Friday, May 17, 2024
Homeಅಂತಾರಾಷ್ಟ್ರೀಯಅಮೆರಿಕಾ : ಕಾರು ಅಪಘಾತದಲ್ಲಿ ಭಾರತೀಯ ಯುವತಿ ಸಾವು

ಅಮೆರಿಕಾ : ಕಾರು ಅಪಘಾತದಲ್ಲಿ ಭಾರತೀಯ ಯುವತಿ ಸಾವು

ನ್ಯೂಯಾರ್ಕ್, ಮಾ.24 (ಪಿಟಿಐ) : ಪೆನ್ಸಿಲ್ವೇನಿಯಾದಲ್ಲಿ ನಡೆದದ ಕಾರು ಅಪಘಾತದಲ್ಲಿ ಭಾರತ ಮೂಲದ 24 ವರ್ಷದ ಭಾರತೀಯ ಯುವತಿ ಸಾವನ್ನಪ್ಪಿದ್ದಾಳೆ.ಅರ್ಷಿಯಾ ಜೋಶಿ ಸಾವನ್ನಪ್ಪಿದ ಯುವತಿ ಎಂದು ನ್ಯೂಯಾರ್ಕ್‍ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಎಕ್ಸ್‍ನಲ್ಲಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ,

ಅರ್ಷಿಯಾ ಕಳೆದ ವರ್ಷ ಪದವಿ ಮುಗಿಸಿದ್ದಳು ಆದರೆ ಆಕೆಯ ಕನಸು ಭಗ್ನಗೊಂಡಿದೆ ಅವರ ಕುಟುಂಬ ಮತ್ತು ಸ್ಥಳೀಯ ಸಮುದಾಯದ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಕಾನ್ಸುಲೇಟ್ ತಿಳಿಸಿದೆ.

ಆಕೆಯ ಪಾರ್ಥಿವ ಶರೀರವನ್ನು ಆದಷ್ಟು ಬೇಗ ಭಾರತಕ್ಕೆ ಸಾಗಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಆದರೆ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ .

ಅಮೆರಿಕದಲ್ಲಿ ನಡೆಯುತ್ತಿರುವ ಸರಣಿ ದುರಂತ ಘಟನೆಗಳ ನಡುವೆ, ನಮ್ಮ ಹೃದಯಗಳು ದುಃಖದಿಂದ ಭಾರವಾಗಿವೆ ಎಂದು ಟೀಮ್ ಏಡ್ ಸಂಸ್ಥಾಪಕ ಮೋಹನ್ ತಿಳಿಸಿದರು.ಕಳೆದ ವಾರವೊಂದರಲ್ಲೇ, ಟೀಮ್ ಏಡ್ ಐದು ವ್ಯಕ್ತಿಗಳ ಅವಶೇಷಗಳನ್ನು ಭಾರತಕ್ಕೆ ಕಳುಹಿಸಿದೆ ಮತ್ತು ಮೂರು ಸ್ಥಳೀಯ ಅಂತ್ಯಕ್ರಿಯೆಗಳನ್ನು ಆಯೋಜಿಸಿದೆ ಎಂದು ಅವರು ಹೇಳಿದರು.

ಇವರ ತಂಡವು ಪ್ರಸ್ತುತ ಯುಎಸ್ ಮತ್ತು ಕೆನಡಾದಲ್ಲಿ ನಿಧನರಾದ ತಮ್ಮ ಪ್ರೀತಿಪಾತ್ರರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವಲ್ಲಿ ಇನ್ನೂ ಹಲವಾರು ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ.

RELATED ARTICLES

Latest News