Friday, November 22, 2024
Homeಬೆಂಗಳೂರುಶಾರ್ಟ್ ಸಕ್ರ್ಯೂಟ್‍ನಿಂದ ಸಾವನ್ನಪಿದ ಮಗು

ಶಾರ್ಟ್ ಸಕ್ರ್ಯೂಟ್‍ನಿಂದ ಸಾವನ್ನಪಿದ ಮಗು

ಬೆಂಗಳೂರು, ಏ.15- ಮಗುವನ್ನು ಕೊಠಡಿಯಲ್ಲಿ ಮಲಗಿಸಿ ಬೀಗ ಹಾಕಿಕೊಂಡು ದಂಪತಿ ಅಪಾರ್ಟ್ಮೆಂಟ್ನಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಶಾರ್ಟ್ ಸಕ್ರ್ಯೂಟ್ ಉಂಟಾಗಿ ಮಗು ಮೃತಪಟ್ಟಿರುವ ಘಟನೆ ಆರ್.ಟಿ. ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ಪೂರಾನ್ ಖಂಡಕ್- ಲಕ್ಷ್ಮೀ ದಂಪತಿಯ ನಾಲ್ಕೂವರೆ ವರ್ಷದ ಅನೂಪ್ ಮೃತ ಪಟ್ಟ ಮಗು.

ಸುಲ್ತಾನ್ ಪಾಳ್ಯದಲ್ಲಿರುವ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ನ ನೆಲಮಹಡಿಯ ಮನೆಯಲ್ಲಿ ಈ ಕುಟುಂಬ ವಾಸವಾಗಿದ್ದು, ಅಲ್ಲದೆ ಅಪಾರ್ಟ್ಮೆಂಟ್ನ ಟೆರೆಸ್ನಲ್ಲೂ ಸಹ ಸಣ್ಣ ರೂಂಅನ್ನು ಇವರಿಗೆ ನೀಡಲಾಗಿತ್ತು.

ಪತಿ ಸೆಕ್ಯೂರಿಟಿ ಕೆಲಸ ಹಾಗೂ ಪತ್ನಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದಾರೆ.ನಿನ್ನೆ ಎಂದಿನಂತೆ ಮಗುವಿಗೆ ಊಟ ಮಾಡಿಸಿ, ಫ್ಯಾನ್ ಹಾಕಿ ಮಗುವನ್ನು ಟೆರೆಸ್ನ ರೂಂನಲ್ಲಿ ಮಲಗಿಸಿ ಬಾಗಿಲಿಗೆ ಬೀಗ ಹಾಕಿಕೊಂಡು ಲಕ್ಷ್ಮೀ ಅವರು ಕೆಲಸದಲ್ಲಿ ನಿರತರಾಗಿದ್ದಾರೆ. ಸಂಜೆ ವೇಳೆಗೆ ಟೆರೆಸ್ ರೂಂನಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಮಗು ಮೃತ ಪಟ್ಟಿರುವುದು ದಂಪತಿಯ ಗಮನಕ್ಕೆ ಬಂದಿಲ್ಲ.

ಕೆಲಸ ಮುಗಿಸಿಕೊಂಡು ಟೆರೆಸ್ಗೆ ಹೋದಾಗ ರೂಂ ಒಳಗಿನಿಂದ ಹೊಗೆ ಬರುತ್ತಿರುವುದು ಗಮನಿಸಿ ತಕ್ಷಣ ಬೀಗ ತೆಗೆದು ನೋಡುವಷ್ಟರಲ್ಲಿ ಮಗು ಮೃತ ಪಟ್ಟಿತ್ತು.ಸುದ್ದಿ ತಿಳಿದು ಆರ್.ಟಿ.ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಶಾರ್ಟ್ ಸಕ್ರ್ಯೂಟ್ಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದಾರೆ.

RELATED ARTICLES

Latest News