ಕೇಪ್ ಟೌನ್, ಜ. 3- ಇಂದಿಲ್ಲಿ ಆರಂಭಗೊಂಡ ದ್ವಿತೀಯ ಟೆಸ್ಟ್‍ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಭಾರತದ ವೇಗದ ಬೌಲರ್ ಗಳ ಅತ್ಯಂತ ಅದ್ಬುತ ದಾಳಿಗೆ ತತ್ತರಿಸಿ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗಿದೆ.
ಎರಡನೆ ಟೆಸ್ಟ್ ನ ಮೊದಲ ದಿನ ಊಟದ ವಿರಾಮದೊಳಗೆ ಅತ್ಯಂತ ಕಡಿಮೆ ರನ್‌ಗೆ ಪತನಗೊಂಡಿದೆ ಅತ್ಯುತ್ತಮ ಬೌಲಿಂಗ್ ನಡೆಸಿದ ಮೊಹಮ್ಮದ್ ಸಿರಾಜ್ ಇಲ್ಲಿ ಕೇವಲ 9 ಓವರ್ ಮಾಡಿ 15 ರನ್ ನೀಡಿ 6 ವಿಕೆಟ್‍ಗಳನ್ನು ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ದೇಶದ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಊಟದ ಮೊದಲು ಐದು ವಿಕೆಟ್‍ಗಳನ್ನು ಪಡೆದ ಏಕೈಕ ಭಾರತೀಯ ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್(1986-1987 ರಲ್ಲಿ) ಬೆಂಗಳೂರಿನಲ್ಲಿ ಪಾಕಿಸ್ತಾನದ ವಿರುದ್ಧ ಸಾಧನೆ ಮಾಡಿದರು ಇಂದು ಸಿರಾಜ್ ಕೇಪ್ ಟೌನ್‍ನಲ್ಲಿ ಮುರಿದಿದ್ದಾರೆ.
ನೂತನ ವರ್ಷದ ನಿರ್ಣಯ ಜಾರಿ ತರುವಲ್ಲಿ ಪ್ರೇರೇಪಣೆ ಉಳಿಸಿಕೊಳ್ಳುವುದು ಹೇಗೆ?
ಬೆಳಿಗ್ಗೆ, ದಕ್ಷಿಣ ಆಫ್ರಿಕಾದ ಬ್ಯಾಟರ್‍ಗಳು ಸಿರಾಜ್ ವೇಗ, ಸ್ವಿಂಗ್ ಚೆಂಡನ್ನು ಎದುರಿಸಲು ಚಡಪಡಿಸಿದರು ಮೊದಲ ಇನ್ನಿಂಗ್ಸ್ ಕೇವಲ 23.2 ಓವರ್‍ಗಳಲ್ಲಿ ಕೊನೆಗೊಂಡಿತು. ಡೇವಿಡ್ ಬೆಡಿಂಗ್‍ಹ್ಯಾಮ್ (12) ಮತ್ತು ಕೈಲ್ ವೆರ್ರೆನ್ನೆ (15) ಮಾತ್ರ ಎರಡಂಕಿ ಗಳಿಸಿದ್ದನ್ನು ಬಿಟ್ಟರೆ ಉಳಿದರವರು ನಿರುತ್ತರವಾಗಿ ಪೆವೀಲಿಯನ್ ಪೆಡೆಡ್ ನಡೆಸಿದರು ಸ್ಟ್ಯಾಂಡ್‍ಗಳಲ್ಲಿದ್ದ ದಕ್ಷಿಣ ಆಫ್ರಿಕಾದ ಬೆಂಬಲಿಗರು ಮೌನವಾಗಿ ದಿಗ್ಭ್ರಮೆಗೊಂಡರು.
ಜಸ್‍ಪ್ರೀತ್ ಬುಮ್ರಾ (8 ಓವರ್‍ಗಳಲ್ಲಿ 2/25) ಸಹ ಇನ್ನೊಂದು ತುದಿಯಿಂದ ಒತ್ತಡವನ್ನು ಹಾಕಿದರು ಏಕೆಂದರೆ ಭಾರತದ ನಾಯಕ ರೋಹಿತ್ ಶರ್ಮಾ ಅದ್ಬುತ ನಾಯಕತ್ವ ಕೂಡ ಈ ಹಿರಿಮೆಗೆ ಕಾರಣವಾಯಿತು.
ವಿದಾಯ ಟೆಸ್ಟ್‍ನಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿರುವ ಡೀನ್ ಎಲ್ಗರ್ ಭರಿ ನಿರಾಸೆ ಮೂಡಿಸಿದೆ ಇನ್ನು ಭಾರತದ ಮಧ್ಯಮ ವೇಗಿಗಳಾದ ಮುಕೇಶ್ ಕುಮಾರ್ 2 ವಿಕೆಟ್ ಪಡೆದಿದ್ದು ಶಾರ್ದೂಲ್ ಠಾಕೂರ್ ಅವರಿಗಿಂತ ಸ್ವಲ್ಪ ಉತ್ತಮ ಎಂದು ಸಾಬೀತುಪಡಿಸಿದರು.
ಸೆಂಚುರಿಯನ್‍ನಲ್ಲಿನ ಭಾರೀ ಸೋಲಿನ ನಂತರ ದೊಡ್ಡ ಭಾರತೀಯ ಬೆಂಬಲಿಗರೂ ಸಹ ಇಂದು ಭರತೀಯ ಬೌಲರ್‍ಗಳಿಂದ ಇಂತಹ ಘರ್ಜನೆಯ ಪುನರಾಗಮನವನ್ನು ಊಹಿಸಿರಲಿಲ್ಲ.