Tuesday, October 8, 2024
Homeಸಂಪಾದಕೀಯ-ಲೇಖನಗಳುನೂತನ ವರ್ಷದ ನಿರ್ಣಯ ಜಾರಿ ತರುವಲ್ಲಿ ಪ್ರೇರೇಪಣೆ ಉಳಿಸಿಕೊಳ್ಳುವುದು ಹೇಗೆ?

ನೂತನ ವರ್ಷದ ನಿರ್ಣಯ ಜಾರಿ ತರುವಲ್ಲಿ ಪ್ರೇರೇಪಣೆ ಉಳಿಸಿಕೊಳ್ಳುವುದು ಹೇಗೆ?

ಹೊಸ ವರ್ಷದ ನಿರ್ಣಯ(ರೆಸಲ್ಯೂಷನ್)ಗಳನ್ನು ಸಾಮಾನ್ಯವಾಗಿ ಬಹಳ ಉತ್ಸಾಹದೊಂದಿಗೆ ಕೈಗೊಳ್ಳಲಾಗುತ್ತದೆ, ಆದರೆ ಇವುಗಳನ್ನು ಬೇಗನೆ  ಮರೆಯಲಾಗುತ್ತದೆ ಅಥವಾ ನಿರ್ಲಕ್ಷಿಸಿಬಿಡಲಾಗುತ್ತದೆ. ನಮ್ಮ ಗುರಿ ಸಾಧಿಸಲು ನಾವು ಹೇಗೆ ಪ್ರೇರೇಪಣೆ ಉಳಿಸಿಕೊಂಡಿರಬಹುದು? ಎಂಬುದಕ್ಕೆ ನೆರವಾಗಬಹುದಾದ ಕೆಲವು ತಂತ್ರಗಳು ಈ ಕೆಳಗಿನಂತಿವೆ:

ಸಾಧಿಸಲು ಸಾಧ್ಯವಿರುವ ನಿರ್ಣಯಗಳನ್ನು ಆಯ್ಕೆ ಮಾಡಿಕೊಳ್ಳಿ: ಕೆಲವು ಬಾರಿ ಹೊಸ ವರ್ಷದ ಸಂಭ್ರಮದ ಸಮಯದಲ್ಲಿ ಹೆಚ್ಚಿನ ಉತ್ಸಾಹದೊಂದಿಗೆ ಸಾಕಷ್ಟು ಪ್ರಯತ್ನದ ಬೇಕಾಗುವಂತಹ ಕಷ್ಟದ ಕಾರ್ಯ ಅಥವಾ ನಿರ್ಣಯಗಳನ್ನು ನಾವು ಕೈಗೊಳ್ಳುತ್ತೇವೆ. ನಾವು ದೀರ್ಘಕಾಲ ಸೋಮಾರಿಯಾಗಿರುವಾಗ ಅಥವಾ ಯಾವುದೇ ಕೆಲಸ ಮಾಡದೇ ಇರುವಾಗ ಇದನ್ನು ಸಾಧಿಸುವುದು ನಿಜಕ್ಕೂ ಕಷ್ಟವಾಗಿರುತ್ತದೆ. ಸರಳ ಕಾರ್ಯಗಳನ್ನು ಮಾಡುವ ಚಿಂತನೆ ಮಾಡಿಕೊಳ್ಳಿ.

ಉದಾಹರಣೆಗೆ, ನೀವು ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸಿದಲ್ಲಿ, ಎರಡು ವಾರಗಳ ಅವಧಿಯೊಳಗೆ ಒಂದು ಕೆಜಿ ತೂಕ ಕಳೆದುಕೊಳ್ಳುವ ಗುರಿ ಇಟ್ಟುಕೊಳ್ಳಿರಿ. ಇದು ನಿಮ್ಮ ನೂತನ ಆಹಾರ ಮತ್ತು ವ್ಯಾಯಾಮದ ಅಭ್ಯಾಸಗಳಿಗೆ ಹೊಂದಿಕೊಳ್ಳಲು ನಿಮಗೆ ಸ್ವಲ್ಪ ಸಮಯ ನೀಡುತ್ತದೆ ಮತ್ತು ಗುರಿ ಸಾಧಿಸಬಹುದು ಎಂದು ನಿಮಗೆ ಪ್ರೇರೇಪಣೆ ನೀಡುತ್ತದೆ.

ಕಾರ್ಯಗಳ ವೇಳಾಪಟ್ಟಿ ಮಾಡಿಕೊಳ್ಳಿ: ನಿರ್ದಿಷ್ಟ ಗುರಿ ಇಟ್ಟುಕೊಳ್ಳುವುದು ಈ ಹೋರಾಟದ ಮೊದಲರ್ಧ ಭಾಗ ಎನ್ನಬಹುದು. ಆ ಗುರಿ ಹೇಗೆ ತಲುಪುವುದು ಎಂಬುದನ್ನು ಕುರಿತು ನೀವು ಯೋಜನೆ ಮಾಡಿಕೊಳ್ಳಬೇಕು. ಆದ್ದರಿಂದ, ವಾಸ್ತವವಾದ ಕಾರ್ಯಗಳ ವೇಳಾಪಟ್ಟಿ ಖಂಡಿತ ನೆರವಾಗುತ್ತದೆ. ಆರಂಭದಲ್ಲಿ ದಿನದ ಮೊದಲ ಭಾಗಕ್ಕಾದರೂ ನಿಮ್ಮ ವೇಳಾಪಟ್ಟಿ ಪಾಲಿಸಲು ಪ್ರಯತ್ನಿಸಿ. ನಂತರದಲ್ಲಿ, ನಿಮಗೆ ಈ ದಿನಚರಿ ಅಭ್ಯಾಸವಾಗುತ್ತದೆಯಲ್ಲದೇ ಸುಲಭವಾಗಿ ವೇಳಾಪಟ್ಟಿ ಪಾಲಿಸಲು ಸಾಧ್ಯವಾಗುವುದು.

