Friday, May 3, 2024
Homeರಾಜ್ಯಕರ್ನಾಟಕ ಬಂದ್ ಬಳಿಕ ನಾಡಿನಾದ್ಯಂತ ಉಗ್ರ ಹೋರಾಟ : ವಾಟಾಳ್

ಕರ್ನಾಟಕ ಬಂದ್ ಬಳಿಕ ನಾಡಿನಾದ್ಯಂತ ಉಗ್ರ ಹೋರಾಟ : ವಾಟಾಳ್

ಬೆಂಗಳೂರು,ಸೆ.27- ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಸದೇ ಇದ್ದರೆ ಕರ್ನಾಟಕ ಬಂದ್ ಬಳಿಕ ನಾಡಿನಾದ್ಯಂತ 15 ದಿನಗಳ ಕಾಲ ಉಗ್ರ ಹೋರಾಟ ರೂಪಿಸುವುದಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.29 ರಂದು ಕರ್ನಾಟಕ ಬಂದ್ ನಡೆಯಲಿದೆ. ಅದಕ್ಕೆ ಬೆಂಬಲ ಕೇಳಲು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದೇವೆ. ಬಂದ್ ದಿನ ಚಿತ್ರೋದ್ಯಮ ಸಂಪೂರ್ಣ ಸ್ಥಗಿತಗೊಳ್ಳಬೇಕು. ಬಂದ್ನಲ್ಲಿ ನಟ-ನಟಿಯರು ಪಾಲ್ಗೊಳ್ಳಬೇಕು ಎಂದು ಆಗ್ರಹಿಸಿದರು.
ಸೂಪರ್ ಸ್ಟಾರ್ ರಜನಿಕಾಂತ್ ಅವರು ಕರ್ನಾಟಕದಲ್ಲೇ ಹುಟ್ಟಿ ಇಲ್ಲಿನ ನೀರು ಕುಡಿದು ಬೆಳೆದಿದ್ದಾರೆ. ಕಾವೇರಿ ವಿಷಯವಾಗಿ ಅವರು ಕರ್ನಾಟಕದ ಪರ ಮಾತನಾಡಬೇಕು. ಇಲ್ಲವಾದರೆ ಅವರ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲು ಅವಕಾಶ ನೀಡುವುದಿಲ್ಲ. ರಜನಿಕಾಂತ್ ಬೆಂಗಳೂರಿಗೆ ಬರಲು ಬಿಡುವುದಿಲ್ಲ ಎಂದು ಹೇಳಿದರು.

ಸೆ. 29 ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಚಿತ್ರೋದ್ಯಮವನ್ನು ಬಂದ್ ಮಾಡುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. 2018 ರಲ್ಲಿ ವಿಧಾನಸಭೆಯಲ್ಲಿ ಕಟುಶಬ್ಧಗಳಲ್ಲಿ ನಿಂದಿಸಿಕೊಂಡಿದ್ದ ಜೆಡಿಎಸ್, ಬಿಜೆಪಿ ನಾಯಕರು ಇಂದು ವಿಧಾನಸೌಧದ ಮುಂದೆ ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸುವುದಿಲ್ಲ. ಆದರೆ ಚಳುವಳಿಗಾರರ ಬಗ್ಗೆ ಯಾರೂ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದರು.

ಐಟಿ ಕಂಪನಿಗಳ ಜೊತೆ ಸೇರಿ ಸೈಬರ್ ಸ್ಪೇರ್ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರ ಸ್ಥಾಪನೆ

ತಾವು ಈವರೆಗೂ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿಲ್ಲ. ಆದರೆ ಕರ್ನಾಟಕ ಬಂದ್ ವಿಷಯದಲ್ಲಿ ಅವರು ಅಂತರಾತ್ಮಕವಾಗಿ ಮಾತನಾಡಿದ್ದಾರೆ. ಒಂದೇ ಬಂದ್ ಸಾಕು ಎಂದಿದ್ದಾರೆ. ನೀರು ಬಿಡಲು ಅವರು ಕಾರಣ. ಈಗ ಸರ್ವಾಧಿಕಾರಿಯಂತೆ ಮಾತನಾಡುತ್ತಿದ್ದಾರೆ. ಇದನ್ನು ನಿಂದಿಸದೇ ಇದ್ದರೆ ನಾವು ರಾಜ್ಯಾದ್ಯಂತ ಡಿ.ಕೆ.ಶಿವಕುಮಾರ್ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ಈ ರೀತಿಯ ನಡವಳಿಕೆಯನ್ನು ಡಿ.ಕೆ.ಶಿವಕುಮಾರ್ ಕೂಡ ಪಾಲಿಸಬೇಕು. ಏನೇ ಆದರೂ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದು ಸರಿಯಲ್ಲ. ಕೂಡಲೇ ನೀರು ನಿಲ್ಲಿಸಬೇಕು. ಇಲ್ಲವಾದರೆ ನಾವು ರಾಜ್ಯಾದ್ಯಂತ ಹೆದ್ದಾರಿ ಮತ್ತು ರೈಲು ತಡೆ, ಜೈಲ್ಬರೊ ಹೋರಾಟಗಳನ್ನು ಮುಂದಿನ 15 ದಿನದವರೆಗೂ ನಡೆಸುವುದಾಗಿ ತಿಳಿಸಿದರು.

ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದ ‘2018’ ಸಿನಿಮಾ

ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಬಾರದು. ಪೊಲೀಸ್ ಬಲ ಪ್ರದರ್ಶಿಸಿ ದರ್ಪ ತೋರಿಸಿದರೆ ನಾವು ಸಹಿಸುವುದಿಲ್ಲ. ಹೋರಾಟಗಾರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ಆಗ್ರಹಿಸಿದರು.
ತಮಿಳುನಾಡಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಬಂದ್ ನಡೆಸಿದರೆ ಸರ್ಕಾರವೇ ಬೆಂಬಲ ಕೊಡುತ್ತದೆ. ಇಲ್ಲಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ. ಮೇಕೆದಾಟುವಿಗಾಗಿ ಪಂಚತಾರಾ ಹೋಟೆಲ್ ಮಾದರಿಯಲ್ಲಿ ಪಾದಯಾತ್ರೆ ಮಾಡಿದವರು ಇಂದು ಮೇಕೆದಾಟು ಯೋಜನೆಯಲ್ಲಿ ಹುಡುಗಾಟ ಆಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.

ಕಾವೇರಿ ನೀರು ಹರಿಸುತ್ತಿರುವುದರ ವಿರುದ್ಧ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದರು.

RELATED ARTICLES

Latest News