಬೆಡ್ರೂಮ್ ಬಾಗಿಲಿನ ಸ್ಕ್ರೂ ತೆಗೆದು ಒಳನುಗ್ಗಿ ಹಣ ಆಭರಣ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಸಿಸಿ ಟಿವಿ ಪರಿಶೀಲಿಸಿದಾಗ ಒಬ್ಬ ಕಳ್ಳ ಬಂದು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಐಟಿ ಕಂಪನಿಗಳ ಜೊತೆ ಸೇರಿ ಸೈಬರ್ ಸ್ಪೇರ್ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರ ಸ್ಥಾಪನೆ

RELATED ARTICLES

Latest News