ನಿಮ್ಮ ನಿರ್ಣಯಗಳಿಗೆ ಮಿತಿ ಇರಲಿ: ‘ಹೆಚ್ಚಿನ ಸಂಖ್ಯೆಯ ಅಡುಗೆಭಟ್ಟರು ಸಾಂಬಾರು ಕೆಡಿಸುವರು’ ಎಂಬ ಗಾದೆ ಮಾತಿನಂತೆ, ಹಲವು ನಿರ್ಣಯಗಳನ್ನು ಜಾರಿಗೆ ತರುವಲ್ಲಿ ಪದೇಪದೆ ಗೊಂದಲ, ಹತಾಶೆ ಮತ್ತು ಬಳಲಿಕೆ ಉಂಟಾಗಬಹುದು. ಆದ್ದರಿಂದ, ನಿಮ್ಮ ಜೀವನದಲ್ಲಿ ಯಾರು ದೊಡ್ಡ ಬದಲಾವಣೆ ತರುವವರು ಎಂದು ನೀವು ಭಾವಿಸುತ್ತೀರೋ, ಅವರೊಂದಿಗೆ ಪ್ರಾರಂಭಿಸಿ. ಜೊತೆಗೆ ನೀವು ನಿರ್ಣಯಗಳನ್ನು ಜಾರಿಗೆ ತರುವ ಕೆಲಸ ಮಾಡಲು ಪ್ರಾರಂಭಿಸಿದಾಗ ಕ್ರಮೇಣ ಹೊಸ ಗುರಿಗಳನ್ನು ಸೇರಿಸಿ.
ಸಕಾರಾತ್ಮಕ ಮನೋಭಾವ ಹೊಂದಿರಿ: ನೀವು ನಿಮ್ಮ ನಿರ್ಣಯಗಳನ್ನು ಜಾರಿಗೆ ತರುವ ಕಾರ್ಯವನ್ನು ಕೈ ಬಿಡಲು ಬಯಸುವ  ಸಂದರ್ಭಗಳು ಕೂಡ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ನೀವು ನಿರ್ಣಯವನ್ನು ಏಕೆ ತೆಗೆದುಗೊಂಡಿದ್ದೀರಿ ಮತ್ತು ಅದು ನಿಮಗೆ ಹೇಗೆ  ಲಾಭದಾಯಕ ಎಂಬುದನ್ನು ನೆನಪಿಸಿಕೊಳ್ಳಿ.

ನಿರ್ಣಯಗಳನ್ನು ನಿಜವಾಗಿಸುವ ಚಿತ್ರವನ್ನು ಸದಾ ನೆನಪಿಸಿಕೊಳ್ಳುತ್ತಿರಿ. ಇದರಿಂದ ಈ ಚಿತ್ರ ಮನಸ್ಸಿನೊಳಗೆ ಗಟ್ಟಿಯಾಗಿ ನಿಲ್ಲಲು ನೆರವಾಗುತ್ತದೆ. ಉತ್ಸಾಹಪೂರ್ಣ ಸಂಗೀತ ಆಲಿಸಿ ಅಥವಾ ನಿಮಗೆ ಬೇಸರವಾದಾಗ ಪ್ರೇರಣೆ ನೀಡುವಂತಹ ವಿಡಿಯೊಗಳನ್ನು ವೀಕ್ಷಿಸಿ.

ನಿರ್ಣಯ ಜಾರಿಗೆ ತರುವ ಕಾರ್ಯವನ್ನು ಒಬ್ಬಂಟಿಯಾಗಿ  ಮಾಡಬೇಡಿ: ನಿಮ್ಮ ನಿರ್ಣಯ ಹಂಚಿಕೊಳ್ಳಬಲ್ಲ ಮತ್ತು ಪರಸ್ಪರ ಬೆಂಬಲಿಸುವ ಪಾಲುದಾರರು ಅಥವಾ ಗುಂಪನ್ನು ಹುಡುಕಿಕೊಳ್ಳಿ. ನಿಮ್ಮನ್ನು ಹುರಿದುಂಬಿಸಲು, ನಿಮ್ಮನ್ನು ಜವಾಬ್ದಾರಿಯುತರನ್ನಾಗಿಸಲು ಅಥವಾ ಸವಾಲು ಹಾಕಲು ಜೊತೆಗೆ ಯಾರಾದರೂ ಇದ್ದಲ್ಲಿ ಸಾಧನೆಯ ಈ ಪ್ರಯಾಣವನ್ನು ಹೆಚ್ಚು ಮೋಜಿನದಾಗಿಸುವುದರ ಜೊತೆಗೆ ಹೆಚ್ಚಿನ ಪ್ರತಿಫಲ ಪಡೆಯಬಹುದು.

ಲೇಖಕರು:  ಡಾ. ವಿದ್ಯಾ ಜ್ಯೋತಿ, ಮನೋವೈದ್ಯಶಾಸ್ತç ಸಲಹಾತಜ್ಞರು, ಟ್ರೈಲೈಫ್ ಆಸ್ಪತ್ರೆ

RELATED ARTICLES

Latest News