ಶಾಂಘೈ,ಅ.1- ಚೀನಾದ ಅತಿ ದೊಡ್ಡ ನಗರ ಶಾಂಘೈನಲ್ಲಿರುವ ಸೂಪರ್ ಮಾರ್ಕೆಟ್ನಲ್ಲಿ ಚಾಕು ಹಿಡಿದ ದುಷ್ಕರ್ಮಿಯೊಬ್ಬ ದಾಳಿ ನಡೆಸಿದ ಪರಿಣಾಮ ಮೂವರು ಸಾವನ್ನಪ್ಪಿ ಸುಮಾರು 15 ಮಂದಿ ಗಾಯಗೊಂಡಿದ್ದಾರೆ.
ಚೀನಾದ 75 ನೇ ರಾಷ್ಟ್ರೀಯ ದಿನಾಚರಣೆಯ ಮುನ್ನಾದಿನದಂದುಈ ಘಟನೆ ಸಂಭವಿಸಿದೆ.ಕಳೆದ ರಾತ್ರಿ 9.47 ಕ್ಕೆ (ಸ್ಥಳೀಯ ಕಾಲಮಾನ) ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರು ಆತಂಕದ ವಾತಾವರಣವನ್ನು ತಿಳಿಗೊಳಿಸಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ದಾಳಿಕೋರನನ್ನು ಲಿನ್ಎಂಬ 37 ವರ್ಷದ ವ್ಯಕ್ತಿಯಾಗಿದ್ದು ಪೊಲೀಸರು ಆತನನ್ನುಬಂ„ಸಿದ್ದಾರೆ.ಆರೋಪಿ ಚಾಕು ಹಿಡಿದ ಸೂಪರ್ ಮಾರ್ಕೆಟ್ನಲ್ಲಿ ಸುತ್ತಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗದಲ್ಲಿ ಹರಿದಾಡಿದೆ.
ಸುಮಾರು ಹದಿನೆಂಟು ಜನರಿಗೆ ಆತ ಚಾಕುವಿನಿಂದ ಇರಿದಿದ್ದು ಅದರಲ್ಲಿ ಮೂವರು ಮೃತಪಟ್ಟಿದ್ದಾರೆ.ಇತರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕ್ಸಿನ್ಹುವಾ ವರದಿ ತಿಳಿಸಿದೆ.
ಶಾಂಘೈ ಪೊಲೀಸರ ಹೇಳಿಕೆಯ ಪ್ರಕಾರ, ಲಿನ್ ವೈಯಕ್ತಿಕ ಹಣಕಾಸಿನ ವಿವಾದಗಳಿಂದ ಕೋಪಗೊಂಡು ಶಾಂಘೈಗೆ ಬಂದು ಈ ಕೃತ್ಯ ನಡೆಸಿದಾನೆ ಆದರೆ ಈತನ ಮೂಲ ಸ್ಥಳವನ್ನು ಪೊಲೀಸರು ಬಹಿರಂಗಪಡಿಸಿಲ್ಲ.ಇಂದು 75ನೇ ರಾಷ್ಟ್ರೀಯ ದಿನವನ್ನು ವಾರವಿಡೀ ರಜೆಯೊಂದಿಗೆ ಆಚರಿಸಲು ಚೀನಾ ಸಜ್ಜಾಗುತ್ತಿರುವಾಗ ನಿನ್ನೆ ರಾತ್ರಿ ದಾಳಿ ನಡೆದಿದೆ.