ಬೆಂಗಳೂರು, ಏ.18– ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದ್ದು, ನಿನ್ನೆಯವರೆಗೆ 168 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಈ ಪೈಕಿ 153 ಪುರುಷ, 15 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳಿದ್ದರೆ, ಚಿಕ್ಕೋಡಿ, ಬಿಜಾಪುರ, ಬಳ್ಳಾರಿ ಕ್ಷೇತ್ರದಲ್ಲಿ ತಲಾ 9 ಅಭ್ಯರ್ಥಿಗಳಿದ್ದಾರೆ. ಅತೀ ಕಡಿಮೆ ರಾಯಚೂರು ಜಿಲ್ಲೆಯಲ್ಲಿ 6 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಉಳಿದಂತೆ ಬೆಳಗಾವಿ 12, ಬಾಗಲಕೋಟೆ 10, ಕಲಬುರಗಿ 10, ಬೀದರ್ 17, ಕೊಪ್ಪಳ 13, ಹಾವೇರಿ 12, ಧಾರವಾಡ 14, ಉತ್ತರಕನ್ನಡ 12, ಶಿವಮೊಗ್ಗ 15 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
89 ಮಂದಿ ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿಯಿಂದ 31, ಕಾಂಗ್ರೆಸ್‍ನಿಂದ 40, ಎಎಪಿಯಿಂದ 1 , ಬಿಎಸ್‍ಪಿಯಿಂದ 10, ಜೆಡಿಎಸ್‍ನಿಂದ 1 ನಾಮಪತ್ರ ಸಲ್ಲಿಕೆಯಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
2ನೇ ಹಂತಕ್ಕೆ ನಾಮಪತ್ರ ಸಲ್ಲಿಕೆ ನಾಳೆ ಕೊನೆಗೊಳ್ಳಲಿದ್ದು, ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸ್ಸು ಪಡೆಯಲು ಏ.22 ಕಡೆಯ ದಿನವಾಗಿದೆ.
ಅಂದು ಸಂಜೆ ಆಯಾ ಕ್ಷೇತ್ರಗಳಲ್ಲಿ ಅಂತಿಮ ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಅಕೃತವಾಗಿ ಪ್ರಕಟಿಸಲಾಗುತ್ತದೆ. ಮೇ 7 ರಂದು ಮತದಾನ ನಡೆಯಲಿದೆ. ಎರಡೂ ಹಂತಗಳ ಮತ ಎಣಿಕೆ ಜೂನ್ 4 ರಂದು ನಡೆದು, ಅಂದೇ ಫಲಿತಾಂಶ ಹೊರಬೀಳಲಿದೆ.