Sunday, May 5, 2024
Homeರಾಜ್ಯಓದಿದ್ದು ಎಸ್‍ಎಸ್‍ಎಲ್‍ಸಿ, ವಂಚಿಸಿದ್ದು 1 ಕೋಟಿ 10 ಲಕ್ಷ

ಓದಿದ್ದು ಎಸ್‍ಎಸ್‍ಎಲ್‍ಸಿ, ವಂಚಿಸಿದ್ದು 1 ಕೋಟಿ 10 ಲಕ್ಷ

ಆನೇಕಲ್, ಜ.3- ತಾವು ಕೆಲಸಕ್ಕಿದ್ದ ಕಂಪೆನಿಗೆ ವಂಚಿಸಿ ನೈಕಿ ಕಂಪನಿಯ ಶೂಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಅಸ್ಸಾಂ ಮೂಲದ ಮೂವರು ಆರೋಪಿಗಳನ್ನು ಅತ್ತಿಬೆಲೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಮೌಲ್ಯದ ನೈಕಿ ಕಂಪನಿಯ ಶೂಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಈಚರ್ ಕಂಟೈನರ್ ಕ್ಯಾಂಟರ್‍ನ್ನು ಮೌಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಸುಭಾನ್ ಪಾಷ, ಮನ್‍ಸೂರ್ ಅಲಿ, ಶಾಹಿದುಲ್ ರೆಹಮಾನ್‍ನನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗಿದೆ.

ಅಸ್ಸಾಂ ಮೂಲದವರಾದ ಈ ಮೂವರು ಆರೋಪಿಗಳು ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡಿದ್ದು, ಕೆಲಸಕ್ಕಿದ್ದ ಕಂಪೆನಿಯಲ್ಲೇ ಮಾಲೀಕರನ್ನು ನಂಬಿಸಿ, ವಂಚಿಸಿ ಇದೀಗ ಖಾಕಿ ಬಲೆಗೆ ಬಿದ್ದಿದ್ದಾನೆ. ಅತ್ತಿಬೆಲೆ ಪೋಲಿಸ್ ಠಾಣೆ ವ್ಯಾಪ್ತಿಯ ಶೆಟ್ಟಹಳ್ಳಿ ಗ್ರಾಮದ ಬಳಿಯಿರುವ ನೈಕಿ ಗೋಡೌನ್‍ನಿಂದ ಅನುಗೊಂಡನಹಳ್ಳಿ ಗ್ರಾಮದ ಸಮೀಪದಲ್ಲಿರುವ ಮಿಂತ್ರ ಗೋಡೋನ್‍ಗೆ ಈಚರ್ ಕಂಟೈನರ್ ಕ್ಯಾಂಟರ್‍ನಲ್ಲಿ ನೈಕಿ ಕಂಪನಿಗೆ ಸೇರಿದ ಶೂಗಳನ್ನು ಸಾಗಿಸುತ್ತಿದ್ದರು.

ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಬಿಜೆಪಿ ಪ್ರತಿಭಟನೆ: ಡಿಕೆಶಿ

ಆ ಸಂದರ್ಭದಲ್ಲಿ ಕ್ಯಾಂಟರ್‍ನ ಚಾಲಕ ಮಿಂತ್ರ ಗೋಡೌನ್‍ನಲ್ಲಿ ಅನ್‍ಲೋಡ್ ಮಾಡದೆ ವಾಹನ ಸಮೇತ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು. ಪ್ರಕರಣವನ್ನು ಕೈಗೆತ್ತಿಕೊಂಡ ಅತ್ತಿಬೆಲೆ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ಮತ್ತು ಅವರ ತಂಡ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಮೌಲ್ಯದ ನೈಕಿ ಕಂಪನಿಯ ಶೂಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಈಚರ್ ಕಂಟೈನರ್ ಕ್ಯಾಂಟರ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಅಡಿಶಿನಲ್ ಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಮೋಹನ್ ಕುಮಾರ್, ಅತ್ತಿಬೆಲೆ ಪೋಲಿಸ್ ಠಾಣೆಯ ಇನ್ಸ್‍ಪೆಕ್ಟರ್ ರಾಘವೇಂದ್ರ, ಸೂರ್ಯ ಸಿಟಿ ಇನ್ಸ್ ಪೆಕ್ಟರ್ ಮಹಾಜನ್, ಸಬ್ ಇನ್ಸ್ ಪೆಕ್ಟರ್ ಮುರಳಿ, ಪೋಲಿಸರಾದ ಅರುಣ್ ಕುಮಾರ್, ಅಪ್ರೋಜ್ ಖಾನ್, ಮಹೇಶ್, ಇಪ್ರಾನ್, ಮತ್ತಿತರು ಹಾಜರಿದ್ದರು.

RELATED ARTICLES

Latest News